ಪೋಕ್ಸೋ ಪ್ರಕರಣ ಖುದ್ದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಡೆ

60

ಪೋಕ್ಸೋ ಪ್ರಕರಣದ ಸಂಬಂಧ ಮಾರ್ಚ್ 15 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರಿಗೆ 1ನೇ ತ್ವರಿತಗತಿ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ಗೆ ಹೈಕೋರ್ಟ್ ತಡೆ ನೀಡಿದೆ.

ಇದರ ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪ ಖುದ್ದು ಹಾಜರಾತಿಗೂ ವಿನಾಯಿತಿ ನೀಡಿದೆ. ಈ ಮೂಲಕ ಬಿಎಸ್ ಯಡಿಯೂಪ್ಪ ಅವರಿಗೆ ರಿಲೀಫ್ ಸಿಕ್ಕಂತಾಗಿದೆ.

ಈ ವೇಳೆ ಬಿಎಸ್ ಯಡಿಯೂರಪ್ಪ ಅವರ ಅರ್ಜಿಯ ವಿಚಾರಣೆ ಅಗತ್ಯವಿದೆ ಎಂದು ಹೇಳಿದ ನ್ಯಾಯಾಲಯವು ಕಾಗ್ನಿಜೆನ್ಸ್, ಸಮನ್ಸ್ ಆದೇಶಕ್ಕೆ ತಡೆ ನೀಡಿದೆ. ವಿಚಾರಣೆ ವೇಳೆ ಹೈಕೋರ್ಟ್ ಮಧ್ಯಂತರ ರಿಲೀಫ್ ನೀಡಿತ್ತು.

ಖುದ್ದು ಹಾಜರಾತಿಯಿಂದಲೂ ಹೈಕೋರ್ಟ್ ವಿನಾಯಿತಿ ನೀಡಿತ್ತು. 2024ರ ಫೆ‌ಬ್ರವರಿ 2ರಂದು ಅನುಚಿತವಾಗಿ ಸ್ಪರ್ಶಿಸಿದ ಆರೋಪವಿದೆ. ಒಂದು ತಿಂಗಳ ಬಳಿಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಸ್ಥಳದಲ್ಲಿದ್ದ ಸಾಕ್ಷಿಗಳು ಆ ರೀತಿಯ ಘಟನೆ ನಡೆದಿಲ್ಲವೆಂದಿದ್ದಾರೆ. ಬಾಲಕಿ, ಆಕೆಯ ತಾಯಿಯ ಹೇಳಿಕೆ ಮೇಲೆ ಆರೋಪಪಟ್ಟಿ ದಾಖಲಿಸಿದ್ದಾರೆ. ತಾಯಿಯ ಮೊಬೈಲ್ನಲ್ಲಿದ್ದ ಸಂಭಾಷಣೆ ಬಿಎಸ್ ಯಡಿಯೂರಪ್ಪ ಅಳಿಸಿಲ್ಲ

. ಪೊಲೀಸರು ಹಾಕಿರುವ ಐಟಿ ಸೆಕ್ಷನ್ ದೂರುದಾರರಿಗೆ ಅನ್ವಯವಾಗುತ್ತದೆ ಎಂದು ವಾದಿಸಿದರು. 1 ತಿಂಗಳು 12 ದಿನ ತಡವಾಗಿ ಪೊಕ್ಸೋ ಕೇಸ್ ದಾಖಲಿಸಲಾಗಿದೆ.

ಘಟನೆ ನಡೆದಿದ್ದರೆ ಯಾರೂ ಇಷ್ಟು ತಡವಾಗಿ ದೂರು ದಾಖಲಿಸುತ್ತಿರಲಿಲ್ಲ. ಸಮನ್ಸ್ ರದ್ದುಪಡಿಸಿ ಹೊಸದಾಗಿ ಪರಿಶೀಲನೆಗೆ ಹಿಂದೆ ಆದೇಶಿಸಲಾಗಿತ್ತು.

ಈಗ ವಿಶೇಷ ಕೋರ್ಟ್ ಕಾಗ್ನಿಜೆನ್ಸ್ ಪಡೆದು ಸಮನ್ಸ್ ಜಾರಿಗೊಳಿಸಿದೆ ಎಂದು ಬಿಎಸ್ ಯಡಿಯೂರಪ್ಪ ಪರ ವಕೀಲರು ವಾದಿಸಿದರು

. ಬಿಎಸ್ ಯಡಿಯೂರಪ್ಪ ವಕೀಲರ ಮನವಿಗೆ ಅಡ್ವೊಕೇಟ್ ಜನರಲ್ ಆಕ್ಷೇಪಿಸಿದರು. ಹೈಕೋರ್ಟ್ ಸೂಚನೆಯಂತೆ ವಿಶೇಷ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಹೀಗಾಗಿ ಸಮನ್ಸ್ ಗೆ ತಡೆ ನೀಡದಂತೆ ಮನವಿ ಮಾಡಿದರು

Leave a comment

Leave a Reply

Your email address will not be published. Required fields are marked *

Related Articles

ಕಾಂಗ್ರೆಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದೆ ಜನರ ತೀರ್ಪು ಗೌರವಿಸಿ 2 ವರ್ಷ ಶಾಸಕರಾಗಿ ಕೆಲಸ ಮಾಡಲು ಜೀವರಾಜ್ ಅವರಿಗೆ ಅವಕಾಶ ನೀಡಬೇಕು’: ಬಿ ವೈ ವಿಜಯೇಂದ್ರ

ಬೆಂಗಳೂರು: 2023ರಲ್ಲಿ ಪರಾಭವಗೊಂಡಾಗಲೇ ಡಿ ಎನ್ ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ವರೆಗೆ...

ಪಂಚ ರಾಜ್ಯ ಚುನಾವಣೋತ್ತರ ಸಮೀಕ್ಷೆ: ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಬಹುಮತ ತಮಿಳುನಾಡು ಡಿ ಎಂ ಕೆ ಕೇರಳ ಯುಡಿಎಫ್ ಮೈತ್ರಿಕೂಟ ಅಧಿಕಾರಕ್ಕೆ??

ನವದೆಹಲಿ: ಬುಧವಾರ ನಡೆದ ಹಲವಾರು ಚುನಾವಣೋತ್ತರ ಸಮೀಕ್ಷೆಗಳು ಅಸ್ಸಾಂನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಮತ್ತು ಪಶ್ಚಿಮ...

ನಾಯಕತ್ವ ಬದಲಾವಣೆ ಸದ್ಯದ ಮಟ್ಟಿಗೆ ಯತೀಂದ್ರ ಹೈಕಮಾಂಡ್ ಯತೀಂದ್ರಗೆ ಟಾಂಗ್ ನೀಡಿದ ಡಿಕೆ ಶಿವಕುಮಾರ್

“ಮಂಗಳೂರು: ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಿದ್ದರಾಮಯ್ಯನವರೇ ಐದು ವರ್ಷ...

ಬಿಜೆಪಿ ಆರು ಚುನಾವಣಾ  ಕ್ಷೇತ್ರಗಳ  ಪ್ರವಾಸ ಉಸ್ತುವಾರಿ ಹುದ್ದೆಗೆ ರಾಜೀನಾಮೆ ನೀಡಿದ ಅಣ್ಣಾಮಲೈ

“ಕೊಯಮತ್ತೂರು: 2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು...