ಮುಖ್ಯ ವಿಷಯಕ್ಕೆ ಹೋಗಿ
The Karnataka Today
27 Sept
ಸುದ್ದಿಯಲ್ಲಿ
ಭಾರತ

ಹೋಮ್‌ಸ್ಟೇನಲ್ಲಿ ಹಿಂದೂ ಯುವತಿ ಶವವಾಗಿ ಪತ್ತೆ; ಪ್ರಿಯಕರ ಆಸೀಫ್ ಅಲಿ ಬಂಧನ

ಗುವಾಹಟಿ: ಗುವಾಹಟಿ ವಿಶ್ವವಿದ್ಯಾಲಯದ 22 ವರ್ಷದ ವಿದ್ಯಾರ್ಥಿನಿಯೊಬ್ಬರು ಶನಿವಾರ ಮುಂಜಾನೆ ತಾನು ಉಳಿದುಕೊಂಡಿದ್ದ ಹೋಮ್‌ಸ್ಟೇನಲ್ಲಿ ಶವವಾಗಿ ಪತ್ತೆಯಾಗಿದ್ದು, 26 ವರ್ಷದ, ಆಕೆಯ ಮುಸ್ಲಿಂ ಬಾಯ್‌ ಫ್ರೆಂಡ್‌‌ ನನ್ನು ಬಂಧಿಸಲಾಗಿದೆ. ಆಕೆಯೇ ನೇಣು...

ಸಂಪಾದಕ· 1 ನಿಮಿಷ ಓದು
ಹೋಮ್‌ಸ್ಟೇನಲ್ಲಿ ಹಿಂದೂ ಯುವತಿ ಶವವಾಗಿ ಪತ್ತೆ; ಪ್ರಿಯಕರ ಆಸೀಫ್ ಅಲಿ ಬಂಧನ
ಹಂಚಿಕೊಳ್ಳಿ:
ಗುವಾಹಟಿ: ಗುವಾಹಟಿ ವಿಶ್ವವಿದ್ಯಾಲಯದ 22 ವರ್ಷದ ವಿದ್ಯಾರ್ಥಿನಿಯೊಬ್ಬರು ಶನಿವಾರ ಮುಂಜಾನೆ ತಾನು ಉಳಿದುಕೊಂಡಿದ್ದ ಹೋಮ್‌ಸ್ಟೇನಲ್ಲಿ ಶವವಾಗಿ ಪತ್ತೆಯಾಗಿದ್ದು, 26 ವರ್ಷದ, ಆಕೆಯ ಮುಸ್ಲಿಂ ಬಾಯ್‌ ಫ್ರೆಂಡ್‌‌ ನನ್ನು ಬಂಧಿಸಲಾಗಿದೆ. ಆಕೆಯೇ ನೇಣು ಹಾಕಿಕೊಂಡಿದ್ದಾಳೆ ಎಂದು ಬಾಯ್ ಫ್ರೆಂಡ್ ಹೇಳಿದ್ದರೂ, ಪೊಲೀಸರು ಆತನ ಹೇಳಿಕೆಯನ್ನು ನಂಬುತ್ತಿಲ್ಲ ಮತ್ತು ಇದು ಕೊಲೆ ಇರಬಹುದು ಎಂದು ಶಂಕಿಸಿದ್ದಾರೆ. ಅಲ್ಲದೆ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

ಮೃತದೇಹದ ಮೇಲಾಗಲಿ ಅಥವಾ ನೆಲದ ಮೇಲಾಗಲಿ ಯಾವುದೇ ರಕ್ತದ ಕಲೆಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ಆದರೆ ಇಲ್ಲಿಯವರೆಗೆ ಎರಡು ಪ್ರಮುಖ ಅಂಶಗಳು ಬೆಳಕಿಗೆ ಬಂದಿವೆ. ಮೊದಲನೆಯದಾಗಿ, ಸ್ನೇಹಿತೆಯೊಬ್ಬರ ಮನೆಯಲ್ಲಿ ರಾತ್ರಿ ಉಳಿಯುವುದಾಗಿ ಕುಟುಂಬಕ್ಕೆ ಹೇಳಿದ್ದ ಆ ಯುವತಿ, ಮಧ್ಯರಾತ್ರಿ ತನ್ನ ತಾಯಿಗೆ ಕರೆ ಮಾಡಿ, "ಅವರು ನನ್ನನ್ನು ಕೊಲ್ಲುತ್ತಾರೆ" ಎಂದು ಹೇಳಿದ್ದಾಳೆ. ಇದಾದ ಬಳಿಕ ಆಕೆಯ ಫೋನ್ ಅನ್ನು "ಬಹುಶಃ ಕಿತ್ತುಕೊಳ್ಳಲಾಗಿದೆ" ಎಂದು ಕುಟುಂಬದ ಸ್ನೇಹಿತರೊಬ್ಬರು ಹೇಳಿದ್ದಾರೆ. ಆದಾಗ್ಯೂ, ಈ ಹೇಳಿಕೆಯ ಬಗ್ಗೆ ಇನ್ನೂ ತನಿಖೆ ನಡೆಯಬೇಕಿದೆ. ಇನ್ನೊಂದು ಅಂಶವೆಂದರೆ, ರಾತ್ರಿಯ ವೇಳೆ ಒಬ್ಬರು ಕೂಗಾಡುತ್ತಿದ್ದರು ಮತ್ತು "ಯಾರಾದಾರೂ ಸಹಾಯ ಮಾಡುವಂತೆ" ಹೇಳುತ್ತಿದ್ದುದನ್ನು ಕೇಳಿಸಿಕೊಂಡಿದ್ದಾಗಿ ಹೋಮ್‌ಸ್ಟೇನ ಉಸ್ತುವಾರಿ ವ್ಯಕ್ತಿ ಹೇಳಿದ್ದಾರೆ. ಮೃತ ಯುವತಿ ಹಿಂದೂ ಆಗಿದ್ದು, ಬಂಧಿತನಾಗಿರುವ ಆಕೆಯ ಪ್ರಿಯಕರ ಮುಸ್ಲಿಂ ಆಗಿರುವುದರಿಂದ, ಇದು "ಲವ್ ಜಿಹಾದ್" ಎಂದು ಆರೋಪಿಸಿದ ಕೆಲವು ಸಂಘಟನೆಗಳು ಪ್ರತಿಭಟನೆ ಸಹ ನಡೆಸಿವೆ. ಗುವಾಹಟಿ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಮತ್ತು ಧಾರಾಪುರದ ನಿವಾಸಿಯಾಗಿದ್ದ ನಿಮಿಷಾ ಠಾಕುರಿಯಾ ಅವರು, ನಗರದ ಹೊರವಲಯದಲ್ಲಿರುವ ಗರಾಲ್‌ನಲ್ಲಿರುವ ಹೋಮ್‌ಸ್ಟೇ ಒಂದರಲ್ಲಿ ಬಂಧಿತ ವ್ಯಕ್ತಿ ಆಸಿಫ್ ಅಲಿ ಅವರೊಂದಿಗೆ ಉಳಿದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಠಾಕುರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಮಗೆ ಮಾಹಿತಿ ನೀಡಲಾಗಿದೆ. ಆದರೆ "ಅವರು ಹೇಳುವ ಮಾತನ್ನು ನಾವು ನಂಬುವುದಿಲ್ಲ. ನಾವು ತನಿಖೆಯನ್ನು ಮುಂದುವರಿಸಬೇಕಿದೆ" ಎಂದು ಗುವಾಹಟಿ ಪಶ್ಚಿಮ ಪೊಲೀಸ್ ಉಪ ಆಯುಕ್ತ(DCP) ಬೋಲಿನ್ ದಿಯೋರಿ ಅವರು ಹೇಳಿದ್ದಾರೆ. ಹೋಮ್‌ಸ್ಟೇ ಮಾಲೀಕರು, ಉಸ್ತುವಾರಿಗಳು ಮತ್ತು ಇತರ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ದಿಯೋರಿ ತಿಳಿಸಿದ್ದಾರೆ.

ಹಂಚಿಕೊಳ್ಳಿ: