ಏಳು ದಿನಗಳ ಒಳಗೆ ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳಿಗೆ ಒಪ್ಪಿಸಿ ಇಲ್ಲಾ ಕ್ರಮಕ್ಕೆ ಸಿದ್ದರಾಗಿ ಮಣಿಪುರ ರಾಜ್ಯಪಾಲರ ಎಚ್ಚರಿಕೆ

49

ಮಣಿಪುರ ಲೂಟಿ ಮಾಡಿದ ಮತ್ತು ಅಕ್ರಮವಾಗಿ ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಏಳು ದಿನಗಳ ಒಳಗೆ ಸ್ವಯಂಪ್ರೇರಿತವಾಗಿ ಸರ್ಕಾರಕ್ಕೆ ಒಪ್ಪಿಸುವಂತೆ ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಗುರುವಾರ ರಾಜ್ಯದ ಜನರಿಗೆ ಕೇಳಿಕೊಂಡಿದ್ದಾರೆ.

ಏಳು ದಿನಗಳಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸುವವರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ.

ಆದಾಗ್ಯೂ, ಏಳು ದಿನಗಳ ಅವಧಿ ಮುಗಿದ ನಂತರ ಅಕ್ರಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸದಿದ್ದರೆ “ಕಠಿಣ ಕ್ರಮ” ಕೈಗೊಳ್ಳಲಾಗುವುದು ಎಂದು ಭಲ್ಲಾ ಎಚ್ಚರಿಸಿದ್ದಾರೆ.

“ಶಾಂತಿ ಮತ್ತು ಕೋಮು ಸಾಮರಸ್ಯದ ಮೇಲೆ ಪರಿಣಾಮ ಬೀರುವ ದುರದೃಷ್ಟಕರ ಘಟನೆಗಳಿಂದ ಕಣಿವೆ ಮತ್ತು ಬೆಟ್ಟಗಳಲ್ಲಿರುವ ಮಣಿಪುರದ ಜನ ಕಳೆದ 20 ತಿಂಗಳಿಗೂ ಹೆಚ್ಚು ಕಾಲ ಅಪಾರ ಕಷ್ಟಗಳನ್ನು ಅನುಭವಿಸಿದ್ದಾರೆ” ಎಂದು ರಾಜ್ಯಪಾಲರು ಗುರುವಾರ ಹೊರಡಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಜನರು ತಮ್ಮ ಸಾಮಾನ್ಯ ದೈನಂದಿನ ಚಟುವಟಿಕೆಗಳಿಗೆ ಮರಳಲು ಸಾಧ್ಯವಾಗುವಂತೆ ರಾಜ್ಯದ ಎಲ್ಲಾ ಸಮುದಾಯಗಳು ತಮ್ಮ ಹೋರಾಟವನ್ನು ನಿಲ್ಲಿಸಬೇಕು ಮತ್ತು ಸಮಾಜದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಮುಂದೆ ಬರಬೇಕು ಎಂದು ಅವರು ಹೇಳಿದ್ದಾರೆ.

ಮಣಿಪುರದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ “ಈ ನಿಟ್ಟಿನಲ್ಲಿ ಎಲ್ಲಾ ಸಮುದಾಯಗಳ ಜನರು, ವಿಶೇಷವಾಗಿ ಕಣಿವೆ ಮತ್ತು ಬೆಟ್ಟಗಳಲ್ಲಿರುವ ಯುವಕರು, ಸ್ವಯಂಪ್ರೇರಣೆಯಿಂದ ಮುಂದೆ ಬಂದು ಲೂಟಿ ಮಾಡಿದ ಮತ್ತು ಅಕ್ರಮವಾಗಿ ಹೊಂದಿರುವ ಶಸ್ತ್ರಾಸ್ತ್ರಗಳು

ಮತ್ತು ಮದ್ದುಗುಂಡುಗಳನ್ನು ಇಂದಿನಿಂದ ಜಾರಿಗೆ ಬರುವಂತೆ ಹತ್ತಿರದ ಪೊಲೀಸ್ ಠಾಣೆ/ಹೊರಠಾಣೆ/ಭದ್ರತಾ ಪಡೆಗಳ ಶಿಬಿರಕ್ಕೆ ಒಪ್ಪಿಸುವಂತೆ ನಾನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ” ಎಂದು ಭಲ್ಲಾ ಹೇಳಿದ್ದಾರೆ.

ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಈ ಒಂದೇ ಒಂದು ಕ್ರಮವು ಪ್ರಬಲವಾದ ಸೂಚನೆಯಾಗಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ. “

ನಿಗದಿತ ಸಮಯದೊಳಗೆ ಅಂತಹ ಶಸ್ತ್ರಾಸ್ತ್ರಗಳನ್ನು ಹಿಂತಿರುಗಿಸಿದರೆ ಯಾವುದೇ ದಂಡನಾತ್ಮಕ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ.

ಆದರೆ ಏಳು ದಿನಗಳ ನಂತರವೂ ಅಂತಹ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ರಾಜ್ಯಪಾಲರು ಎಚ್ಚರಿಕೆ ನೀಡಿದ್ದಾರೆ

Leave a comment

Leave a Reply

Your email address will not be published. Required fields are marked *

Related Articles

ಟಿಸಿಎಸ್ ನಲ್ಲಿ ಕಾರ್ಪೊರೇಟ್ ಜಿಹಾದ್ ಲೈಂಗಿಕ ಕಿರುಕುಳ ಪ್ರಕರಣ ಬುರ್ಖಾ ಧರಿಸುವಂತೆ ಕಿರುಕುಳ ಹಿಂದೂ ಧರ್ಮ ನಿಂದನೆ ಸತ್ಯ ಬಿಚ್ಚಿಟ್ಟ ಸಂತ್ರಸ್ತೆ

ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ದೇಶದ ಪ್ರಮುಖ ಟೆಕ್ ಕಂಪನಿ ಟಿಸಿಎಸ್ ನಲ್ಲಿ ನಡೆದಿದೆ ಎನ್ನಲಾದ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ಪೋಟಕ್ಕೆ ಸಂಚು ನಾಲ್ವರು ಉಗ್ರರ ಬಂಧನ ತಪ್ಪಿದ ಬಾರಿ ದುರಂತ

“ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಮಹಾಸ್ಫೋಟಕ್ಕೆ ಸಂಚು ನಡೆದಿದೆ. ಸೂಕ್ಷ್ಮ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು...

ಕ್ಷೇತ್ರ ಪುನರ್ವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ ಮಂಡನೆ; ವಿರೋಧಿಸಿ ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸಿದ ವಿಪಕ್ಷಗಳು

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಗುರುವಾರ ಆರಂಭದ ದಿನವೇ ತೀವ್ರ ರಾಜಕೀಯ ವಾಗ್ವಾದ, ಕೋಲಾಹಲ ಉಭಯ...

ಬಿಹಾರ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕಾರ

ಭಾರತೀಯ ಜನತಾ ಪಕ್ಷದ  ನಾಯಕ ಸಾಮ್ರಾಟ್ ಚೌಧರಿ ಅವರು ಇಂದು ಬುಧವಾರ ಬಿಹಾರದ 24ನೇ ಮುಖ್ಯಮಂತ್ರಿಯಾಗಿ...