ಕೇದಾರನಾಥ್ ಟೇಕಾಫ್ ವೇಳೆ ತಾಂತ್ರಿಕ ದೋಷ ಹೆದ್ದಾರಿಯಲ್ಲಿ ತುರ್ತುಭೂ ಸ್ಪರ್ಶ ಮಾಡಿದ ಹೆಲಿಕಾಪ್ಟರ್ ಕಾರಿಗೆ ಡಿಕ್ಕಿ

3

“ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಶನಿವಾರ ಉತ್ತರಾಖಂಡದ ಸಿರ್ಸಿ ಹೆಲಿಪ್ಯಾಡ್‌ನಿಂದ ಟೇಕ್ ಆಫ್ ಆಗುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ನಂತರ ರುದ್ರಪ್ರಯಾಗ ಜಿಲ್ಲೆಯ ಹೆದ್ದಾರಿಯಲ್ಲೇ ತುರ್ತು ಭೂಸ್ಪರ್ಶ ಮಾಡಿದೆ.

ವಿಮಾನದ ಒಂದು ಭಾಗವು ಕೆಳಗೆ ರಸ್ತೆಯಲ್ಲಿ ಪಾರ್ಕ್ ಮಾಡಲಾಗಿದ್ದ ಕಾರಿಗೆ ತಗುಲಿದ್ದು, ಕಾರು ಜಖಂಗೊಂಡಿದೆ. ಪೈಲಟ್ ಸೇರಿದಂತೆ ಖಾಸಗಿ ಹೆಲಿಕಾಪ್ಟರ್ ನಲ್ಲಿದ್ದ ಎಲ್ಲಾ ಆರು ಜನ ಸುರಕ್ಷಿತರಾಗಿದ್ದಾರೆ ಎಂದು ವರದಿಯಾಗಿದೆ.


ಇತ್ತೀಚಿನ ದಿನಗಳಲ್ಲಿ ಚಾರ್ ಧಾಮ್ ಮಾರ್ಗದಲ್ಲಿ ಹೆಲಿಕಾಪ್ಟರ್ ಅಪಘಾತಗಳು ಹೆಚ್ಚುತ್ತಿದ್ದು, ಕಳೆದ ತಿಂಗಳು ಮೇ 8 ರಂದು ಉತ್ತರಕಾಶಿಯಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಪೈಲಟ್ ಸೇರಿದಂತೆ 6 ಯಾತ್ರಿಕರು ಸಾವನ್ನಪ್ಪಿದ್ದರು.

ಏರೋಟ್ರಾನ್ಸ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್‌ನ ಹೆಲಿಕಾಪ್ಟರ್ ಉತ್ತರಕಾಶಿಯ ಗಂಗಾನಿಯಲ್ಲಿ ಅಪಘಾತಕ್ಕೀಡಾಗಿತ್ತು.

ಕ್ರಿಸ್ಟಲ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆಗೆ ಸೇರಿದ ಈ ಹೆಲಿಕಾಪ್ಟರ್(AW 119) ರುದ್ರಪ್ರಯಾಗ ಜಿಲ್ಲೆಯ ಬಡಾಸು ಪ್ರದೇಶದ ಹೆಲಿಪ್ಯಾಡ್‌ನಿಂದ ಮಧ್ಯಾಹ್ನ 12.52 ಕ್ಕೆ ಹೊರಟಿತ್ತು.

ಆದರೆ ಟೇಕ್ ಆಫ್ ನಂತರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ ಹೆದ್ದಾರಿಯಲ್ಲಿಯೇ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ಹೀಗಾಗಿ ರಸ್ತೆಯಲ್ಲಿ ನಿಂತಿದ್ದ ಕಾರಿಗೆ ಹೆಲಿಕಾಪ್ಟರ್ ನ ಬಾಲ ತಗುಲಿದೆ ಎಂದು ಮೂಲವೊಂದು ತಿಳಿಸಿದೆ.

ಕಾರು ಕೂಡ ನಜ್ಜುಗುಜ್ಜಾಗಿದೆ” ಎಂದು ಅವರು ಹೇಳಿದ್ದಾರೆ. ರಾಜ್ಯ ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ, “ವಿಮಾನದಲ್ಲಿದ್ದ ಎಲ್ಲಾ ಐದು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.

Leave a comment

Leave a Reply

Your email address will not be published. Required fields are marked *

Related Articles

ಬೆಂಗಳೂರು ಮೆಟ್ರೋದಲ್ಲಿ ನಂದಿನಿ ಹಾಗೂ ಅಮೂಲ್ ಮಳಿಗೆಗಳ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಬಿ ಎಂ ಆರ್ ಸಿ ಎಲ್

“ಬೆಂಗಳೂರು ಮೆಟ್ರೊ ನಿಲ್ದಾಣಗಳಲ್ಲಿ ಅಮುಲ್‌ಗೆ ಮಳಿಗೆ ಹಂಚಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು...

ರೊಟರಾಕ್ಟ್ ಕ್ಲಬ್ ಉಡುಪಿಯಿಂದ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ಸೇವಾಕಾರ್ಯ

ರೊಟರಾಕ್ಟ್ ಕ್ಲಬ್ ಉಡುಪಿಯ ವಾರ್ಷಿಕ ಜಿಲ್ಲಾ ರೊಟರಾಕ್ಟ್ ಪ್ರತಿನಿಧಿಯ ಅಧಿಕೃತ ಭೇಟಿಯ ಪ್ರಯುಕ್ತ, ಕುಕ್ಕಿಕ್ಕಟ್ಟೆಯ ಶ್ರೀ...

ಆಪರೇಷನ್ ಸಿಂಧೂರ್ ಸರ್ವ ಪಕ್ಷಗಳ ಸಭೆ ವಿಪಕ್ಷಗಳು ಭಾಗಿ ದೇಶದ ಹಿತದ್ರಷ್ಠಿಯಿಂದ ಸರಕಾರದ ಬೆನ್ನಿಗೆ ನಿಂತ ರಾಜಕೀಯ ಪಕ್ಷಗಳು

“ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ...

ನೀರಿನ ಬಾಟಲ್ ಆರೋಗ್ಯಕ್ಕೆ ಹಾನಿಕರ; ಅಸುರಕ್ಷಿತ ಬಾಟಲ್ ನೀರು ಪೂರೈಕೆದಾರರ ವಿರುದ್ಧ ಕ್ರಮ:ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಮಿನರಲ್ ವಾಟರ್ ಬಾಟಲ್ ಗಳಲ್ಲಿಯೂ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, “ಅಸುರಕ್ಷಿತ” ಮತ್ತು “ಕಳಪೆ ಗುಣಮಟ್ಟದ” ಬಾಟಲ್...