ದುಬೈನಲ್ಲಿ ಅಂತರಾಷ್ಟ್ರೀಯ ಕುಸ್ತಿ ಕ್ರೀಡಾ ಸ್ಪರ್ಧೆ ಆಯೋಜನೆಗೆ ಸಿದ್ಧತೆ ::ಖಾಜಿ ಅಬ್ದುಲ್ ಮತೀನ್

1

ಮುಂಬೈ: ಜಲಗಾವ್ ಜಿಲ್ಲೆಯ ಚಾಮೇರ್ ನಲ್ಲಿ ಆಯೋಜಿಸಲಾದ ಅಂತರರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ ಮಾದರಿಯಲ್ಲಿ ದುಬೈಯಲ್ಲಿ ಅಂತರಾಷ್ಟ್ರೀಯ ಕುಸ್ತಿ ಕ್ರೀಡಾ ಸ್ಪರ್ಧೆ ಆಯೋಜನೆಗೆ ಸಿದ್ಧತೆಯಾಗಿದೆ ಖಾಜಿ ಅಬ್ದುಲ್ ಮತೀನ್

ಮಹಾರಾಷ್ಟ್ರದ ಜಲಗಾವ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತ,ಸೇರಿದಂತೆ ಫ್ರಾನ್ಸ್, ಮವಾ. ಉಜೈಕಿಸ್ತಾನ್, ರೊಮೇನಿಯಾ, ಎಸ್ಟೋನಿಯಾ, ಇರಾನ್, ಬ್ರೆಜಿಲ್ ಮತ್ತು ಜಾರ್ಜಿಯಾದ ಕುಸ್ತಿಪಟುಗಳು ಭಾಗವಹಿಸಿದರು. ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾರತೀಯ ಕುಸ್ತಿಪಟುಗಳು ಗೆಲುವು ಸಾಧಿಸಿದರು.

ಬೃಹತ್ ಪ್ರೇಕ್ಷಕ ಗುಂಪಿನ ಎದುರು. ಭಾರತೀಯ ಕುಸ್ತಿಪಟುಗಳು ಪರಂಪರೆಯ ಕೆಂಪು ಮಣ್ಣಿನ ಕುಸ್ತಿ ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದರು.

ನಾಮೋ ಕುಸ್ತಿ ಮಹಾಕುಂಭ 2 ಸಂಭ್ರಮದ ಭಾಗವಾಗಿ ಆಯೋಜಿಸಲಾದ ದೇವಭಾವು ಕೇಸರಿ ಅಂತರರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ನಲ್ಲಿ

ಮಹಾರಾಷ್ಟ್ರ ಕೇಸರಿ ಅಮೃತಾ ಪೂಜಾರಿ ಮತ್ತು ಮೂರು ಬಾರಿ ಮಹಾರಾಷ್ಟ್ರ ಕೇಸರಿ ಪ್ರಶಸ್ತಿ ವಿಜೇತ ವಿಜಯ್ ಚೌಧರಿ ತಮ್ಮ ಅಂತರಾಷ್ಟ್ರೀಯ ಪ್ರತಿಸ್ಪರ್ಧಿಗಳನ್ನು ಸೋಲಿಸಿ ಪ್ರಾಬಲ್ಯವನ್ನು ಪ್ರದರ್ಶಿಸಿದರು.

ಭಾರತದಸಂದರ್ಭದಲ್ಲಿ ವಿಶೇಷ ಸಮಾರಂಭವನ್ನು ಆಯೋಜಿಸಲಾಗಿತ್ತು, ಈ ವೇಳೆ ದುಬೈನಿಂದ ಆಗಮಿಸಿದ ಖಾಝಿ ಅಬ್ದುಲ್ ಮತೀನ್ ಅವರನ್ನು ಮಹಾರಾಷ್ಟ್ರದ ಮಂತ್ರಿ ಗಿರೀಶ್ ಮಹಾಜನ್ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮತೀನ್ ಅವರು ಕುಸ್ತಿ ಅಭಿವೃದ್ಧಿ ಕುರಿತಂತೆ ಸಚಿವರು ಹಾಗೂ ಗಣ್ಯರೊಂದಿಗೆ ಚರ್ಚಿಸಿದರು.

11 ಗಂಟೆಗಳ ಕಾಲ ನಡೆದ ಈ ಅದ್ದೂರಿ ಕುಸ್ತಿ ಪಂದ್ಯವನ್ನು ಮಹಾರಾಷ್ಟ್ರದ ಮಂತ್ರಿ ಮಹಾಜನ್ ಅವರ ನೇತೃತ್ವದಲ್ಲಿ ಆಯೋಜಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ನೀರು ಪೂರೈಕೆ ಮತ್ತು ಸನಿತೇಶನ್ ಸಚಿವ ಹಾಗೂ ಜಲಗಾವ್ ಪಾಲನಾ ಸಚಿವ ಗುಲಾಬ್ರಾವ್ ಪಾಟೀಲ್, ಕೇಂದ್ರ ಕ್ರೀಡಾ ರಾಜ್ಯ ಸಚಿವ ರಕ್ಷಾ ಖಡ್ಡೆ,

ಸಂಸದೆ ಸ್ಮಿತಾ ವಾಫ್, ಜಲಗಾವ್ ಪೊಲೀಸ್ ಅಧೀಕ್ಷಕ ಡಾ. ಮಹೇಶ್ವರರೆಡ್ಡಿ ಹಾಗೂ ಕುಸ್ತಿ ಮಹಾಸಂಘದ ಅಧಿಕಾ-ರಿಗಳು ಉಪಸ್ಥಿತರಿದ್ದರು. ಅಲಂಕೃತ ಅತಿಥಿಗಳಲ್ಲಿ ಜಾಮ್ಮೇರ್ ಮುನಿಸಿಪಲ್ ಮಾಜಿ ಅಧ್ಯಕ್ಷೆ ಸಾಧನಾ ಮಹಾಜನ್,

ದುಬೈನ ಖಾಝಿ ಅಬ್ದುಲ್ ಮತೀನ್, ಉಪ ಪೊಲೀಸ್ ಆಯುಕ್ತ ನರಸಿಂಗ್ ಯಾದವ್, ಒಲಿಂಪಿಕ್ ಪದಕ ವಿಜೇತ ರವಿ ದಾಹಿಯಾ, ಮತ್ತು ಅನೇಕ ಕುಸ್ತಿ ಅಧಿಕಾರಿಗಳು ಭಾಗವಹಿಸಿದರು.

ಈ ಅದ್ಭುತ ಕುಸ್ತಿ ಕ್ರೀಡಾಕೂಟವನ್ನು 50,000ಕ್ಕೂ ಹೆಚ್ಚು ಪ್ರೇಕ್ಷಕರು ಉತ್ಸಾಹದಿಂದ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಖಾಜಿ ಅಬ್ದುಲ್ ಮತೀನ್ ದುಬೈ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಸ್ಪರ್ಧೆ ಆ ಯೋಜನೆ ಮಾಡಲಾಗಿದೆ ಎಂದರು.

ದುಬೈನ ಈ ಮಹತ್ವದ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಉನ್ನತ ಉದ್ಯಮಿಗಳು, ಸಮಾಜಸೇವಕರು, ಸಂಸದರು, ಶಾಸಕರು, ಸಚಿವರು, ಸಿನಿತಾರೆಯರು ಮತ್ತು ಪ್ರಸಿದ್ಧ ಕ್ರೀಡಾ ವ್ಯಕ್ತಿತ್ವಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ದುಬೈ ಟೂರ್ನಿಯ ಅಧಿಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಈ ಚಾಂಪಿಯನ್‌ಶಿಪ್ ಭಾರತೀಯ ಕುಸ್ತಿಯ ಶ್ರೀಮಂತ ಪರಂಪರೆಯನ್ನು ಸಂಭ್ರಮಿಸುತ್ತಿದ್ದಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿದ ಸಹಯೋಗಕ್ಕೆ ವೇದಿಕೆ ರೂಪಿಸಿತು.

Leave a comment

Leave a Reply

Your email address will not be published. Required fields are marked *

Related Articles

ವಿಧಾನಸಭೆ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲ್ ನಲ್ಲಿ ರಮ್ಮಿ ಅಡಿ ಕೃಷಿ ಖಾತೆಯನ್ನು ಕಳೆದುಕೊಂಡ ಸಚಿವ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲಿನಲ್ಲಿ ರಮ್ಮಿ ಆಡುತ್ತಿದ್ದ ಮಾಣಿಕ್ರಾವ್ ಕೊಕಾಟೆ ಕೃಷಿ...

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ದೋಷಿ ತೀರ್ಪು ವಿಶೇಷ ನ್ಯಾಯಾಲಯದಿಂದ ನಾಳೆ ಶಿಕ್ಷೆ ಪ್ರಮಾಣ ಪ್ರಕಟ

ಬೆಂಗಳೂರು: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಾಜಿ ಸಂಸದ ಪ್ರಜ್ವಲ್...

ಅವಧೇಶಾನಂದ ಮಹಾರಾಜ್ ಕೊಲೆ ಪ್ರಕರಣ: ಆರ್ ಎಸ್ಎಸ್ ಮಾಜಿ ಪ್ರಚಾರಕ ಉತ್ತಮ್ ಗಿರಿಗೆ ಜೀವಾವಧಿ ಶಿಕ್ಷೆ

ಸಿರೋಹಿ: 2018 ರಲ್ಲಿ ಏಕಲ್ ವಿದ್ಯಾಲಯದ ಪೋಷಕ ಅವಧೇಶಾನಂದ ಮಹಾರಾಜ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ...

2008 ಮಾಲೆಗಾಂವ್ ಸ್ಫೋಟ ಪ್ರಕರಣ: ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಸೇರಿ 7 ಆರೋಪಿಗಳು ಖುಲಾಸೆ

ಮುಂಬೈ: 2008 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಠಾಕೂರ್,...