ಮುಖ್ಯ ವಿಷಯಕ್ಕೆ ಹೋಗಿ
The Karnataka Today
27 Sept
ಸುದ್ದಿಯಲ್ಲಿ
ಕರಾವಳಿ

ಅಗ್ರಜ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : ಸದಸ್ಯರಿಗೆ ಶೇ 15% ಡಿವಿಡೆಂಡ್ ಘೋಷಣೆ

ಉಡುಪಿ: ಅಗ್ರಜ ಸೌಹಾರ್ದ ಸಹಕಾರಿ ಸಂಘ(ನಿ), ಉಡುಪಿ ಇದರ ವಾರ್ಷಿಕ ಮಹಾಸಭೆಯು ಬನ್ನಂಜೆಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಸಹಕಾರಿಯ ಅಧ್ಯಕ್ಷರಾದ ಶ್ರೀ ನವೀನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ 2025–26ನೇ ಸಾಲಿನ ವಾರ್ಷಿಕ ವ...

ಸಂಪಾದಕ· 1 ನಿಮಿಷ ಓದು
ಅಗ್ರಜ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : ಸದಸ್ಯರಿಗೆ ಶೇ 15% ಡಿವಿಡೆಂಡ್ ಘೋಷಣೆ
ಹಂಚಿಕೊಳ್ಳಿ:

ಉಡುಪಿ: ಅಗ್ರಜ ಸೌಹಾರ್ದ ಸಹಕಾರಿ ಸಂಘ(ನಿ), ಉಡುಪಿ ಇದರ ವಾರ್ಷಿಕ ಮಹಾಸಭೆಯು ಬನ್ನಂಜೆಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಸಹಕಾರಿಯ ಅಧ್ಯಕ್ಷರಾದ ಶ್ರೀ ನವೀನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ 2025–26ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಲಾಗಿದ್ದು, ಸಂಘವು ಸುಮಾರು ₹11.75 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ₹6.45 ಲಕ್ಷ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ನೀಡುವುದಾಗಿ ಘೋಷಿಸಲಾಯಿತು.

ಸಹಕಾರಿಯ ಉಪಾಧ್ಯಕ್ಷರಾದ ಶ್ರೀ ಮನೀಶ್ ಭಟ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಗಣೇಶ್ ಎನ್. ಕೋಟ್ಯಾನ್ ಅವರು ವಾರ್ಷಿಕ ವರದಿಯನ್ನು ಮಂಡಿಸಿ, ಸಂಘದ ಆರ್ಥಿಕ ಪ್ರಗತಿ ಹಾಗೂ ವಿವಿಧ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಸಂಘದ ಕಾನೂನು ಸಲಹೆಗಾರರಾದ ಶ್ರೀ ಶ್ರೀಶ ಆಚಾರ್ ಹಾಗೂ ಹಿರಿಯ ಸದಸ್ಯರಾದ ಶ್ರೀ ಯು ರತ್ನಾಕರ್ ಅಮೀನ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಭಿವೃದ್ಧಿಗೆ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಪಿಗ್ಮಿ ಹಾಗೂ ಆರ್.ಡಿ. ಸಂಗ್ರಹಕಾರರನ್ನೂ ಗೌರವಿಸಲಾಯಿತು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರು ಹಾಗೂ ಸಿಬ್ಬಂದಿಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಹಿರಿಯ ಸದಸ್ಯರಾದ ಶ್ರೀ ನಾರಾಯಣ ಭಟ್, ಸಂಘವು ಕೈಗೊಂಡಿರುವ ವಿವಿಧ ಚಟುವಟಿಕೆಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಸ್ಥೆಯು ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಶುಭ ಹಾರೈಸಿದರು

.

ಸಭೆಯಲ್ಲಿ ನಿರ್ದೇಶಕರಾದ ನಂದಕಿಶೋರ್, ರೋಹಿಣಿ ಜಿ. ಕೋಟ್ಯಾನ್, ಪ್ರೇಮಾ ಕೆ. ಶೆಟ್ಟಿ, ಚಂದನ್ ಕುಮಾರ್, ನಾಗೇಶ್ ನಾಯಕ್, ಗಿರೀಶ್ ಶೇರಿಗಾರ್, ಶ್ರೀನಿವಾಸ್ ನಾಯ್ಕ ಹಾಗೂ ಸದಾನಂದ ನಾಯಕ್ ಉಪಸ್ಥಿತರಿದ್ದರು

.

ಸಂಘದ ನಿರ್ದೇಶಕರಾದ ಶಿಖಾ ಶೆಟ್ಟಿ ವಂದಿಸಿದರು. ಮುಖ್ಯ ಕಚೇರಿ ಸಿಬ್ಬಂದಿ ಶ್ರೀಮತಿ ಸವಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

ಹಂಚಿಕೊಳ್ಳಿ: