ಹನಿಟ್ರ್ಯಾಪ್ ಸುಮ್ನೆ ಆಗುತ್ತಾ? ಮಾಡಿದ್ದುಣ್ಣೋ ಮಾರಾಯಾ’; ಹನಿ ಟ್ರ್ಯಾಪ್ ಆರೋಪಕ್ಕೆ ::ಡಿಕೆ ಶಿವಕುಮಾರ್ ತಿರುಗೇಟು

3
ಸಚಿವರೊಬ್ಬರ ಹನಿಟ್ರ್ಪಾಪ್ ವಿಚಾರ ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಡಿಸಿಎಂ ಡಿಕೆ ಶಿವಕುಮಾರ್, ‘ಹನಿಟ್ರ್ಯಾಪ್ ಸುಮ್ನೆ ಆಗುತ್ತಾ?

ಮಾಡಿದ್ದುಣ್ಣೋ ಮಾರಾಯಾ’ ಎಂದು ಹೇಳುವ ಮೂಲಕ ತಮ್ಮ ವಿರುದ್ಧ ಆರೋಪ ಮಾಡುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ ಎನ್ನಲಾಗಿದೆ.


ಇಂದು ಭಾಗಮಂಡಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ‘ಬಿಜೆಪಿ ಅವರೇ ಹೇಳಿದ್ದಾರೆ ಆರ್ ಆಶೋಕ್ , ಯಡಿಯೂರಪ್ಪ ಅವರದು ಏನ್ ಆಯ್ತು ಅಂತ ಹೇಳಿದ್ದಾರಲ್ಲ. ಅವರ ನೋವನ್ನ ಅವರು ಹೇಳಿಕೊಂಡಿದ್ದಾರೆ ಮಾಡಿದ್ದುಣ್ಣೋ ಮಾರಾಯ ಎಂದು ಟಾಂಗ್ ಕೊಟ್ಟಿದ್ದಾರೆ.

ಅಂತೆಯೇ ‘ಹನಿಟ್ರ್ಯಾಪ್ ಆಗಿದ್ರೆ ಪೋಲಿಸ್ ಠಾಣೆಗೆ ದೂರು ನೀಡಲಿ. ಬೇರೆಯವರು ಸುಮ್ಮನೆ ನಿಮ್ಮ ಹತ್ತಿರ ಬರ್ತಾರಾ? ಹನಿಟ್ರ್ಯಾಪ್ ಸುಮ್ಮನೆ ಆಗುತ್ತಾ? ನಾವು ಮಾಡಿದ್ರೆ ಆಗುತ್ತೆ, ಹಲೋ ಅಂದ್ರೆ ಅವರು ಹಲೋ ಅಂತಾರೆ, ನೀವು ಬಾಯ್ ಅಂದ್ರೆ ಅವರು ಬಾಯ್ ಅಂತಾರೆ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ತಮ್ಮ ವಿರುದ್ಧ ಆರೋಪ ಮಾಡುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಡಿ.ಕೆ. ಶಿವಕುಮಾರ್ ನಿನ್ನೆಯೂ ಮಾತನಾಡಿದ್ದು, ಕೆಲವರು “ಯಾರಿಗಾದರೂ ಹನಿಟ್ರ್ಯಾಪ್ ಆಗಿದ್ದರೆ, ಅವರು ಪೋಲಿಸ್ ಠಾಣೆಗೆ ಹೋಗಿ ದೂರು ಕೊಡಲಿ. ಆಗ ತನಿಖೆ ಮಾಡೋಣ ಎಂದು ಮಾಧ್ಯಮಗಳಿಗೆ ಹೇಳಿದ್ದರು.

ಅಂತೆಯೇ “ನಮ್ಮ ಮೇಲೆ ಯಾಕೆ ಆರೋಪ? ದೂರು ಕೊಡಿ, ತನಿಖೆ ಮಾಡೋಣ.” ಈಗ ಎರಡೂ ಪಕ್ಷಗಳು ಒಬ್ಬರನ್ನೊಬ್ಬರು ಕೆಣಕುತ್ತಿದ್ದಾರೆ ಎಂದು ಹೇಳಿದ್ದರು

. ಮುನಿರತ್ನ ನೇರ ಆರೋಪ ಇನ್ನು ಈ ಹನಿಟ್ರ್ಪಾಪ್ ವಿಚಾರವಾಗಿ ಬಿಜೆಪಿ ಶಾಸಕ ಮುನಿರತ್ನ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ವಿರುದ್ಧ ನೇರ ಆರೋಪಗಳನ್ನು ಮಾಡುತ್ತಿದ್ದು, ಸದನದಲ್ಲಿ ಕೆಎನ್‌ ರಾಜಣ್ಣ ಹನಿಟ್ರ್ಯಾಪ್‌ ವಿಚಾರ ಹೇಳುತ್ತಿದ್ದಂತೆ ಬಿಜೆಪಿ ಶಾಸಕ ಮುನಿರತ್ನ ಮಾತನಾಡಿದ್ದು, ನನ್ನ ಮೇಲೆ ರೇಪ್ ಕೇಸ್ ಹಾಕಿ ನನ್ನ ಜೀವನವನ್ನೇ ಹಾಳು ಮಾಡಿದ್ದಾರೆ ಎಂದು ಮುನಿತರತ್ನ ಕಣ್ಣೀರು ಹಾಕಿದ್ದಾರೆ.

ಈ ವೇಳೆ ಅಜ್ಜಯ ಮತ್ತೆ ಶನಿ ಮಹಾತ್ಮ ದೇವರ ಫೋಟೋ ತೋರಿಸಿ ಪ್ರಮಾಣ ಮಾಡಲಿ ಎಂದು ಸವಾಲು ಮಾಡಿದ್ದಾರೆ. ಸದನದಲ್ಲಿ ರಾಜಣ್ಣ ಹೇಳಿಕೆ ಸದನದಲ್ಲಿಯೇ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಗಂಭೀರ ಆರೋಪವೊಂದನ್ನು ಮಾಡಿದ ಬಳಿಕ ಇದು ರಾಜ್ಯಾದ್ಯಂತ ಸಂಚಲನ ಮೂಡಿಸಿತು.

“ಕರ್ನಾಟಕದಲ್ಲಿ 48 ರಾಜಕಾರಣಿಗಳು ಹನಿಟ್ರ್ಯಾಪ್‌ಗೆ ಸಿಕ್ಕಿದ್ದಾರೆ. ಇದರಲ್ಲಿ ರಾಜ್ಯದವರು ಮಾತ್ರ ಅಲ್ಲ, ಕೇಂದ್ರದ ನಾಯಕರೂ ಇದ್ದಾರೆ” ಎಂದು ವಿಧಾನಸಭೆಯಲ್ಲಿ ಹೇಳಿದರು.

Leave a comment

Leave a Reply

Your email address will not be published. Required fields are marked *

Related Articles

ಧರ್ಮಸ್ಥಳ ಪ್ರಕರಣ: ಮೃತದೇಹಗಳ ಅಸ್ತಿಪಂಜರ ಪತ್ತೆ ಕಾರ್ಯಾಚರಣೆಗೆ ಜಿಪಿಆರ್ ಬಳಕೆಗೆ ಆಗ್ರಹ

ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳ ಪತ್ತೆಗೆ ಜಿಪಿಆರ್ ಬಳಕೆ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ....

ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ  ಜೈಲು ಶಿಕ್ಷೆ

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ...

ಧರ್ಮಸ್ಥಳ ಅಪರಿಚಿತ ಸಾವಿನ ಪ್ರಕರಣದ ಯುಡಿಆರ್ ಮಾಹಿತಿ ಡಿಲೀಟ್ ಬೆಳ್ತಂಗಡಿ ಪೊಲೀಸರ ಮೇಲೆ ಸಂಶಯದ ನೆರಳು

“ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಳಿಸಿರುವಂತೆಯೇ 2000 ದಿಂದ...

ಎಮ್ಮೆ ಕಟ್ಟುತ್ತಿದ್ದ ಶೆಡ್ ದ್ವಂಸ ರೊಚ್ಚಿಗೆದ್ದ ರೈತ ದಂಪತಿ; ಕಾಂಗ್ರೆಸ್ ಶಾಸಕರ ಕಚೇರಿಯಲ್ಲಿ ಎಮ್ಮೆ ಕಟ್ಟಿಹಾಕಿ ಆಕ್ರೋಶ

ತೆಲಂಗಾಣ: ಜಾನುವಾರಗಳ ಶೆಡ್ ಧ್ವಂಸಕ್ಕೆ ಶಾಸಕರೇ ಕಾರಣ ಎಂದು ಆರೋಪಿಸಿದ ರೈತ ದಂಪತಿ, ಕಾಂಗ್ರೆಸ್ ಶಾಸಕ...