ಶಾಸಕರ ವೇತನ ಹೆಚ್ಚಳಕ್ಕೆ ಸಿದ್ದರಾಮಯ್ಯ ನೇತೃತ್ವದ ವ್ಯವಹಾರ ಸಲಹಾ ಸಮಿತಿ ಒಪ್ಪಿಗೆ

2

“ಶಾಸಕರ ವೇತನ ಹೆಚ್ಚಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ವ್ಯವಹಾರ ಸಲಹಾ ಸಮಿತಿ ಅನುಮೋದನೆ ನೀಡಿದ್ದು, ಈ ಬೆಳವಣಿಗೆ ಸಾರ್ವಜನಿಕರ ಕಣ್ಣು ಕೆಂಪಗಾಗುವಂತೆ ಮಾಡಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಡಿಸಿಎಂ ಡಿಕೆ ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಸ್ಪೀಕರ್ ಯು.ಟಿ. ಖಾದರ್ ಮತ್ತು ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಭಾಗವಹಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ಪ್ರಸ್ತಾವನೆಗೆ ಯಾವುದೇ ಪ್ರತಿರೋಧ ವ್ಯಕ್ತವಾಗಿಲ್ಲ ಎಂದು ವರದಿಯಾಗಿದೆ.

ಶಾಸಕರಿಗೆ ಎಷ್ಟರ ಪ್ರಮಾಣದಲ್ಲಿ ವೇತನ ಹೆಚ್ಚಳ ಮಾಡಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ಇದಕ್ಕೆ ಸಂಬಂಧಿಸಿದ ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಸರ್ಕಾರ ಮಂಡಿಸಲಿದೆ. ಇದಕ್ಕೆ ಒಪ್ಪಿಗೆ ಸಿಕ್ಕ ತಕ್ಷಣ ಜನಪ್ರತಿನಿಧಿಗಳ ವೇತನ ಹೆಚ್ಚಳವಾಗಲಿದೆ ಎಂದು ತಿಳಿದುಬಂದಿದೆ

. ಫೆಬ್ರವರಿ 2022ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಶಾಸಕರ ವೇತನವನ್ನು ಹೆಚ್ಚಳ ಮಾಡಿತ್ತು. ಆಗಲೂ ಕಾಂಗ್ರೆಸ್ ಅಥವಾ ಜೆಡಿಎಸ್ ನಿಂದ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ.

ಪ್ರಸ್ತುತ ಒಬ್ಬ ಶಾಸಕನ ತಿಂಗಳ ವೇತನವು 40,000 ರೂ, ಕ್ಷೇತ್ರ ಭತ್ಯೆ – 60,000 ರೂಸ ಪ್ರಯಾಣ ಭತ್ಯೆ – 60,000 ರೂ, ಆಪ್ತ ಸಹಾಯಕರ ವೇತನ – 20,000 ರೂ, ದೂರವಾಣಿ ವೆಚ್ಚ – 20,000 ರೂ, ಅಂಚೆ ವೆಚ್ಚ – 5000 ರೂ ಸೇರಿ ಒಟ್ಟು ಮೊತ್ತ – 2,05,000 ರೂ ಇದೆ.

ಈಗಾಗಲೇ ರಾಜ್ಯದ ಜನರು ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ನಿರಂತರವಾಗಿ ಬೆಲೆ ಏರಿಕೆ ಮಾಡಿ ಜನರ ಮೇಲೆ ಹೊರೆ ಹಾಕುತ್ತಿದೆ.

ಈ ಮಧ್ಯೆ ಶಾಸಕರ ವೇತನ ಹೆಚ್ಚಳ ಜನರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಏತನ್ಮಧ್ಯೆ ಕಾಂಗ್ರೆಸ್ ತನ್ನ ಶಾಸಕಾಂಗ ಪಕ್ಷದ ಸಭೆಯನ್ನು ಮಾರ್ಚ್ 4 ರಿಂದ 10ಕ್ಕೆ ನಿಗದಿಪಡಿಸಿದೆ ಎಂದು ತಿಳಿದುಬಂದಿದೆ.

ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಶಾಸಕರು ಇದರಿಂದ ಅತೃಪ್ತಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

ಅಭಿವೃದ್ಧಿಗೆ ನಿಧಿಯ ಕೊರತೆ ಎದುರಾಗಿದ್ದು, ಶಾಸಕರು ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.


ಈ ಬೆಳವಣಿಗೆ ಹಿನ್ನೆಲೆಯಲ್ಲಿ ಅಸಮಾಧಾನಿತ ಶಾಸಕರನ್ನ ಸಮಾಧಾನಪಡಿಸಲು ಮಾರ್ಚ್ 7 ಪಂದು ಬಜೆಟ್ ನಲ್ಲಿ ಮಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿಗೆ ಅನುದಾನ ಘೋಷಣೆ ಮಾಡಲುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.



https://www.kannadaprabha.com/karnataka/2025/Mar/04/cm-led-business-advisory-panel-okays-salary-hike-for-karnataka-legislators#:~:text=%E0%B2%B6%E0%B2%BE%E0%B2%B8%E0%B2%95%E0%B2%B0%20%E0%B2%B5%E0%B3%87%E0%B2%A4%E0%B2%A8%20%E0%B2%B9%E0%B3%86%E0%B2%9A%E0%B3%8D%E0%B2%9A%E0%B2%B3%E0%B2%95%E0%B3%8D%E0%B2%95%E0%B3%86%20%E0%B2%AE%E0%B3%81%E0%B2%96%E0%B3%8D%E0%B2%AF%E0%B2%AE%E0%B2%82%E0%B2%A4%E0%B3%8D%E0%B2%B0%E0%B2%BF%20%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%B0%E0%B2%BE%E0%B2%AE%E0%B2%AF%E0%B3%8D%E0%B2%AF,%E0%B2%8E%E0%B2%82%E0%B2%A6%E0%B3%81%20%E0%B2%AE%E0%B3%82%E0%B2%B2%E0%B2%97%E0%B2%B3%E0%B3%81%20%E0%B2%A4%E0%B2%BF%E0%B2%B3%E0%B2%BF%E0%B2%B8%E0%B2%BF%E0%B2%B5%E0%B3%86.

Leave a comment

Leave a Reply

Your email address will not be published. Required fields are marked *

Related Articles

ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಾಗಿ 50 ಕೋಟಿ ಅನುದಾನ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

“ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ. 50...

ರಾಜ್ಯ ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಸಂಚಲನ ಮೂಡಿಸಿದ್ದ ಆರೋಪದ ಆಡಿಯೋ ನನ್ನದೇ, ನನ್ನ ಆರೋಪಕ್ಕೆ ನಾನು ಬದ್ಧ; ಕಾಂಗ್ರೆಸ್‌ ಶಾಸಕ ಬಿ.ಆರ್‌. ಪಾಟೀಲ್‌

ಬೆಂಗಳೂರು: ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಕುರಿತು ಸಚಿವ ಜಮೀರ್‌ ಖಾನ್‌ ಅವರ ಆಪ್ತ ಕಾರ್ಯದರ್ಶಿ ಸರ್ಫ‌ರಾಜ್‌...

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಬಡವರ ಬದುಕಿಗಾಗಿ ಕಾರ್ಯಕ್ರಮ :: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ದಾವಣಗೆರೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಬಡವರ ಬದುಕಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ಸಮಾಜದಲ್ಲಿ ಪುಟಾಣಿ ಮಕ್ಕಳಿಂದ...

ನವೆಂಬರ್ ನಂತರ ಕರ್ನಾಟಕ ರಾಜ್ಯದ ಮುಂದಿನ ಮುಖ್ಯ ಮಂತ್ರಿ ಯಾಗಿ ಡಿಕೆ ಶಿವಕುಮಾರ್ ಅಥವಾ ಖರ್ಗೆ :: ಎಚ್‌ ವಿಶ್ವನಾಥ್‌

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚೆಂದರೆ ನವೆಂಬರ್ ವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ನಂತರ ಸಿಎಂ...