ಬದುಕು ಆಸೆ ಇದ್ದರೆ, ಬಲೂಚಿಸ್ತಾನ್  ದಿಂದ ಹಿಂದೆ ಸರಿಯಿರಿ ಪಾಕಿಸ್ತಾನ, ಚೀನಾಕ್ಕೆ ಎಚ್ಚರಿಕೆ ನೀಡಿದ :: ಬಲೂಚಿಸ್ತಾನ್ ಲಿಬರೇಶನ್ ಆರ್ಮಿ

2

“ಬಲೂಚಿಸ್ತಾನ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನದ ಪ್ರಯಾಣಿಕ ರೈಲು ಹೈಜಾಕ್ ಮಾಡಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ (ಬಿಎಲ್‌ಎ) ಇದೀಗ ನೇರವಾಗಿ ಚೀನಾ ಮತ್ತು ಪಾಕಿಸ್ತಾನ ಸೇನೆಗೆ ಖಡಕ್ ಎಚ್ಚರಿಕೆ ನೀಡಿದೆ.

ಪಾಕಿಸ್ತಾನದಲ್ಲಿ ರೈಲು ಅಪಹರಣದ ಸುದ್ದಿ ವ್ಯಾಪಕ ಚರ್ಚೆಗೆ ಗ್ರಸಾವಾಗುತ್ತಿದ್ದು, ಈ ವರೆಗೂ ಪಾಕಿಸ್ತಾನ ಸೇನೆ 150 ಒತ್ತೆಯಾಳುಗಳನ್ನು ರಕ್ಷಣೆ ಮಾಡಿದೆ.

ಅಂತೆಯೇ ರೈಲು ಹೈಜಾಕ್ ಮಾಡಿದ್ದ ಬಿಎಲ್ಎ ಬಂಡುಕೋರರ ಪೈಕಿ 27 ಮಂದಿಯನ್ನು ಕಾರ್ಯಾಚರಣೆಯಲ್ಲಿ ಕೊಂದು ಹಾಕಿದೆ. ಇನ್ನು ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ (ಬಿಎಲ್‌ಎ) ವಿಭಾಗವಾದ ಮಜೀದ್ ಬ್ರಿಗೇಡ್ ಈ ಅಪಹರಣದ ಹೊಣೆಯನ್ನು ಹೊತ್ತುಕೊಂಡಿದೆ

. ಅಂದಹಾಗೆ ಈ ಮಜೀದ್ ಬ್ರಿಗೇಡ್ ಬಿಎಲ್ಎಯ ಆತ್ಮಹತ್ಯಾ ದಾಳಿ ಘಟಕವಾಗಿದ್ದು, ಈಗಾಗಲೇ ಪಾಕಿಸ್ತಾನದಾದ್ಯಂತ ಈ ಘಟಕ ಹಲವು ಆತ್ಮಹತ್ಯಾ ದಾಳಿಗಳನ್ನು ನಡೆಸಿದೆ.

ಮಾತ್ರವಲ್ಲದೇ ಇದೇ ಮಜೀದ್ ಘಟಕ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಮೇಲೆ ಹಲವಾರು ದಾಳಿಗಳನ್ನು ನಡೆಸಿದೆ.

ಇನ್ನು ಪಾಕಿಸ್ತಾನ ಮತ್ತು ಚೀನಾ ಸೇನೆ ಕಾರ್ಯಾಚರಣೆ ಕುರಿತು ಮಾತನಾಡಿರುವ ಬಿಎಲ್ಎದ ಮಜೀದ್ ಬ್ರಿಗೇಡ್ ಮುಖ್ಯಸ್ಥ, ‘ಬದುಕುವ ಆಸೆ ಇದ್ದರೆ ಬಲೂಚಿಸ್ತಾನದಿಂದ ಹಿಂದೆ ಸರಿಯಿರಿ’ ಎಂದು ಎಚ್ಚರಿಕೆ ನೀಡಿದ್ದಾರೆ. ನಮ್ಮ ಬಿಎಲ್ಎ ಸೈನಿಕರ ಮೇಲೆ ದಾಳಿ ಮಾಡಿದರೆ ಇಡೀ ರೈಲನ್ನು ಸ್ಫೋಟಿಸುತ್ತೇವೆ.

ಅಲ್ಲದೆ ರೈಲಿನಲ್ಲಿರುವವರನ್ನು ಗುಂಡಿಕ್ಕಿ ಕೊಂದು ಹಾಕುತ್ತೇವೆ ಪಾಕಿಸ್ತಾನಿ ವಾಯುಪಡೆಗೆ ಎಚ್ಚರಿಕೆ ನೀಡಿದ್ದಾರೆ. ‘ನಮ್ಮ ದಾಳಿಯ ಉದ್ದೇಶ ಬಹಳ ಸ್ಪಷ್ಟವಾಗಿತ್ತು. ಬಲೂಚಿಸ್ತಾನದಿಂದ ತಕ್ಷಣವೇ ಚೀನಾ ಮತ್ತು ಪಾಕಿಸ್ತಾನ ಸೇನೆ ಹಿಂದೆ ಸರಿಯಬೇಕು

. ಚೀನಾ ಮತ್ತು ಪಾಕಿಸ್ತಾನಕ್ಕೆ ಈ ಎಚ್ಚರಿಕೆಯನ್ನು ನಮ್ಮ ನಾಯಕ ಜನರಲ್ ಅಸ್ಲಾಂ ಬಲೂಚ್ ಕೂಡ ನೀಡಿದ್ದರು, ಆದರೆ ಚೀನಾ ಇದಕ್ಕೆ ಗಮನ ಕೊಡಲು ವಿಫಲವಾಯಿತು. ಗ್ವಾದರ್ ಮತ್ತು ಉಳಿದ ಬಲೂಚಿಸ್ತಾನ ಪ್ರದೇಶಗಳು ಬಲೂಚ್‌ಗೆ ಸೇರಿವೆ ಎಂದು ನಾವು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ.

ನಮ್ಮ ಭೂಮಿ ಮತ್ತು ಸಮುದ್ರವನ್ನು ರಕ್ಷಿಸುವುದು ನಮ್ಮ ಕರ್ತವ್ಯ. ನಮ್ಮ ಆಪರೇಷನ್ ಜಿರ್ ಪಹಜೆಗ್, ಇದು ಚೀನಾ, ಪಾಕಿಸ್ತಾನ ಮತ್ತು ಇತರ ವಿದೇಶಿ ಶಕ್ತಿಗಳಿಂದ ಬಲೂಚ್ ಸಮುದ್ರವನ್ನು ರಕ್ಷಿಸಲು ಪ್ರಾರಂಭಿಸಲಾದ ನಿರಂತರ ಕಾರ್ಯಾಚರಣೆಯಾಗಿದೆ’ ಎಂದು ಹೇಳಿದ್ದಾರೆ.

ಕ್ಸಿ ಜಿನ್ ಪಿಂಗ್ ಜೀವನದಲ್ಲೇ ಮರೆಯದ ಪಾಠ ಕಲಿಸುತ್ತೇವೆ ಇದೇ ವೇಳೆ ಚೀನಾ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಮಜೀದ್ ಬ್ರಿಗೇಡ್, ‘ಚೀನಾ, ನೀವು ನಮ್ಮ ಒಪ್ಪಿಗೆಯಿಲ್ಲದೆ ಇಲ್ಲಿಗೆ ಬಂದಿದ್ದೀರಿ, ನಮ್ಮ ಶತ್ರುಗಳನ್ನು ಬೆಂಬಲಿಸಿದ್ದೀರಿ,

ನಮ್ಮ ಹಳ್ಳಿಗಳನ್ನು ನಾಶ ಮಾಡುವಲ್ಲಿ ಪಾಕಿಸ್ತಾನಿ ಮಿಲಿಟರಿಗೆ ಸಹಾಯ ಮಾಡಿದ್ದೀರಿ. ಆದರೆ ಈಗ ನಮ್ಮ ಸರದಿ.. ಬಿಎಲ್ಎ ನಿಮ್ಮನ್ನು ಬಲೂಚ್ ನೆಲದಿಂದ ಒದ್ದು ಓಡಿಸುತ್ತದೆ. ಮಜೀದ್ ಬ್ರಿಗೇಡ್ ಸಕಲ ರೀತಿಯಲ್ಲೂ ಸಿದ್ಧವಿದ್ದು, ದೊಡ್ಡ ಸಂಖ್ಯೆಯಲ್ಲಿ ಸ್ವಯಂ ಸೇವಕರು ನಮ್ಮ ಹೋರಾಟಕ್ಕೆ ಕೈಜೋಡಿಸುತ್ತಿದ್ದಾರೆ.

ನಮ್ಮ ನೆಲ-ಜಲಕ್ಕಾಗಿ ಬಲಿದಾನಕ್ಕೆ ಸಿದ್ಧವಾಗಿದ್ದಾರೆ. ಚೀನಾ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಲು ಮಜೀದ್ ಬ್ರಿಗೇಡ್ ನಲ್ಲಿ ವಿಶೇಷ ಘಟಕ ರಚನೆಯಾಗಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೀನು ಜೀವಂತವಾಗಿರಬೇಕು ಎಂದರೆ ಕೂಡಲೇ ಬಲೂಚಿಸ್ತಾನದಿಂದ ನಿನ್ನ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೋ.. ಇಲ್ಲವೆಂದರೆ ಚೀನಾ ಸೇನೆಗೆ ನಾವು ತಕ್ಕ ಪಾಠ ಕಲಿಸುತ್ತೇವೆ. ನೀನು ಜೀವನ ಪರ್ಯಂತ ಮರೆಯದಂತೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಕೇರಳ ನರ್ಸ್ ನಿಮಿಷಾ ಪ್ರಿಯಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಯೆಮೆನ್ ಗಲ್ಲು ಶಿಕ್ಷೆ ರದ್ದಾಗಿಲ್ಲ; ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ನವದೆಹಲಿ: ಯುದ್ಧಪೀಡಿತ ಯೆಮೆನ್ ದೇಶದಲ್ಲಿ ಮರಣದಂಡನೆ ಎದುರಿಸುತ್ತಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಪ್ರಕರಣಕ್ಕೆ...

ಮ್ಯಾನ್ಮಾರ್‌ನಲ್ಲಿ ಭಾರತದ ಸರ್ಜಿಕಲ್ ಸ್ಟ್ರೈಕ್?: ಡ್ರೋನ್ ದಾಳಿಯಲ್ಲಿ ಉಲ್ಫಾ-ಐ ಕಮಾಂಡರ್ ನಯನ್ ಮೇಧಿ ಸೇರಿ 19 ಮಂದಿ ಸಾವು

ಮ್ಯಾನ್ಮಾರ್‌ನ ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ-ಇಂಡಿಪೆಂಡೆಂಟ್ (ULFA) ತನ್ನ ಪೂರ್ವ ಪ್ರಧಾನ ಕಚೇರಿಯ...

ಪಾಕಿಸ್ತಾನದ ಐಎಸ್ ಐ ಜೊತೆಗೆ ಸಂಬಂಧ ಹೊಂದಿದ್ದ ಮೋಸ್ಟ್ ವಾಂಟೆಡ್ ಉಗ್ರ ಪವಿತ್ರ ಸಿಂಗ್ ಬಟಾಲ ಬಂಧನ

“ಪಾಕಿಸ್ತಾನದ ಐಎಸ್ ಐ ಜೊತೆಗೆ ಸಂಪರ್ಕ ಹೊಂದಿರುವ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ) ಸಂಘಟನೆಯೊಂದಿಗೆ ಸಂಬಂಧ...

ಕೈಲಾಸ ಮಾನಸ ಸರೋವರ ಯಾತ್ರೆ ಸೇತುವೆ ಕುಸಿತದಿಂದ ಗೈರಾ೦ಗ್ ಕೌಂಟಿಯಲ್ಲಿ ಸಿಲುಕಿಕೊಂಡ 23 ಯಾತ್ರಿಗಳು

“ಭೂಕುಸಿತದಿಂದಾಗಿ ಸೇತುವೆ ಕುಸಿದ ಪರಿಣಾಮ, ಕೈಲಾಸ ಮಾನಸಸರೋವರಕ್ಕೆ ತೆರಳುತ್ತಿದ್ದ 23 ಯಾತ್ರಿಕರ ಗುಂಪು ಟಿಬೆಟ್‌ನ ಗೈರಾಂಗ್...