ಖ್ಯಾತ ಉದ್ಯಮಿ  ಶ್ರೀಮತಿ ಅಮೃತಾ ಹರೀಶ್ ಭಟ್ ರಿಗೆಒಲಿದ 2025 ನೇ ಸಾಲಿನ ಪ್ರತಿಷ್ಠಿತ ಆರ್ಯಭಟ  ಅಂತರಾಷ್ಟ್ರೀಯ ಪ್ರಶಸ್ತಿ

72

ಉಡುಪಿ ರಂಗಭೂಮಿಯ ಚಿತ್ರ ನಟ, ನಿರ್ದೇಶಕ, ಬರಹಗಾರ ಹರೀಶ್ ಭಟ್ಟ ನೀನಾಸಂ ಅವರ ಪತ್ನಿ ಅಮೃತಾ ಹರೀಶ್ 2025ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ

ಉದ್ಯಮಿ‌ ಆಗಿರವ ಅಮೃತಾ ಹರೀಶ್ ಅವರ ಸಾಮಾಜಿಕ ಕೈಂಕರ್ಯಗಳಿಗೆ ಈ‌ ಪ್ರಶಸ್ತಿ ಬಂದಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ‌ ಸ್ವೀಕರಿಸಿದರು.

ವಿಲ್‌ಕ್ರಿಯೇಶನ್ಸ ಕಂಪನಿಯ ಸ್ಥಾಪಕಿ ಆಗಿರುವ ಅಮೃತಾ, ಕಂಟೆಂಟ್ ಕ್ರಿಯೇಟರ್, ಬರಹಗಾರ್ತಿ ಕೂಡ ಹೌದು. “ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ” ಕುರಿತು ಪ್ರಮಾಣಿತ ತರಬೇತುದಾರರು.ಇವರು ಕರ್ನಾಟಕ ಮಾಧ್ಯಮ ಕಾರ್ಮಿಕ ಸಂಘದ ಡಿಜಿಟಲ್ ವಿಭಾಗದ ವಿಭಾಗೀಯ ಅಧ್ಯಕ್ಷರಾಗಿದ್ದಾರೆ.

ಅಮೃತಾರ “ಡ್ರಾಮಾಯಣ” ಎಂಬ ಪ್ರಸಿದ್ಧ ಹಾಸ್ಯ ನಾಟಕ ಜನಪ್ರಿಯವಾಗಿದೆ.ಕಿರುಚಿತ್ರಗಳು ಮತ್ತು ಫೀಚರ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ವ್ಯಕ್ತಿಯ ಹಸ್ತಾಕ್ಷರವನ್ನು ಪರಿಗಣಿಸಿ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಪರಿಣಿತಿ ಹೊಂದಿದ್ದು, ಸುಮಾರು 2000 ಪ್ರಕರಣವನ್ನು ಪರಿಹರಿಸಿದ್ದಾರೆ. ಪೋಲಿಸರೊಂದಿಗೆ ಕೈಜೋಡಿಸಿ “ಸುರಕ್ಷಾ ಆಪ್” ಜಾಗೃತಾ ಅಭಿಯಾನಗಳಲ್ಲಿ ಭಾಗವಹಿಸಿದ್ದಾರೆ

.ಮಹಿಳಾ ಉದ್ಯಮಿಗಳ ಅಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದಾರೆ.ಅನೇಕ ವರ್ಷದಿಂದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ.

ಇವರಿಗೆ‌ ಗೋಲ್ಡನ್ ಸ್ಟಾರ್ ವುಮನ್ ಅವಾರ್ಡ್, ಮಹಿಳಾ ರತ್ನ ಪ್ರಶಸ್ತಿಗಳು ಸೇರಿದಂತೆ ಅನೇಕ‌ಪ್ರಶಸ್ತಿ ಪುರಸ್ಕಾರಗಳು ಸಂದಿದೆ.

Leave a comment

Leave a Reply

Your email address will not be published. Required fields are marked *

Related Articles

ಪಡುಬಿದ್ರಿ  ಕಡಲು ಕೊರೆತದಿಂದ ರಕ್ಷಣೆಗೆ  ತಡೆಗೋಡೆ ನಿರ್ಮಾಣಕ್ಕೆ ಸಚಿವ ಯು.ಟಿ. ಖಾದರ್ ಅವರಿಗೆ ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ವಿಶ್ವಾಸ ವಿ ಅಮೀನ್ ಮನವಿ

ಪಡುಬಿದ್ರಿ, ಜು. 4:** ಉಡುಪಿ ಜಿಲ್ಲೆಯ ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡಿಪಟ್ಟಣ ಪ್ರದೇಶದಲ್ಲಿ ತೀವ್ರಗೊಳ್ಳುತ್ತಿರುವ...

ಕಾರ್ಕಳ ಟೈಗರ್ಸ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ರಕ್ತದೊತ್ತಡ–ಮಧುಮೇಹ ತಪಾಸಣೆ ಶಿಬಿರ

ಕಾರ್ಕಳ ಟೈಗರ್ಸ್ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹತ್...

ಶ್ರೀ ಧೂಮಾವತಿ ಯುವಕ ಮಂಡಲ ನಿಟ್ಟೂರು ಆಶ್ರಯದಲ್ಲಿ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿಷ್ಣುಮೂರ್ತಿ ನಗರ ನಿಟ್ಟೂರು, ಶ್ರೀಹರಿ ನೇತ್ರಾಲಯ, ಕಾರ್ತಿಕ್ ಎಸ್ಟೇಟ್ ಅಂಬಲಪಾಡಿ...

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...