ಪೆರ್ಡೂರು ಬಿಜೆಪಿ ಮುಖಂಡ ವೈನ್ ಶಾಪ್ ಮಾಲೀಕ ಸುಭಾಷ್ ಹೆಗ್ಡೆ ಯಿಂದ ವಯೋವೃದ್ಧರ ಮೇಲೆ ಹಲ್ಲೆ ಜೀವ ಬೆದರಿಕೆ ಪ್ರಕರಣ ದಾಖಲು

3

ಪೆರ್ಡೂರು ಬಿಜೆಪಿ ಮುಖಂಡ, ವೈನ್ ಶಾಪ್ ಮಾಲೀಕ ಸುಭಾಷ್ ಹೆಗ್ಡೆ ಯಿಂದ ವಯೋವೃದ್ಧರ ಮೇಲೆ ಹಲ್ಲೆ ಹಾಗೂ ಜೀವ ಬೆದರಿಕೆ ದೂರು ದಾಖಲು

ಪದ್ಮನಾಭ ಅವರು ತಮ್ಮ ಜಾಗದಲ್ಲಿದ್ದ ನಾಗಬನವನ್ನ ಅಭಿವೃದ್ಧಿಪಡಿಸಿ ಅದಕ್ಕೆ ಸುತ್ತಲೂ ಕಾಂಪೌಂಡ್ ನಿರ್ಮಿಸುವ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅದಕ್ಕೆ ಅಡ್ಡಿ ಪಡಿಸುವ ಉದ್ದೇಶದಿಂದ ನಾಗಬನ ದಿಂದ

ಪಕ್ಕದಲ್ಲಿ ಅವರ ಪಟ್ಟಾ ಜಾಗದಲ್ಲಿ ಮೂರು ನಾಲ್ಕು ಮನೆಯವರಿಗೂ ಉಪಯೋಗಕ್ಕಾಗಿ ರಸ್ತೆಯನ್ನು ಕೂಡ ನೀಡಿದ್ದರು ಇವರ ನಾಗಬನದಲ್ಲಿ ಅಭಿವೃದ್ಧಿ ಕಾರ್ಯವನ್ನು ಹಾಗೂ ಇವರ ಜಾಗದಲ್ಲಿ ನಡೆಸಲು

ಉದ್ದೇಶಿಸಿದ್ದ ಅಭಿವೃದ್ಧಿ ಕಾರ್ಯವನ್ನ ತಡೆಯಬೇಕೆನ್ನುವ ದುರುದ್ದೇಶದಿಂದ ರಸ್ತೆ ಹಾಗೂ ಪದ್ಮನಾಭ ಅವರ ಜಾಗಕ್ಕೆ ಜಲ್ಲಿಹಾಗೂ ಮರಮಟ್ಟುಗಳನ್ನು ತಂದು ಹಾಕಿ ತೊಂದರೆ ನೀಡಿರುವುದು ಸುಭಾಸ್ ಹೆಗ್ಡೆಯ ಗೂಂಡಾಗಿರಿಗೆ ಸ್ಪಷ್ಟ ನಿದರ್ಶನವಾಗಿದೆ

ಈ ಹಿಂದೆ ಕೂಡ ಹಣದ ದರ್ಪದಿಂದ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಬಡಜನರಿಗೆ ಅನ್ಯಾಯ ಮಾಡಿರುವುದು ಸಾಕಷ್ಟು ನಿದರ್ಶನವಿದೆ ಎನ್ನುತ್ತಾರೆ ಸ್ಥಳೀಯರು

ಬಿಜೆಪಿ ಮುಖಂಡ ಎಂದು ಹೇಳಿಕೊಂಡು ನಾಗದೇವರ ಪೂಜೆ ಹಾಗೂ ನಾಗಬನವನ್ನು ಅಭಿವೃದ್ಧಿ ಪಡಿಸಲು ಆಡ್ಡಿ ಪಡಿಸಿದ್ದು ಎಷ್ಟು ಸರಿಯನ್ನೋದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಕೂಡಲೆ ಸುಭಾಸ್ ಹೆಗ್ಡೆ ಯನ್ನು ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

ದೂರುದಾರರಾದ ಪದ್ಮನಾಭ (78) ಇವರ ಬಾಬ್ತು 1.38 ಎಕ್ರೆ ಜಾಗವು ಪೆರ್ಡೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿದ್ದು

ಸದರಿ ಜಾಗಕ್ಕೆ ದಿನಾಂಕ 18/03/2025 ರಂದು ಬೆಳಿಗ್ಗೆ 11 ಗಂಟೆಗೆ ಪದ್ಮನಾಭ ಅವರು ಹಾಗೂ ಅವರ ಮಗ ಹೋಗಿದ್ದು ಸದರಿ ಸ್ಥಳದಲ್ಲಿ ಪೆರ್ಡೂರಿನ ಸುಭಾಸ್‌ ಹೆಗ್ಡೆ ರವರು ಅಕ್ರಮವಾಗಿ ಪ್ರವೇಶಿಸಿ ಮರದ ತುಂಡು ಹಾಗೂ ಕಲ್ಲುಗಳನ್ನು ಶೇಖರಿಸಿಟ್ಟಿದ್ದು
ಸದರಿ ಸ್ವತ್ತುಗಳನ್ನು ತೆರವುಗೊಳಿಸುವಂತೆ ಅವರಲ್ಲಿ ವಿನಂತಿಸಿಕೊಂಡಾಗ ಅವರು ದೂರುದಾರರ ಕಾಲರ್‌ ಪಟ್ಟಿ ಹಿಡಿದು” ಅವ್ಯಾಚ್ಯ ಶಬ್ದದಿಂದ ಬೈದು ಕೈಯಿಂದ ತಳ್ಳಿದ್ದು ಅಲ್ಲದೇ ʼʼನಿನ್ನ ಕೈಕಾಲು ಕಡಿದು ಹಾಕಿ ಕೊಂದು ಜಮೀನಿನಲ್ಲಿ ಹೂತು ಹಾಕುತ್ತೇನೆ ʼʼ ಎಂದುಜೀವ ಬೆರದರಿಕೆ ಹಾಕಿರುತ್ತಾನೆ.
ಈ ಬಗ್ಗೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 25/2025 U/S : 329(3), 115(2). 352, 351(2) BNS ರಂತೆ ಪ್ರಕರಣ ದಾಖಲಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ರಾಜ್ಯದ 18 ಸ್ಥಳಗಳಲ್ಲಿ ಎನ್ಐಎ ದಾಳಿ

ನವದೆಹಲಿ: ಬಜರಂಗದಳ ಸದಸ್ಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶನಿವಾರ...

ಪರಶುರಾಮ್ ಥೀಮ್ ಪಾರ್ಕ್ ವಿಚಾರದಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ ಗೊಂದಲದ ನಡೆ ಕೂಡಲೆ ಸೃಷ್ಟಿಕರಣ ನೀಡಿ ::ನಿತಿನ್ ಪೂಜಾರಿ ಆಗ್ರಹ

ಧಾರ್ಮಿಕ ನಂಬಿಕೆಯ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ : ಉದಯಕುಮಾರ್ ಶೆಟ್ಟಿ ಅವರು ಸಲ್ಲಿಸಿದ ಹೈಕೋರ್ಟ್...

ಧರ್ಮಸ್ಥಳ 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಪ್ರಕರಣದ...

ಧರ್ಮಸ್ಥಳ ಆಗೆದ ಸ್ಥಳದಲ್ಲಿ ಸಿಗದ ಅವಶೇಷಗಳು ಕಾರ್ಯಾಚರಣೆ ನಾಳೆಗೆ ಮುಂದೂಡಿದ ಎಸ್ಐಟಿ

“ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಪ್ರಕರಣದ ಸಾಕ್ಷಿ-ದೂರುದಾರನಾಗಿರುವ ವ್ಯಕ್ತಿ ಶವಗಳನ್ನು...