ಯುವಕನ ಮೇಲೆ ತಲ್ವಾರ್ ದಾಳಿ ಹಲ್ಲೆ ಜಾತಿನಿಂದನೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು

69

ಚರಣ್‌ (22) ಕೌಡೂರು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ: 21.06.2025 ರಂದು ರಾತ್ರಿ 8.30 ಗಂಟೆಗೆ ಬೈಲೂರು ಪಳ್ಳಿ ಕ್ರಾಸ್‌ ಬಳಿ ಇರುವ ಸೂಪರ್‌ ಮಾರ್ಕೆಟ್‌ ಬಳಿ ನಿಂತುಕೊಂಡಿರುವಾಗ, ಆಪಾದಿತರಾದ ಅಶ್ವಿನ್ ಮತ್ತು ವಿಷ್ಣು ಎಂಬವರು ಕುಡಿದುಕೊಂಡು ಬಂದು ಚರಣ್ ಜೊತೆ ಜೋರಾಗಿ ಮಾತನಾಡಿ ಹೋಗಿದ್ದು.

ದಿನಾಂಕ 22.06.2025 ರಂದು ಬೆಳಿಗ್ಗೆ ಪಂಚನಬೆಟ್ಟು ಎಂಬಲ್ಲಿ ಕೆಲಸ ಮಾಡುತ್ತಿರುವಾಗ, ಆಪಾದಿತ ಅಶ್ವಿನ್‌ ಎಂಬಾತನು ಪದೇ ಪದೇ ಪೋನ್‌ ಮಾಡುತ್ತಿದ್ದು, ನಂತರ ಮದ್ಯಾಹ್ನ 12.30 ಗಂಟೆಗೆ ಆಪಾದಿತ ಅಶ್ವಿನ್‌ ಎಂಬಾತನು ಚರಣ್ ರಿಗೆ ಪೋನ್‌ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುತ್ತಾರೆ.

ಸಂಜೆ 6.00 ಗಂಟೆಗೆ ಪಿರ್ಯಾದಿದಾರರಿಗೆ ಆಪಾದಿತ ಅಶ್ವಿನ್‌ ಎಂಬವನು ಆತನ ಮೊಬೈಲ್‌ನಿಂದ ವಿಷ್ಣು ಮತ್ತು ಮಂಜುನಾಥ ಎಂಬವರೊಂದಿಗೆ ಸೇರಿಕೊಂಡು ನೀನು ಜೋಡುರಸ್ತೆಗೆ ಬರುವಂತೆ ಹೇಳಿದಾಗ, ತಾನು ಬರುವುದಿಲ್ಲ,

ರಂಗನಪಲ್ಕೆ ಎಂಬಲ್ಲಿಗೆ ಬರುವಂತೆ ತಿಳಿಸಿದ್ದು, ಚರಣ್ ಅವರ ಚಿಕ್ಕಪ್ಪ ಜಗನ್ನಾಥ್‌, ಸುಂದರ್‌, ಕಿರಣ್‌, ರವಿ ಮತ್ತು ಕಿರಣ್‌ ಎಂಬವರೊಂದಿಗೆ ರಾತ್ರಿ ಸಮಯ ಸುಮಾರು 7.45 ಗಂಟೆಗೆ ರಂಗಪಲ್ಕೆಯ ಕೀರ್ತಿ ಬಾರ್‌ನ ಪಕ್ಕದ ರಸ್ತೆಯಲ್ಲಿ ನಿಂತುಕೊಂಡಿರುವಾಗ,

ಆಪಾದಿತರಾದ ಬೈಲೂರಿನ ಸುಜಿತ್‌, ವಿಷ್ಣು, ಅಶ್ವಿನ್‌, ಮಂಜುನಾಥ ಜಾರ್ಕಳ, ಯಶವಂತ್‌ ಹಾಗೂ ಇನ್ನೊಬ್ಬ ವ್ಯಕ್ತಿಯು ಮೋಟಾರ್‌ ಸೈಕಲ್‌ನಲ್ಲಿ ಬಂದು ಅಕ್ರಮ ಕೂಟ ಸೇರಿಕೊಂಡು ಆಪಾದಿತ ವಿಷ್ಣು ಎಂಬಾತನು ಚರಣ್ ಗೆ ತಲವಾರಿನಿಂದ ಹೊಡೆಯಲು ಬಂದಿದ್ದು, ಜಗನ್ನಾಥ್‌ ಮತ್ತು ಸುಂದರ್‌ ರವರು ತಡೆಯಲು ಹೋದಾಗ,

ವಿಷ್ಣು ಎಂಬಾತನು ಜಗನ್ನಾಥ್‌ರವರಿಗೆ ಮುಖಕ್ಕೆ ಕೈಯಿಂದ ಹೊಡೆದ ಪರಿಣಾಮ ಎಡಬದಿಯ ಹಲ್ಲು ಮುರಿದಿದ್ದು, ಆಪಾದಿತರಾದ ಸುಜಿತ್‌ ಮತ್ತು ವಿಷ್ಣು ರವರು ಸುಂದರ್‌ ರವರಿಗೆ ಕೈಯಿಂದ ಎದೆಗೆ ಹೊಡೆದಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಪ್ರಕರಣ ದಾಖಲಾಗಿರುತ್ತದೆ

Leave a comment

Leave a Reply

Your email address will not be published. Required fields are marked *

Related Articles

ಶ್ರೀ ಧೂಮಾವತಿ ಯುವಕ ಮಂಡಲ ನಿಟ್ಟೂರು ಆಶ್ರಯದಲ್ಲಿ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿಷ್ಣುಮೂರ್ತಿ ನಗರ ನಿಟ್ಟೂರು, ಶ್ರೀಹರಿ ನೇತ್ರಾಲಯ, ಕಾರ್ತಿಕ್ ಎಸ್ಟೇಟ್ ಅಂಬಲಪಾಡಿ...

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...

ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಶಿಶಿರ್ ಶೆಟ್ಟಿ ಆಯ್ಕೆ

“ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘವು ಪುನರ್...

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...