ಸಂಸತ್ತಿನಲ್ಲಿ ಪ್ರದರ್ಶನ ಕಾಣಲಿದೆ ರಾಮಾಯಣ ಲೆಜೆಂಡ್ ಆಫ್ ಪ್ರಿನ್ಸ್ ರಾಮ್

3

ಸಂಸತ್ತಿನಲ್ಲಿ ಪ್ರದರ್ಶನ ಕಾಣಲಿದೆ ‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’ ಪತ್ರಿಕಾ ಪ್ರಕಟಣೆ ಪ್ರಕಾರ, ಚಿತ್ರ ಪ್ರದರ್ಶನದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಸಂಸತ್ತಿನ ಸದಸ್ಯರು ಮತ್ತು ಸಾಂಸ್ಕೃತಿಕ ವಲಯಗಳ ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ.

‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’ ಚಲನಚಿತ್ರ ವಿತರಣಾ ಕಂಪನಿ ಗೀಕ್ ಪಿಕ್ಚರ್ಸ್ 1993ರ ಜಪಾನೀಸ್-ಭಾರತೀಯ ಆನಿಮೇಟೆಡ್ ಚಿತ್ರ ‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’ದ ವಿಶೇಷ ಪ್ರದರ್ಶನವನ್ನು ಫೆಬ್ರುವರಿ 15 ರಂದು ಸಂಸತ್ತಿನಲ್ಲಿ ಆಯೋಜಿಸಲು ಸಿದ್ಧವಾಗಿದೆ
ಎಂದು ಭಾನುವಾರ ತಿಳಿಸಿದೆ

. ಪತ್ರಿಕಾ ಪ್ರಕಟಣೆ ಪ್ರಕಾರ, ಚಿತ್ರ ಪ್ರದರ್ಶನದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಸಂಸತ್ತಿನ ಸದಸ್ಯರು ಮತ್ತು ಸಾಂಸ್ಕೃತಿಕ ವಲಯಗಳ ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ. ‘ಚಿತ್ರ ಪ್ರದರ್ಶನಕ್ಕೆ ಭಾರತದ ಸಂಸತ್ತು ಅವಕಾಶ ನೀಡುತ್ತಿರುವುದಕ್ಕೆ ನಾವು ಆಳವಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ನಮ್ಮ ಕೆಲಸವನ್ನು ಇಂತಹ ಗೌರವಾನ್ವಿತ ಮತ್ತು ಪ್ರಮುಖ ಮಟ್ಟದಲ್ಲಿ ಗುರುತಿಸುವುದು ಒಂದು ದೊಡ್ಡ ಗೌರವವಾಗಿದೆ

. ಈ ಪ್ರದರ್ಶನವು ಕೇವಲ ಚಿತ್ರದ ಪ್ರದರ್ಶನವಲ್ಲ. ಬದಲಿಗೆ, ನಮ್ಮ ಶ್ರೀಮಂತ ಪರಂಪರೆ ಮತ್ತು ರಾಮಾಯಣದ ಕಥೆಯ ಆಚರಣೆಯಾಗಿದೆ. ಇದು ನಮಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಿದೆ’ ಎಂದು ಗೀಕ್ ಪಿಕ್ಚರ್ಸ್‌ನ ಸಹ-ಸಂಸ್ಥಾಪಕ ಅರ್ಜುನ್ ಅಗರ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘

ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’ ಭಾರತದಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಅದರ ಮೂಲ ಇಂಗ್ಲಿಷ್ ಆವೃತ್ತಿಯೊಂದಿಗೆ ಜನವರಿ 24 ರಂದು 4K ಸ್ವರೂಪದಲ್ಲಿ ಬಿಡುಗಡೆಯಾಯಿತು.

ಈ ಅನಿಮೇಟೆಡ್ ಚಿತ್ರವನ್ನು ಮೂಲತಃ 2024ರ ಅಕ್ಟೋಬರ್ 18ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದಾಗ್ಯೂ, ದೇಶದಾದ್ಯಂತ ಹೆಚ್ಚಿನ ಪ್ರೇಕ್ಷಕರಿಗೆ ಚಿತ್ರವನ್ನು ತಲುಪಿಸಲೆಂದು ಬಿಡುಗಡೆ ದಿನಾಂಕವನ್ನು ಬದಲಾಯಿಸಲಾಯಿತು.

ನಂತರ ಜನವರಿ 24ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಎಎ ಫಿಲ್ಮ್ಸ್ ಮತ್ತು ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಈ ಚಿತ್ರವನ್ನು ವಿತರಿಸುತ್ತಿದೆ. ‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’ ಚಿತ್ರವನ್ನು ಯುಗೋ ಸಾಕೋ, ರಾಮ್ ಮೋಹನ್ ಮತ್ತು ಕೊಯಿಚಿ ಸಸಾಕಿ ನಿರ್ದೇಶಿಸಿದ್ದಾರೆ. ‘

ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’ ಚಿತ್ರವನ್ನು 1993ರಲ್ಲಿ 24ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ನಲ್ಲಿ ಭಾರತದಲ್ಲಿ ಪ್ರದರ್ಶಿಸಲಾಯಿತು. ಆದರೆ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿಲ್ಲ. 2000ರ ದಶಕದ ಆರಂಭದಲ್ಲಿ ಟಿವಿ ಚಾನೆಲ್‌ಗಳಲ್ಲಿ ಮರುಪ್ರಸಾರವಾದ ನಂತರ ಇದು ಭಾರತೀಯ ಪ್ರೇಕ್ಷಕರಲ್ಲಿ ಜನಪ್ರಿಯವಾಯಿತು

Leave a comment

Leave a Reply

Your email address will not be published. Required fields are marked *

Related Articles

ಧರ್ಮಸ್ಥಳ ಪ್ರಕರಣ: ಮೃತದೇಹಗಳ ಅಸ್ತಿಪಂಜರ ಪತ್ತೆ ಕಾರ್ಯಾಚರಣೆಗೆ ಜಿಪಿಆರ್ ಬಳಕೆಗೆ ಆಗ್ರಹ

ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳ ಪತ್ತೆಗೆ ಜಿಪಿಆರ್ ಬಳಕೆ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ....

ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ  ಜೈಲು ಶಿಕ್ಷೆ

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ...

ಧರ್ಮಸ್ಥಳ ಅಪರಿಚಿತ ಸಾವಿನ ಪ್ರಕರಣದ ಯುಡಿಆರ್ ಮಾಹಿತಿ ಡಿಲೀಟ್ ಬೆಳ್ತಂಗಡಿ ಪೊಲೀಸರ ಮೇಲೆ ಸಂಶಯದ ನೆರಳು

“ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಳಿಸಿರುವಂತೆಯೇ 2000 ದಿಂದ...

ಎಮ್ಮೆ ಕಟ್ಟುತ್ತಿದ್ದ ಶೆಡ್ ದ್ವಂಸ ರೊಚ್ಚಿಗೆದ್ದ ರೈತ ದಂಪತಿ; ಕಾಂಗ್ರೆಸ್ ಶಾಸಕರ ಕಚೇರಿಯಲ್ಲಿ ಎಮ್ಮೆ ಕಟ್ಟಿಹಾಕಿ ಆಕ್ರೋಶ

ತೆಲಂಗಾಣ: ಜಾನುವಾರಗಳ ಶೆಡ್ ಧ್ವಂಸಕ್ಕೆ ಶಾಸಕರೇ ಕಾರಣ ಎಂದು ಆರೋಪಿಸಿದ ರೈತ ದಂಪತಿ, ಕಾಂಗ್ರೆಸ್ ಶಾಸಕ...