ನಟ ರಾಮ್ ಚರಣ್ ಅಭಿನಯದ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ನೀರಿನ ಟ್ಯಾಂಕರ್ ಸ್ಫೋಟ ಹಲವರಿಗೆ ಗಾಯ

70

“ತೆಲುಗಿನ ʻದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಭಾರೀ ಅವಘಡ ಸಂಭವಿಸಿದೆ. ಚಿತ್ರೀಕರಣದ ವೇಳೆ ನೀರಿನ ಟ್ಯಾಂಕರ್‌ ಸ್ಫೋಟಗೊಂಡು , ಪ್ರವಾಹ ರೀತಿಯಲ್ಲಿ ನೀರು ನುಗ್ಗಿದ ಪರಿಣಾಮ ಹಲವರು ಗಾಯಗೊಂಡಿದ್ದಾರೆ.


ನೀರಿನ ದೊಡ್ಡ ಟ್ಯಾಂಕರ್‌ ಒಡೆದು ಪ್ರವಾಹ ಸೃಷ್ಟಿಯಾದ ಪರಿಣಾಮ ಸಹಾಯಕ ಕ್ಯಾಮೆರಾಮೆನ್‌ ಮತ್ತು ಇನ್ನೂ ಕೆಲವು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಕುರಿತ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ

ಶಂಷಾಬಾದ್ ಬಳಿ ಸಿನಿಮಾ ಶೂಟಿಂಗ್‌ಗಾಗಿ ದೊಡ್ಡ ನೀರಿನ ಟ್ಯಾಂಕರ್‌ ನಿರ್ಮಾಣ ಮಾಡಲಾಗಿತ್ತು. ಭಾರೀ ಒತ್ತಡದಿಂದಾಗಿ ನೀರಿನ ಟ್ಯಾಂಕರ್‌ ಸ್ಫೋಟಗೊಂಡು ಪ್ರವಾಹವೇ ಸೃಷ್ಟಿಯಾಯ್ತು. ಭಾರೀ ಪ್ರಮಾಣದ ನೀರಿನ ವೇಗಕ್ಕೆ ಸಿಕ್ಕಿ ಕ್ಯಾಮೆರಾಮೆನ್‌, ಇತರ ಸಿಬ್ಬಂದಿ ಗಾಯಗೊಂಡಿದ್ದಾರೆ.

ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಸ್ತುತ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಸಮಯದಲ್ಲಿ ರಾಮ್ ಚರಣ್ ಕೂಡ ಸೆಟ್‌ನಲ್ಲಿದ್ದರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲವಾದರೂ, ಚಿತ್ರದ ಚಿತ್ರೀಕರಣವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ನಮ್ಮಿಂದ ಬಿಜೆಪಿ ಹಾಳಾಗಿಲ್ಲ: ನಮ್ಮಿಂದಾಗಿ ಮಂತ್ರಿಯಾಗಿ ಲಂಚ ಪಡೆದು ನೀವು ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ನೀವು ಕಾರಣರಾದೀರಿ ಈಶ್ವರಪ್ಪಗೆ:: ಬಿ ಸಿ ಪಾಟೀಲ್ ತಿರುಗೇಟು

ಬೆಂಗಳೂರು: ಈ ಹಿಂದೆ ದುಡ್ಡು ಕೊಟ್ಟು ಕರೆತಂದ 17 ಕಾಂಗ್ರೆಸ್ ಶಾಸಕರಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ...

ಪಿ ಎಚ್ ಡಿ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿವಿ ಪ್ರಾಧ್ಯಾಪಕನ ಅಮಾನತು

“ಧಾರವಾಡ: ಪಿ ಎಚ್ ಡಿ  ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ...

ಕೊಲ್ಲೂರು ದೇವಿಗೆ 1 ಕೆಜಿ 600 ಗ್ರಾಮದ ಬೆಳ್ಳಿ ಖಡ್ಗ, ರೇಷ್ಮೆ ಸೀರೆ, ಫಲ-ತಾಂಬೂಲ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್

“ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಶುಕ್ರವಾರ ಉಡುಪಿ ಜಿಲ್ಲೆಯ ಪ್ರಸಿದ್ಧ ಮೂಕಾಂಬಿಕೆ...

ಡಬಲ್ ಡೆಕ್ಕರ್ ಯೋಜನೆಗೆ ಅನುಮತಿ, ಮೆಟ್ರೋ ಮೂರನೇ ಹಂತ ಯೋಜನೆಗಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್

“ನವದೆಹಲಿ: ಸಿಎಂ ಡಿಕೆ ಶಿವಕುಮಾರ್ ಅವರು ಇಂದು ಕೇಂದ್ರ ಇಂಧನ, ವಸತಿ ಮತ್ತು ನಗರಾಭಿವೃದ್ಧಿ ಸಚಿವ...