ಸಿಎಂ ಸಿದ್ದರಾಮಯ್ಯಗೆ ಒಳ ಮೀಸಲಾತಿ ಜಾರಿ ಮಾಡುವ ದಿನಾಂಕ ನಿಗದಿಪಡಿಸುವಂತೆ ಬಿಜೆಪಿ ಒತ್ತಾಯ

66

“ಒಳ ಮೀಸಲಾತಿ ಜಾರಿ ದಿನಾಂಕ ಘೋಷಿಸವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಬಿಜೆಪಿ ಶನಿವಾರ ಒತ್ತಾಯಿಸಿದೆ

. ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಜ‌ಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಅವರು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗವು ಮೇ 5 ರಂದು ಸಮೀಕ್ಷೆ ಕಾರ್ಯವನ್ನು ಪ್ರಾರಂಭಿಸುತ್ತಿದ್ದು,

ಸರ್ವೇಕ್ಷಣೆಯಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುವಂತಾಗಲು ಸಿದ್ದರಾಮಯ್ಯನವರು ಒಳ ಮೀಸಲಾತಿ ಕಾಯ್ದೆಯಾಗಿ ಜಾರಿಯಾಗುವ ದಿನಾಂಕವನ್ನು ಕೂಡಲೇ ಘೋಷಿಸಬೇಕೆಂದು ಒತ್ತಾಯಿಸಿದರು.

ಒಳಮೀಸಲಾತಿ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ನಂತರ ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್ ಸರ್ಕಾರಗಳು ಒಳಮೀಸಲಾತಿಯನ್ನು ಜಾರಿ ಮಾಡಿವೆ. ಆದರೆ, ಒಳ ಒತ್ತಡದಿಂದ ಬಳಲುತ್ತಿರುವ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಿಧಾನಗತಿ ಅನುಮಾನಾಸ್ಪದಕ್ಕೆ ಕಾರಣವಾಗಿದೆ ಎಂದು ಕಿಡಿಕಾರಿದರು.

ಸಾಮಾಜಿಕ ನ್ಯಾಯದ ಹರಿಕಾರ ಎಂಬಂತೆ ಬಿಂಬಿಸಿಕೊಳ್ಳುವ ಸಿದ್ದರಾಮಯ್ಯನವರು ಉಳಿದ ರಾಜ್ಯಗಳ ಎದುರು ಹಿಂದೆ ಉಳಿದು ತಲೆ ತಗ್ಗಿಸುವಂತೆ ಮಾಡಿದ್ದಾರೆ. ಒಳ ಮೀಸಲಾತಿ ಹೋರಾಟಗಾರರು ಒತ್ತಡ ತಂದು ಪ್ರತಿ ಹಂತದಲ್ಲಿ ಕೆಲಸ ತೆಗೆಸಬೇಕಾದ ಪರಿಸ್ಥಿತಿಯಲ್ಲಿ ಕರ್ನಾಟಕ ಸರ್ಕಾರವಿದೆ.


ಮೇ 5ರಿಂದ ಕರ್ನಾಟಕದಲ್ಲಿ ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸರ್ವೇಕ್ಷಣೆ ಕಾರ್ಯ ಆರಂಭವಾಗುತ್ತಿದೆ. ನಮ್ಮ ನಿಯೋಗವು ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ಹಲವು ಸಮಸ್ಯೆ – ಸವಾಲುಗಳ ಬಗ್ಗೆ ಚರ್ಚಿಸಿದೆ ಎಂದು ಹೇಳಿದರು.

ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ಮಾತನಾಡಿ, ರಾಜ್ಯದಲ್ಲಿ 1970 ರ ನಂತರ ಪರಿಶಿಷ್ಟರ ಪಟ್ಟಿಗೆ ಶಿಷ್ಟ ಸಮಾಜವನ್ನು ಸೇರಿಸಿದ ನಂತರ ಒಳಮೀಸಲಾತಿ ಬಗ್ಗೆ ಚರ್ಚೆ ಪ್ರಾರಂಭವಾಗಿದೆ ಎಂದರು

Leave a comment

Leave a Reply

Your email address will not be published. Required fields are marked *

Related Articles

ಕಾಂಗ್ರೆಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದೆ ಜನರ ತೀರ್ಪು ಗೌರವಿಸಿ 2 ವರ್ಷ ಶಾಸಕರಾಗಿ ಕೆಲಸ ಮಾಡಲು ಜೀವರಾಜ್ ಅವರಿಗೆ ಅವಕಾಶ ನೀಡಬೇಕು’: ಬಿ ವೈ ವಿಜಯೇಂದ್ರ

ಬೆಂಗಳೂರು: 2023ರಲ್ಲಿ ಪರಾಭವಗೊಂಡಾಗಲೇ ಡಿ ಎನ್ ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ವರೆಗೆ...

ಪಂಚ ರಾಜ್ಯ ಚುನಾವಣೋತ್ತರ ಸಮೀಕ್ಷೆ: ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಬಹುಮತ ತಮಿಳುನಾಡು ಡಿ ಎಂ ಕೆ ಕೇರಳ ಯುಡಿಎಫ್ ಮೈತ್ರಿಕೂಟ ಅಧಿಕಾರಕ್ಕೆ??

ನವದೆಹಲಿ: ಬುಧವಾರ ನಡೆದ ಹಲವಾರು ಚುನಾವಣೋತ್ತರ ಸಮೀಕ್ಷೆಗಳು ಅಸ್ಸಾಂನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಮತ್ತು ಪಶ್ಚಿಮ...

ನಾಯಕತ್ವ ಬದಲಾವಣೆ ಸದ್ಯದ ಮಟ್ಟಿಗೆ ಯತೀಂದ್ರ ಹೈಕಮಾಂಡ್ ಯತೀಂದ್ರಗೆ ಟಾಂಗ್ ನೀಡಿದ ಡಿಕೆ ಶಿವಕುಮಾರ್

“ಮಂಗಳೂರು: ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಿದ್ದರಾಮಯ್ಯನವರೇ ಐದು ವರ್ಷ...

ಬಿಜೆಪಿ ಆರು ಚುನಾವಣಾ  ಕ್ಷೇತ್ರಗಳ  ಪ್ರವಾಸ ಉಸ್ತುವಾರಿ ಹುದ್ದೆಗೆ ರಾಜೀನಾಮೆ ನೀಡಿದ ಅಣ್ಣಾಮಲೈ

“ಕೊಯಮತ್ತೂರು: 2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು...