ಜುಲೈ 24ರವರೆಗೆ ಪಾಕ್ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧ ವಿಮಾನಯಾನ ಸಚಿವಾಲಯದಿಂದ ಅಧಿಕೃತವಾಗಿ ಘೋಷಣೆ

58

ಇಸ್ಲಾಮಾಬಾದ್: ಭಾರತೀಯ ವಿಮಾನಗಳ ಮೇಲಿನ ವಾಯುಪ್ರದೇಶ ನಿರ್ಬಂಧವನ್ನು ಮತ್ತೊಂದು ತಿಂಗಳು ವಿಸ್ತರಿಸಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.

ಜುಲೈ 24ರ ಬೆಳಗ್ಗೆ 5-29ರವರೆಗೂ ಪಾಕಿಸ್ತಾನದ ವಿಮಾನಗಳಿಗೆ ವಾಯು ಪ್ರದೇಶವನ್ನು ವಿಸ್ತರಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ರಾತ್ರಿ ಇದನ್ನು ಅಧಿಕೃತವಾಗಿ ಘೋಷಿಸಿದೆ.

ಭಾರತ ಕೂಡಾ ಜುಲೈ 24ರ ಬೆಳಗ್ಗೆ 5-29ರವರೆಗೂ ಪಾಕಿಸ್ತಾನದ ವಿಮಾನಗಳಿಗೆ ವಾಯು ಪ್ರದೇಶ ನಿರ್ಬಂಧವನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ಹೇಳಿದೆ

. ಇದಕ್ಕೂ ಮುನ್ನಾ ಪಾಕಿಸ್ತಾನ ಇದೇ ದಿನದವರೆಗೂ ಭಾರತದ ವಿಮಾನಗಳಿಗೆ ತನ್ನ ವಾಯುಪ್ರದೇಶ ನಿರ್ಭಂದವನ್ನು ವಿಸ್ತರಿಸಿರುವುದಾಗಿ ಘೋಷಿಸಿತ್ತು.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಎರಡೂ ದೇಶಗಳ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಏಪ್ರಿಲ್ 23 ರಂದು ಒಂದು ತಿಂಗಳ ಕಾಲ ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಪಾಕಿಸ್ತಾನ ನಿರ್ಬಂಧಿಸಿತ್ತು.

ನಂತರ, ಮೇ 7 ರಂದು ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿ, ಪಾಕಿಸ್ತಾನ ಆಕ್ರಮಿತ ಪ್ರದೇಶಗಳಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದ್ದರಿಂದ ನಾಲ್ಕು ದಿನಗಳ ಸಂಘರ್ಷದಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದ್ದರಿಂದ ಮೇ 23 ರಂದು ಅದನ್ನು ಮತ್ತೊಂದು ತಿಂಗಳು ವಿಸ್ತರಿಸಲಾಯಿತು.

ಭಾರತೀಯ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧ ಇನ್ನೊಂದು ತಿಂಗಳು ವಿಸ್ತರಿಸಿದ ಪಾಕ್ ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರವು ಹೊರಡಿಸಿದ ನೋಟಾಮ್ ಅಥವಾ ವಾಯುಪಡೆಗಳಿಗೆ ಸೂಚನೆಯ ಪ್ರಕಾರ, ನಿಷೇಧವನ್ನು ಜೂನ್ 23 ರಿಂದ ಜುಲೈ 23 ರವರೆಗೆ ವಿಸ್ತರಿಸಲಾಗಿದೆ.

ಭಾರತೀಯ ನೋಂದಾಯಿತ ವಿಮಾನಗಳು ಮತ್ತು ಮಿಲಿಟರಿ ವಿಮಾನಗಳು ಸೇರಿದಂತೆ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳು/ನಿರ್ವಾಹಕರು ನಿರ್ವಹಿಸುವ/ಮಾಲೀಕತ್ವದ ಅಥವಾ ಗುತ್ತಿಗೆ ಪಡೆದ ವಿಮಾನಗಳಿಗೆ ಪಾಕಿಸ್ತಾನ ವಾಯುಪ್ರದೇಶ ಲಭ್ಯವಿಲ್ಲ” ಎಂದು ಹೇಳಿದೆ.

Leave a comment

Leave a Reply

Your email address will not be published. Required fields are marked *

Related Articles

ಭಾರತ ವಿರುದ್ಧ ಯುದ್ಧಕ್ಕೂ ಹಿಂಜರಿಯುವುದಿಲ್ಲ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಉದ್ಧಟತನ

“ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದದ ವಿವಾದದ ನಡುವೆ ಭಾರತಕ್ಕೆ ಪಾಕಿಸ್ತಾನ ಮತ್ತೊಮ್ಮೆ ಯುದ್ಧದ ಬೆದರಿಕೆ ಹಾಕಿದೆ....

ತನ್ನ ಪ್ರದೇಶಗಳಿಗೆ ಇಸ್ಲಾಮಿ ಹೆಸರುಗಳ ಕೈ ಬಿಟ್ಟು ಹಿಂದೂ ಹೆಸರು ಮರುನಾಮಕರಣ, ಬದಲಾಗುತ್ತಿದೇಯಾ ಪಾಕಿಸ್ತಾನ??

ಲಾಹೋರ್: ಭಾರತದ ಪ್ರಧಾನಿ ಮೋದಿ ಅಖಂಡ ಭಾರತದ ಕುರಿತು ಮಾಡಿದ್ದ ಭಾಷಣ ಹಸಿರಾಗಿರುವಂತೆಯೇ ಅತ್ತ ಪಾಕಿಸ್ತಾನದಲ್ಲಿ...

ದೇಶ ರಕ್ಷಣೆಗೆ 92 ಶತಕೋಟಿ ಡಾಲರ್ ಬಜೆಟ್ ವಿಶ್ವದ 5ನೇ ರಾಷ್ಟ್ರವಾಗಿ ಎಲೈಟ್ ಗ್ರೂಪ್ ಸೇರಿದ ಭಾರತ!

ನವದೆಹಲಿ: ರಕ್ಷಣಾ ವಿಭಾಗದಲ್ಲಿ ಭಾರತ ಐತಿಹಾಸಿಕ ಮೈಲುಗಲ್ಲು ಸಾಧಿಸಿದ್ದು, ದೇಶದ ರಕ್ಷಣಾ ಬಜೆಟ್ 92 ಶತಕೋಟಿ...

ಅಮೆರಿಕ ಶ್ವೇತಭವನದಲ್ಲಿ ಔತಣಕೂಟ ವೇಳೆ ಶೂಟೌಟ್ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್,

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದ ಆಡಳಿತ ಶಕ್ತಿಕೇಂದ್ರ ವೈಟ್ ಹೌಸ್ ನಲ್ಲಿ ಕ್ಷಿಪ್ರ ಬೆಳವಣಿಗೆಯೊಂದು ನಡೆದಿದೆ....