ಲೋಕಸಭಾ ವಿರೋಧ ಪಕ್ಷ ಉಪನಾಯಕ ಗೌರವ್ ಗೊಗೊಯ್ ಪತ್ನಿಯಿಂದ ಐ ಎಸ್ ಐ ಸಹಚರ ಪಾಕ್ ಪ್ರಜೆ ಅಲಿ ತೌಕೀರ್ ಶೇಖ್ ಜೊತೆ ನಂಟು ::ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ

28

“ಲೋಕಸಭೆಯ ವಿರೋಧ ಪಕ್ಷದ ಉಪ ನಾಯಕ ಗೌರವ್ ಗೊಗೊಯ್ ಅವರ ಬ್ರಿಟಿಷ್ ಪತ್ನಿಯೊಂದಿಗೆ ನಂಟಿರುವ ಪಾಕ್ ಪ್ರಜೆ ಅಲಿ ತೌಕೀರ್ ಶೇಖ್ ಇಲ್ಲಿಯವರೆಗೆ 18 ಬಾರಿ ಭಾರತಕ್ಕೆ ಭೇಟಿ ನೀಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಹೇಳಿದ್ದಾರೆ.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ವಿಷಯ ತಿಳಿಸಿದ ಶರ್ಮಾ, ಪ್ರಕರಣದ ಆರಂಭಿಕ ಮಾಹಿತಿಯು ಕಾಂಗ್ರೆಸ್‌ಗೆ ‘ಅತ್ಯಂತ ಮಾರಕ’ ಮತ್ತು ಅಸ್ಸಾಂನ ರಾಜಕೀಯದ ಮೇಲೆ ‘ದೊಡ್ಡ ಪರಿಣಾಮ’ ಬೀರಲಿದೆ ಎಂದರು.

ಅಲಿ ತೌಕೀರ್ ಶೇಖ್ ಭಾರತಕ್ಕೆ 18 ಬಾರಿ ಭೇಟಿ ನೀಡಿದ್ದರು ಎಂದು ಪ್ರಕರಣದ ಕುರಿತು ಅಸ್ಸಾಂ ಪೊಲೀಸ್ ಎಸ್‌ಐಟಿ ಪತ್ತೆ ಮಾಡಿದೆ. ಅವರನ್ನು ಯಾರು ಆಹ್ವಾನಿಸಿ, ಆತಿಥ್ಯ ನೀಡಿದ್ದರು ಎಂಬುದು ಈಗ ತಿಳಿಯಬೇಕಾಗಿದೆ.

ಇದು ಅಸ್ಸಾಂ ರಾಜಕೀಯದ ಮೇಲೆ ಭಾರಿ ಪರಿಣಾಮ ಬೀರಲಿದೆ. ಸತ್ಯಗಳು ಕಾಂಗ್ರೆಸ್ ಪಕ್ಷಕ್ಕೆ ಬಹಳ ಮಾರಕವಾಗಲಿವೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದರು.

ಜವಾಬ್ದಾರಿಯುತ ವ್ಯಕ್ತಿಯಾಗಿ ವಿಧಾನಸಭೆಯೊಳಗೆ ನಿಂತು ಹೇಳುತ್ತಿದ್ದೇನೆ, ಶೇಖ್ ಜಾಲವನ್ನು ಬೇಧಿಸುತ್ತೇವೆ ಎಂದು ಅಸ್ಸಾಂ ವಿಧಾನಸಭೆಗೆ ಭರವಸೆ ನೀಡುತ್ತೇನೆ. ಮೂರು ತಿಂಗಳ ಕಾಲಾವಕಾಶ ನೀಡಿ, ಆಗಸ್ಟ್ ತಿಂಗಳ ಅಧಿವೇಶನದಲ್ಲಿ ಎಲ್ಲವನ್ನೂ ತಿಳಿಸುತ್ತೇವೆ ಎಂದು ಅವರು ತಿಳಿಸಿದರು

. “ಶೇಖ್ ಅವರ ಟ್ವೀಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಚಟುವಟಿಕೆಗಳು ಅಸ್ಸಾಂ ವಲಸಿಗರ ಮೇಲೆ ಇವೆ. ಇದು ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನವಾಗಿದೆ” ಎಂದು ಅವರು ಆರೋಪಿಸಿದರು.

ಗೊಗೊಯ್ ಅವರ ಪತ್ನಿ ಎಲಿಜಬೆತ್ ಕೋಲ್ಬರ್ನ್ ಪಾಕಿಸ್ತಾನದ ಬೇಹುಗಾರಿಕೆ ISI ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಾಗೂ ಬಿಜೆಪಿ ವಾಗ್ದಾಳಿ ನಡೆಸುತ್ತಿವೆ.

ಅಸ್ಸಾಂ ಮತ್ತು ಭಾರತದ ಅಂತರಿಕ ವ್ಯವಹಾರ ಕುರಿತು”ಶೇಖ್ ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಟ್ವೀಟ್ ಕುರಿತ ತನಿಖೆಗೆ ಅಸ್ಸಾಂ ಪೊಲೀಸರು ಸೋಮವಾರ ವಿಶೇಷ ತನಿಖಾ ತಂಡ ರಚಿಸಿದೆ.

Leave a comment

Leave a Reply

Your email address will not be published. Required fields are marked *

Related Articles

ವಂದೇ ಮಾತರಂ ವಿರೋಧಿಸುವವರಿಗೆ ಭಾರತದಲ್ಲಿ ನೆಲೆಸುವ ಹಕ್ಕಿಲ್ಲ: ಸಿಎಂ ಯೋಗಿ ಆದಿತ್ಯನಾಥ್

ಲಖನೌ: ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಎಲ್ಲಾ ಶಾಲೆಗಳಲ್ಲಿ ವಂದೇ ಮಾತರಂ ಗೀತೆಯ ಎಲ್ಲಾ ಆರು...

ಮೆಗಾ ರಫೆಲ್ ಜೆಟ್ ಯೋಜನೆಗೆ ‘ಕೇಂದ್ರ’ ಅನುಮೋದನೆ, 114 ಜೆಟ್‌ ಖರೀದಿ, ಬಹುತೇಕ ಭಾರತದಲ್ಲೇ ನಿರ್ಮಾಣ

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂದೂರ್...

ಮುಂಬೈ ನೂತನ ಮೇಯರ್‌ ರೀತು ತಾವಡೆ ಅವಿರೋಧ ಆಯ್ಕೆ: 40ವರ್ಷ್ ಗಳ ನಂತರ ಬಿಜೆಪಿಗೆ ಒಲಿದ ಪಟ್ಟ

ಮುಂಬೈ: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನ ನೂತನ ಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ರೀತು ತಾವ್ಡೆ...

ಸ್ವಪಕ್ಷ ಸರಕಾರದ ಸಚಿವರನ್ನು ಜಾಡಿಸಿದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ

ಪಾಟ್ನಾ: ನೇರವಾಗಿ ಪ್ರಶ್ನೆ ಕೇಳುವುದರಲ್ಲಿ ಹೆಸರಾದ ಬಿಹಾರದ ಬಿಜೆಪಿಯ ಅತ್ಯಂತ ಕಿರಿಯ ಶಾಸಕಿ ಮೈಥಿಲಿ ಠಾಕೂರ್...