thekarnatakatoday.com
News

ದೆಹಲಿ ವಿಧಾನಸಭಾ ಅಧಿವೇಶನ ಗದ್ದಲವೇಬ್ಬಿಸಿದ ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಸಹಿತ 10 ಶಾಸಕರ ಅಮಾನತು

“ದೆಹಲಿ ವಿಧಾನಸಭೆ ಅಧಿವೇಶನದ ಎರಡನೇ ದಿನವಾದ ಇಂದು ಮಂಗಳವಾರ ಲೆಫ್ಟಿನೆಂಟ್ ಗವರ್ನರ್ (LG) ವಿ.ಕೆ. ಸಕ್ಸೇನಾ ಅವರ ಭಾಷಣದ ಸಮಯದಲ್ಲಿ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ದೆಹಲಿ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ವಿರೋಧ ಪಕ್ಷದ ನಾಯಕರಾದ ಅತಿಶಿ, ಮಾಜಿ ಸಚಿವ ಗೋಪಾಲ್ ರೈ ಮತ್ತು ಇತರ ಒಂಬತ್ತು ಮಂದಿ ಎಎಪಿ ಶಾಸಕರನ್ನು ದಿನದ ಮಟ್ಟಿಗೆ ಅಮಾನತುಗೊಳಿಸಿದ ಪ್ರಸಂಗ ನಡೆಯಿತು.

ಸದನದಿಂದ ಹೊರಹಾಕಲ್ಪಟ್ಟ ಎಎಪಿ ನಾಯಕರಲ್ಲಿ ಅತಿಶಿ, ಗೋಪಾಲ್ ರೈ, ವೀರ್ ಸಿಂಗ್ ಧಿಂಗ್ನ್, ಮುಖೇಶ್ ಅಹ್ಲಾವತ್, ಚೌಧರಿ ಜುಬೈರ್ ಅಹ್ಮದ್, ಅನಿಲ್ ಝಾ, ವಿಶೇಷ್ ರವಿ ಮತ್ತು ಜರ್ನೈಲ್ ಸಿಂಗ್ ಒಳಗೊಂಡಿದ್ದಾರೆ.

ಮುಖ್ಯಮಂತ್ರಿ ಕಚೇರಿಯಿಂದ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದುಹಾಕುವ ಮೂಲಕ ಬಿಜೆಪಿ ಸಂವಿಧಾನ ರಚನೆಕಾರನಿಗೆ ಅಗೌರವ ತೋರಿದೆ ಎಂದು ಇಂದು ಸದನ ಆರಂಭವಾಗುತ್ತಿದ್ದಂತೆ ಆತಿಶಿ ಆರೋಪಿಸಿದರು.

ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದುಹಾಕುವ ಮೂಲಕ ಬಿಜೆಪಿ ತನ್ನ ನಿಜ ಬಣ್ಣ ತೋರಿಸಿದೆ. ಬಾಬಾಸಾಹೇಬ್ ಅವರನ್ನು ಮೋದಿ ಬದಲಾಯಿಸಬಹುದು ಎಂದು ಬಿಜೆಪಿಯವರ ಭಾವನೆಯೇ ಎಂದು ಅವರು ನಿನ್ನೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು

ಅಮಾನತುಗೊಂಡ ಎಎಪಿ ಶಾಸಕರು ನಂತರ ವಿಧಾನಸಭೆ ಆವರಣದಲ್ಲಿ ಅಂಬೇಡ್ಕರ್ ಭಾವಚಿತ್ರಗಳೊಂದಿಗೆ ಪ್ರತಿಭಟನೆ ನಡೆಸಿದರು, “ಬಾಬಾಸಾಹೇಬ್ ಕಾ ಯೇ ಅಪ್ಮಾನ್ ನಹೀಂ ಸಹೇಗಾ ಹಿಂದೂಸ್ತಾನ್ (ಬಾಬಾಸಾಹೇಬ್‌ಗೆ ಆದ ಅವಮಾನವನ್ನು ಭಾರತ ಸಹಿಸುವುದಿಲ್ಲ)” ಎಂಬ ಘೋಷಣೆಗಳನ್ನು ಕೂಗಿದರು.

ಹೊಸದಾಗಿ ಆಯ್ಕೆಯಾದ ಶಾಸಕರೊಂದಿಗೆ ಮೂರು ದಿನಗಳ ದೆಹಲಿ ವಿಧಾನಸಭೆ ಅಧಿವೇಶನ ನಿನ್ನೆ ಆರಂಭವಾಯಿತು. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಬಿಜೆಪಿ ಮತ್ತು ವಿರೋಧ ಪಕ್ಷದ ಶಾಸಕರು ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಮಾರ್ಗದರ್ಶನದಲ್ಲಿ ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಇಂದು 2ನೇ ದಿನ, ಹಿಂದಿನ ಆಮ್ ಆದ್ಮಿ ಪಕ್ಷ (AAP) ಸರ್ಕಾರದ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಬಾಕಿ ಇರುವ 14 ಸಿಎಜಿ (ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್) ವರದಿಗಳನ್ನು ಮಂಡಿಸಲು ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುವ ಮೊದಲು, ಸಭೆಯ ಆರಂಭದಲ್ಲಿಯೇ ವಿರೋಧ ಪಕ್ಷಗಳಿಂದ ಗದ್ದಲ ಉಂಟಾಯಿತು.

ಬಾಕಿ ಇರುವ ಲೆಕ್ಕಪರಿಶೋಧನೆಗಳು ರಾಜ್ಯ ಹಣಕಾಸು, ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ, ವಾಹನ ವಾಯು ಮಾಲಿನ್ಯ, ಮದ್ಯ ನಿಯಂತ್ರಣ ಮತ್ತು ದೆಹಲಿ ಸಾರಿಗೆ ನಿಗಮದ ಕಾರ್ಯನಿರ್ವಹಣೆ ಸೇರಿದಂತೆ ಹಲವಾರು ವಿಷಯಗಳನ್ನು ಒಳಗೊಂಡಿವೆ. ಎಎಪಿ ಆಡಳಿತವು ಈ ಸಿಎಜಿ ವರದಿಗಳನ್ನು ತಡೆಹಿಡಿದಿತ್ತು ಎಂದು ಬಿಜೆಪಿ ಆರೋಪಿಸಿದೆ.

Related posts

ಮುಡಾ ಹಗರಣ ಸಿದ್ದರಾಮಯ್ಯ ಮೆಲ್ಮನವಿ ವಿಚಾರಣೆಯನ್ನು ಜನವರಿ 25, 2025 ಕ್ಕೆ ಮುಂದೂಡಿದ ಹೈಕೋರ್ಟ್

The Karnataka Today

ಲಾಂಗ್ ಮಚ್ಚು  ತೋರಿಸಿ ರೌಡಿಸಂ ಮಾಡುವ ವಿರುದ್ಧ ಗೂಂಡ ಕಾಯ್ದೆ ಮೂಲಕ ಕಠಿಣ ಕ್ರಮ ಎಚ್ಚರಿಕೆ ನೀಡಿದ ರಾಜ್ಯ ಸರಕಾರ

The Karnataka Today

ಮುಖ್ಯಮಂತ್ರಿ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ 30 ಸಿಬ್ಬಂದಿ ವಜಾ ಆದೇಶ

The Karnataka Today

Leave a Comment