ಜಮ್ಮು-ಕಾಶ್ಮೀರ ಉಗ್ರರ ದಾಳಿ ಪ್ರಕರಣ ಇಬ್ಬರು ಸ್ಥಳೀಯ ಉಗ್ರರು ಭಾಗಿ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗ 

30

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದಾರೆ


. ಭದ್ರತಾ ಪಡೆಗಳ ಅನುಪಸ್ಥಿತಿ ಮತ್ತು ವಾಹನ ಸಂಚಾರಕ್ಕೆ ಅವಕಾಶವಿಲ್ಲದ ಕಾರಣ ಭಯೋತ್ಪಾದಕರು ಬೈಸರನ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ

. ರಕ್ಷಣಾ ಕಾರ್ಯಾಚರಣೆ ನಿಧಾನವಾಗಲು ಮತ್ತು ಸಾವುನೋವುಗಳನ್ನು ಹೆಚ್ಚಿಸಲು ಉಗ್ರರು ಈ ಸ್ಥಳವನ್ನು ಆಯ್ಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ಅನಂತ್‌ನಾಗ್‌ನ ಆದಿಲ್ ಗುರಿ ಮತ್ತು ಸೋಪೋರ್‌ನ ಆಸಿಫ್ ಶೇಖ್ ಎಂಬ ಇಬ್ಬರು ಸ್ಥಳೀಯರು ಉಗ್ರರು ಈ ದಾಳಿಯಲ್ಲಿ ಭಾಗಿಯಾಗಿದ್ದಾರೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ” ಎಂದು ಖಚಿತ ಮೂಲಗಳು ತಿಳಿಸಿವೆ.

ಸ್ಥಳೀಯ ಪೊಲೀಸರು ಒದಗಿಸಿದ ಮಾಹಿತಿಯನ್ನು NIA ತಂಡ ಮತ್ತಷ್ಟು ಪರಿಶೀಲಿಸುತ್ತಿದೆ. ಪಾಕಿಸ್ತಾನಿ ಮತ್ತು ಸ್ಥಳೀಯ ಕಾಶ್ಮೀರಿ ಭಯೋತ್ಪಾದಕರು ಹೆಲ್ಮೆಟ್ ಗೆ ಅಳವಡಿಸಿದ ಕ್ಯಾಮೆರಾಗಳನ್ನು ಧರಿಸಿ, ಸಂಪೂರ್ಣ ದಾಳಿಯನ್ನು ಚಿತ್ರೀಕರಿಸಿ, ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆಯಾಗಿ, ಭಯೋತ್ಪಾದಕರ ಸಂಖ್ಯೆ ಏಳು ಎಂದು ನಂಬಲಾಗಿದೆ. ಈ ಪೈಕಿ ಅವರು ವಿದೇಶಿ ಉಗ್ರರಾಗಿದ್ದು, ಇಬ್ಬರು ಸ್ಥಳೀಯರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಪಠಾಣಿ ಸೂಟ್‌ಗಳನ್ನು ಧರಿಸಿದ್ದ ಭಯೋತ್ಪಾದಕರು, ಬೈಸರನ್ ಹುಲ್ಲುಗಾವಲಿಗೆ ಆಗಮಿಸಿ ಅಮೆರಿಕ ನಿರ್ಮಿತ M4 ಕಾರ್ಬೈನ್ ಅಸಾಲ್ಟ್ ರೈಫಲ್‌ ಮತ್ತು AK-47 ಗಳಿಂದ ಗುಂಡಿನ ದಾಳಿ ನಡೆಸಿದ್ದಾರೆ. ಏಪ್ರಿಲ್ 22 ರ ಸಂಜೆಯ ವೇಳೆಗೆ ಘಟನಾ ಸ್ಥಳದಿಂದ 50 ರಿಂದ 70 ಕ್ಕೂ ಹೆಚ್ಚು ಬಳಸಿದ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ, ಭಯೋತ್ಪಾದಕರು ಹೊತ್ತೊಯ್ಯುತ್ತಿದ್ದ ಶಸ್ತ್ರಾಸ್ತ್ರಗಳ ವಿವರಗಳನ್ನು ನೀಡಿದ ಅವರು, ಉಗ್ರರಲ್ಲಿ ಇಬ್ಬರು M4 ಕಾರ್ಬೈನ್ ಅಸಾಲ್ಟ್ ರೈಫಲ್‌ಗಳನ್ನು ಹೊಂದಿದ್ದರೆ, ಉಳಿದ ಮೂವರು AK-47 ಗಳನ್ನು ಹೊತ್ತೊಯ್ಯುತ್ತಿದ್ದರು ಎಂದು ಹೇಳಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ವಂದೇ ಮಾತರಂ ವಿರೋಧಿಸುವವರಿಗೆ ಭಾರತದಲ್ಲಿ ನೆಲೆಸುವ ಹಕ್ಕಿಲ್ಲ: ಸಿಎಂ ಯೋಗಿ ಆದಿತ್ಯನಾಥ್

ಲಖನೌ: ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಎಲ್ಲಾ ಶಾಲೆಗಳಲ್ಲಿ ವಂದೇ ಮಾತರಂ ಗೀತೆಯ ಎಲ್ಲಾ ಆರು...

ಮೆಗಾ ರಫೆಲ್ ಜೆಟ್ ಯೋಜನೆಗೆ ‘ಕೇಂದ್ರ’ ಅನುಮೋದನೆ, 114 ಜೆಟ್‌ ಖರೀದಿ, ಬಹುತೇಕ ಭಾರತದಲ್ಲೇ ನಿರ್ಮಾಣ

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂದೂರ್...

ಮುಂಬೈ ನೂತನ ಮೇಯರ್‌ ರೀತು ತಾವಡೆ ಅವಿರೋಧ ಆಯ್ಕೆ: 40ವರ್ಷ್ ಗಳ ನಂತರ ಬಿಜೆಪಿಗೆ ಒಲಿದ ಪಟ್ಟ

ಮುಂಬೈ: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನ ನೂತನ ಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ರೀತು ತಾವ್ಡೆ...

ಸ್ವಪಕ್ಷ ಸರಕಾರದ ಸಚಿವರನ್ನು ಜಾಡಿಸಿದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ

ಪಾಟ್ನಾ: ನೇರವಾಗಿ ಪ್ರಶ್ನೆ ಕೇಳುವುದರಲ್ಲಿ ಹೆಸರಾದ ಬಿಹಾರದ ಬಿಜೆಪಿಯ ಅತ್ಯಂತ ಕಿರಿಯ ಶಾಸಕಿ ಮೈಥಿಲಿ ಠಾಕೂರ್...