ಬಿಜೆಪಿಗರಿಗೆ ಈ ರಾಜ್ಯದ ಅಭಿವೃದ್ಧಿ ಮತ್ತು ಜನಪರ ಕಾಳಜಿಯಿದ್ದರೆ ಕೇಂದ್ರ ಸರಕಾರ ವಿರುದ್ಧ ಪ್ರತಿಭಟನೆ ನಡೆಸಲಿ:: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ

42

ರಾಜ್ಯ ಸರಕಾರ ಹಾಗೂ ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಹಾಸ್ಯಾಸ್ಪದವಾಗಿದ್ದು, ನಿಜವಾಗಿಯೂ ಬಿಜೆಪಿಗರಿಗೆ ಈ ರಾಜ್ಯದ ಅಭಿವೃದ್ಧಿ ಮತ್ತು ಜನಪರ ಕಾಳಜಿಯಿದ್ದರೆ ಕೇಂದ್ರ ಸರಕಾರ ವಿರುದ್ಧ ಪ್ರತಿಭಟನೆ ನಡೆಸಲಿ, ಬಿಜೆಪಿ ನಾಯಕರಿಗೆ ಪ್ರತಿಭಟನೆ ಬಿಡಿ.

ಕೇಂದ್ರ ನಾಯಕರ ವಿರುದ್ಧ ಉಸಿರೆತ್ತುವ ತಾಕತ್ತು ಇಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಲೇವಡಿ ಮಾಡಿದರು.

ಕೇಂದ್ರ ಸರಕಾರ ಅಡುಗೆ ಸಿಲಿಂಡ‌ರ್ ದರವನ್ನು 50ರೂ. ಏರಿಕೆ ಮಾಡಿದೆ. ಭರವಸೆಗಳ ಸುರಿಮಳೆಯನ್ನೇ ಸುರಿಸಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ಮರೆತುಬಿಟ್ಟು,

ಬೆಲೆ ಏರಿಕೆಯ ಬರೆಯನ್ನು ಮತದಾರನಿಗೆ ನೀಡುತ್ತಿದೆ. ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಡಿಮೆಯಿದ್ದರೂ ದೇಶದಲ್ಲಿ ಕಚ್ಚಾತೈಲ ದರ ಕಡಿಮೆ ಮಾಡದೆ ಜನರನ್ನು ವಂಚಿಸಿದೆ.

ಜಿಎಸ್‌ಟಿ ಹೊರೆಯನ್ನು ಜನರಿಗೆ ಹಾಕಿ ಸುಲಿಗೆ ಮಾಡಿದ್ದಲ್ಲದೆ ನಮ್ಮ ರಾಜ್ಯಕ್ಕೆ ಬರಬೇಕಾದ. ಜಿಎಸ್‌ಟಿ ಪಾಲನ್ನು ಸಮರ್ಪಕವಾಗಿ ನೀಡುತ್ತಿಲ್ಲ.

ರಾಜ್ಯದ ಅಭಿವೃದ್ಧಿಗೆ ಬರಬೇಕಾದ ಹಣವನ್ನು ಕೇಂದ್ರ ನೀಡಿಲ್ಲ. ರಾಜ್ಯ ಬಿಜೆಪಿರಿಗೆ ರಾಜ್ಯದ ಜನರ ಬಗ್ಗೆ ಹಾಗೂ ಅಭಿವೃದ್ಧಿಯ ಬಗ್ಗೆ ಕಾಳಜಿಯಿದ್ದರೆ ಹೊಸದಿಲ್ಲಿಗೆ ತೆರಳಿ ಜನಾಕ್ರೋಶ ಯಾತ್ರೆ ಮಾಡಲಿ ಎಂದು ಸವಾಲೆಸೆದರು.

ರಾಜ್ಯದಲ್ಲಿ ಗ್ರಾರಂಟಿ ಯೋಜನೆ ಅನುಷ್ಠಾನವಾದ ಬಳಿಕ ಜನಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತಿದೆ.

ಸವದತ್ತಿ ಚಿಕ್ಕೊಪ್ಪ ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಪೃಥ್ವಿ ಹೋಳಿ ಗೃಹಲಕ್ಷ್ಮಿ ಹಣದಿಂದ ಶಿಕ್ಷಣ ಕಲಿತು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿರುವುದು ಇದಕ್ಕೆ ನಿದರ್ಶನ.

ಇದೇ ರೀತಿ ಕೋಟ್ಯಂತರ ಕುಟುಂಬಗಳಿಗೆ ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಅನುಕೂಲ ಮಾಡಿಕೊಟ್ಟಿದೆ. ಇದರಿಂದ ಗ್ರಾಮ ಗ್ರಾಮಗಳಲ್ಲಿ ಆರ್ಥಿಕ ಚೈತನ್ಯ ಸೃಷ್ಟಿಯಾಗಿದೆ.

ಅಭಿವೃದ್ಧಿ ಕಾಣುತ್ತಿದೆ. ಗ್ಯಾರಂಟಿ ಯೋಜನೆಯಿಂದ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತಿದೆ.

ಗ್ಯಾರಂಟಿ ಯೋಜನೆಗೆ ಜನಸಾಮಾನ್ಯರ ಸ್ಪಂದನೆ ಹಾಗೂ ರಾಜ್ಯ ಸರಕಾರದ ಪರ ಜನರ ಒಲವನ್ನು ಕಂಡು ಬಿಜೆಪಿ ನಾಯಕರು ತಲ್ಲಣಗೊಂಡಿದ್ದು ಜನಾಕ್ರೋಶ ಮೂಲಕ ಜನರನ್ನು ಹಾದಿತಪ್ಪಿಸುವ ಹುನ್ನಾರ ನಡೆಸುತ್ತಿದ್ದಾರೆ.

ರಾಜ್ಯದ ಜನತೆ ಬುದ್ದಿವಂತರು, ಬಿಜೆಪಿಯ ಟೀಮ್ನನ ಯಾವ ನಾಟಕನೂ ಫಲ ಕೊಡಲ್ಲ ಎಂದು ಮಂಜುನಾಥ ಭಂಡಾರಿ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ನಾಟಕ ಕಂಪನಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ನಾನಾ ಬಂಡಾಯ ಬಣಗಳಿದ್ದು, ಒಂದೊಂದು ನಾಟಕ ಕಂಪನಿಗಳಂತಾಗಿದೆ.

ಬಿಜೆಪಿಯಲ್ಲಿ ನೇರಾ-ನೇರ ಮಾತನಾಡುವವರನ್ನು ಪಕ್ಷದಿಂದ ದೂರವಿಡುತ್ತಾರೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಮತ್ತಷ್ಟು ಬಂಡಾಯ ನಾಯಕರು ಹುಟ್ಟಿಕೊಳ್ಳಲಿದ್ದಾರೆ ಎಂದರು.

Leave a comment

Leave a Reply

Your email address will not be published. Required fields are marked *

Related Articles

ನಾಯಕತ್ವ ಬದಲಾವಣೆ ಸದ್ಯದ ಮಟ್ಟಿಗೆ ಯತೀಂದ್ರ ಹೈಕಮಾಂಡ್ ಯತೀಂದ್ರಗೆ ಟಾಂಗ್ ನೀಡಿದ ಡಿಕೆ ಶಿವಕುಮಾರ್

“ಮಂಗಳೂರು: ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಿದ್ದರಾಮಯ್ಯನವರೇ ಐದು ವರ್ಷ...

ಬಿಜೆಪಿ ಆರು ಚುನಾವಣಾ  ಕ್ಷೇತ್ರಗಳ  ಪ್ರವಾಸ ಉಸ್ತುವಾರಿ ಹುದ್ದೆಗೆ ರಾಜೀನಾಮೆ ನೀಡಿದ ಅಣ್ಣಾಮಲೈ

“ಕೊಯಮತ್ತೂರು: 2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು...

ರಾಜ್ಯಪಾಲರಿಗೆ ಅಪಮಾನ; ಕಾಂಗ್ರೆಸ್ ಶಾಸಕರ ಅಮಾನತಿಗೆ ಒತ್ತಾಯಿಸಿ ಬಿಜೆಪಿ, ಜೆಡಿಎಸ್ ಪ್ರತಿಭಟನೆ

ಬೆಂಗಳೂರು: ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ‘ಅವಮಾನಿಸಿದ ಮತ್ತು...

ಮುಂಬೈ ಮಹಾನಗರ ಪಾಲಿಕೆ ಮೇಯರ್ ಪಟ್ಟಕ್ಕಾಗಿ ಚುನಾವಣೆ ಗರಿಗೆದರಿದ ರಾಜಕೀಯ ಪಕ್ಷಗಳ ಮೈತ್ರಿ

“: ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ ಅಚ್ಚರಿ ರೀತಿಯಲ್ಲಿ ಬದ್ಧ ವೈರಿಗಳಾದ ಬಿಜೆಪಿ ಹಾಗೂ ಶಿವಸೇನಾ...