ಪೌರ ಸೇವಾ ಕಾರ್ಮಿಕರು – ಡಿ ದರ್ಜೆ ನೌಕರರನ್ನು ಸನ್ಮಾನಿಸಿದ ಶಾಸಕ – ಡಾ॥ ಎನ್ ಟಿ ಶ್ರೀನಿವಾಸ್

2

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಮೇನ್ ಬಾಯ್ಸ್ ಸ್ಕೂಲ್ ಆವರಣದಲ್ಲಿ ಜರುಗಿದ, ಡಾ॥ಬಿ.ಆರ್. ಅಂಬೇಡ್ಕರ್ ರವರ 134 ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ॥ ಬಾಬು ಜಗಜೀವನ್ ರಾಮ್ ರವರ 118 ನೇ ಜಯಂತಿಯಲ್ಲಿ.

ಶಾಸಕರಾದ ಡಾ॥ ಎನ್.ಟಿ.ಶ್ರೀನಿವಾಸ್ ರವರು, ಪಟ್ಟಣ ಪಂಚಾಯ್ತಿಯ ಪೌರ ಸೇವಾ ನೌಕರರು ಸೇರಿದಂತೆ. ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿಗಳ ಸ್ವಚ್ಚತಾ ಸಿಬ್ಬಂದಿಯವರನ್ನು, ವಾಹನ ಚಾಲಕರು, ನೀರಗಂಟಿಗರು ಸೇರಿ ಒಟ್ಟು 300ಜನ ಡಿ ದರ್ಜೆ ನೌಕರರನ್ನು ಕಾರ್ಮಿಕರನ್ನು ವೇದಿಕೆಯಲ್ಲಿ ಸನ್ಮಾನಿಸಿದರು.

ಈ ಮೂಲಕ ಶಾಸಕರು, ಡಾ॥ ಬಿ.ಆರ್. ಅಂಬೇಡ್ಕರ್ ರವರ ಆಶಯವನ್ನು ಈಡೇರಿಸಿದ್ದಾರೆ. ಹಾಗೆಯೇ, ಪಿಯುಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ, ವಿದ್ಯಾರ್ಥಿನಿ ಸಂಜನಾ ಬಾಯಿ ಹಾಗೂ ಅವರ ಪೋಷಕರುನ್ನು ಸನ್ಮಾನಿಸಲಾಯಿತು

ಮತ್ತು ವಿದ್ಯಾರ್ಥಿನಿ ಸಂಜನಾ ಬಾಯಿಗೆ, ಶಾಸಕರು ಲ್ಯಾಪ್ ಟ್ಯಾಪ್ ಅನ್ನು ಕೊಡುಗೆಯಾಗಿ ನೀಡಿದರು. ಮುಖ್ಯಮಂತ್ರಿಗಳ ಪದಕ ಪಡೆದಿರುವ, ಕೂಡ್ಲಿಗಿಯ ಪೊಲೀಸ್ ಪೇದೆ ಡಿ ವೈ ಎಸ್ ಪಿ ಕಛೇರಿಯ ಕೊಟ್ರೇಶ ಸೇರಿದಂತೆ. ಪೊಲೀಸ್ ಇಲಾಖೆಯ ಇತರರನ್ನು. ವಿವಿದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ, ಗಣ್ಯರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.

ತಹಶೀಲ್ದಾರರಾದ ವಿ.ಕೆ.ನೇತ್ರಾವತಿ, ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಕಾವಲಿ ಶಿವಪ್ಪನಾಯಕ, ಉಪ ಅಧ್ಯಕ್ಷರಾದ ಲೀಲಾವತಿ ಪ್ರಭಾಕರ್, ಸರ್ವ ಸದಸ್ಯರು, ಗಣ್ಯಮಾನ್ಯರು, ವಿವಿದ ಮುಖಂಡರು, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ, ಗುನ್ನಳ್ಳಿ ರಾಘವೇಂದ್ರ, ವಿವಿಧ ಸಂಘಟನೆಕಾರರು ವೇದಿಕೆಯಲ್ಲಿದ್ದರು

Leave a comment

Leave a Reply

Your email address will not be published. Required fields are marked *

Related Articles

ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿ ಅಂತಿಮ ಸೋಮವಾರ ಘೋಷಣೆ ಸಾಧ್ಯತೆ ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ...

ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಬೆಂಗಾವಲು ವಾಹನ ಅಪಘಾತ ನಾಲ್ವರಿಗೆ ಗಾಯ

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶನಿವಾರ ಮೈಸೂರಿನಲ್ಲಿ ಸರ್ಕಾರದ ಸಾಧನಾ ಸಮಾವೇಶ ಮುಗಿಸಿ ವಾಪಸ್‌...

ರಾಜ್ಯದಲ್ಲಿ ‘ಪರಮಾಣು ವಿದ್ಯುತ್ ಸ್ಥಾವರ’ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ   :: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್

ರಾಜ್ಯದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆ ಸಿಕ್ಕಿದೆ. ಜೊತೆಗೆ ರಾಷ್ಟ್ರೀಯ ಉಷ್ಣ ವಿದ್ಯುತ್...