ಜನಪರ ಬಜೆಟ್ ಮಂಡನೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯ

27

“ಮಾರ್ಚ್ 7 ರಂದು ಜನಪರ ಬಜೆಟ್ ಮಂಡನೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು, ರಾಜ್ಯದ ಸಾಮಾಜಿಕ ಕಲ್ಯಾಣದ ಜೊತೆಗೆ ಆರ್ಥಿಕ ಜವಾಬ್ದಾರಿ ಮತ್ತು ಅಭಿವೃದ್ಧಿಯನ್ನು ಆಧರಿಸಿ ಬಜೆಟ್ ಮಂಡನೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಯಾವುದೇ ಒಂದು ಸರ್ಕಾರ ವಿತ್ತೀಯ ಬದ್ಧತೆ ಪೂರೈಸಲು ಸಾಲ ತೆಗೆದುಕೊಳ್ಳುವುದು ಸಹಜ. ಅಂತಹ ಸಾಲವನ್ನು ಬಂಡವಾಳ ಹೂಡಿಕೆಗಳಿಗೆ ಬಳಸಬೇಕೇ ಹೊರತು.

ರಾಜಸ್ವ ವೆಚ್ಚಕ್ಕಲ್ಲ. ಆದರೆ, ಸತತ ಎರಡು ವರ್ಷ ರಾಜಸ್ವ ಕೊರತೆಯ ಬಜೆಟ್‌ ಮಂಡಿಸುವುದರೊಂದಿಗೆ ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ಕಾಯ್ದೆಯ ನಿರ್ವಹಣೆಯನ್ನು ಉಲ್ಲಂಘಿಸಿದ್ದೀರಿ.

ಎಸ್‌ಸಿಪಿ–ಟಿಎಸ್‌ಪಿ ಯೋಜನೆಗೆ ಕಾಯ್ದಿರಿಸಲಾದ ಮೊತ್ತದಲ್ಲಿ 25,426 ಕೋಟಿ ರೂಗಳನ್ನು ಇತರೆ ಯೋಜನೆಗಳಿಗೆ ಬಳಸಿಕೊಂಡಿರುವುದನ್ನು ನೀವೇ ಒಪ್ಪಿಕೊಂಡಿದ್ದೀರಿ.

ಅಲ್ಲದೇ, ಲೋಕೋಪಯೋಗಿ, ನೀರಾವರಿ, ಕಂದಾಯ ಸೇರಿದಂತೆ ನಾನಾ ಇಲಾಖೆಗಳು 6,000 ಕೋಟಿ ರೂ. ಬಿಲ್‌ ಬಾಕಿ ಉಳಿಸಿಕೊಂಡಿವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. 15 ಬಾರಿ ಬಜೆಟ್ ಮಂಡಿಸಿರುವ ನಿಮಗೆ ಇದು ಶೋಭೆ ತರುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.

ಎರಡೇ ವರ್ಷದಲ್ಲಿ 2 ಲಕ್ಷ ಕೋಟಿ ರೂ.ಸಾಲದ ಹೊರೆಯನ್ನು ಕನ್ನಡಿಗರ ಮೇಲೆ ಹೊರಿಸಿದ್ದೀರಿ. ಮುಂಬರುವ ಬಜೆಟ್‌ನಲ್ಲಿ ಇನ್ನೆಷ್ಟು ಸಾಲದ ಹೊರೆ ಹೊರಿಸುತ್ತೀರಿ ಎಂಬ ಆತಂಕ ಜನರನ್ನು ಕಾಡುತ್ತಿದೆ.

ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಿಗೆ ರಾಜ್ಯ ಸರ್ಕಾರ ಅಗತ್ಯ ಹಣ ಹಂಚಿಕೆ ಮಾಡಲು ವಿಫಲವಾದರೆ, ಕೇಂದ್ರದ ಸಹಾಯಧನ ಕಳೆದುಕೊಳ್ಳುವ ಅಪಾಯವಿದೆ’ ಎಂದು ಎಚ್ಚರಿಸಿದ್ದಾರೆ.

ನೌಕರರಿಗೆ ವೇತನ ನೀಡಲು ಸರ್ಕಾರದ ಬಳಿ ಹಣವಿಲ್ಲದಂತಾಗಿದೆ. ನಿಮ್ಮ ಸರ್ಕಾರ ಈಗಾಗಲೇ ನೀರು, ಹಾಲು, ಪೆಟ್ರೋಲ್, ವಿದ್ಯುತ್, ತೆರಿಗೆ ಮತ್ತು ಇತರೆ ಆಗತ್ಯ ವಸ್ತುಗಳ ಬೆಲೆಯನ್ನು ಹೆಚ್ಟಳ ಮಾಡಿದ್ದು, ಇದನ್ನು ಬಿಜೆಪಿ ವಿರೋಧಿಸುತ್ತದೆ. ‘

ಮುಂದಿನ ಬಾರಿ ಬಜೆಟ್‌ ಮಂಡಿಸುತ್ತೀರೋ ಇಲ್ಲವೋ ಗೊತ್ತಿಲ್ಲ. ಆದರೆ, ರಾಜ್ಯದ ಜನರ ನಿರ್ಣಾಯಕ ಅಗತ್ಯಗಳನ್ನು ಪೂರೈಸುವುದರ ಜತೆಗೆ ರಾಜ್ಯದ ಆರ್ಥಿಕ ಸ್ಥಿರತೆಯನ್ನು ಬಲಪಡಿಸಲು ನಿಮಗೆ ಇದು ಸದಾವಕಾಶ ಎಂದು ತಿಳಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ನಾಯಕತ್ವ ಬದಲಾವಣೆ ಸದ್ಯದ ಮಟ್ಟಿಗೆ ಯತೀಂದ್ರ ಹೈಕಮಾಂಡ್ ಯತೀಂದ್ರಗೆ ಟಾಂಗ್ ನೀಡಿದ ಡಿಕೆ ಶಿವಕುಮಾರ್

“ಮಂಗಳೂರು: ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಿದ್ದರಾಮಯ್ಯನವರೇ ಐದು ವರ್ಷ...

ಬಿಜೆಪಿ ಆರು ಚುನಾವಣಾ  ಕ್ಷೇತ್ರಗಳ  ಪ್ರವಾಸ ಉಸ್ತುವಾರಿ ಹುದ್ದೆಗೆ ರಾಜೀನಾಮೆ ನೀಡಿದ ಅಣ್ಣಾಮಲೈ

“ಕೊಯಮತ್ತೂರು: 2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು...

ರಾಜ್ಯಪಾಲರಿಗೆ ಅಪಮಾನ; ಕಾಂಗ್ರೆಸ್ ಶಾಸಕರ ಅಮಾನತಿಗೆ ಒತ್ತಾಯಿಸಿ ಬಿಜೆಪಿ, ಜೆಡಿಎಸ್ ಪ್ರತಿಭಟನೆ

ಬೆಂಗಳೂರು: ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ‘ಅವಮಾನಿಸಿದ ಮತ್ತು...

ಮುಂಬೈ ಮಹಾನಗರ ಪಾಲಿಕೆ ಮೇಯರ್ ಪಟ್ಟಕ್ಕಾಗಿ ಚುನಾವಣೆ ಗರಿಗೆದರಿದ ರಾಜಕೀಯ ಪಕ್ಷಗಳ ಮೈತ್ರಿ

“: ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ ಅಚ್ಚರಿ ರೀತಿಯಲ್ಲಿ ಬದ್ಧ ವೈರಿಗಳಾದ ಬಿಜೆಪಿ ಹಾಗೂ ಶಿವಸೇನಾ...