ಹಲ್ಲೆ ಆರೋಪಿಗಳಿಂದ ಜೀವ ಬೆದರಿಕೆ ರಕ್ಷಣೆಗಾಗಿಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊರೆ ಹೋದ ಮಲ್ಪೆ ದಂಪತಿಗಳು

3

ಮಲ್ಪೆ ಆರೋಪಿ ಸಾಗರ್ ಮತ್ತು ಚರಣ್ ರಾಜ್ ಮತ್ತಿತರ ದಾಳಿಯಿಂದ ಕಂಗೆಟ್ಟ ಶೇಖರ್ ತಿಂಗಳಾಯ ದಂಪತಿಗಳು ಇಂದು ಪೊಲೀಸ ವರಿಷ್ಠಾಧಿಕಾರಿ ಅವರನ್ನು ಭೇಟಿ ಮಾಡಿದರು.

ಮಲ್ಪೆ ಪರಿಸರದ ರೌಡಿ ಸಾಗರ್ ಹಾಗೂ ಚರಣರಾಜ್ ಮತ್ತು ಇತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ತಮಗೆ ಜೀವ ರಕ್ಷಣೆ ನೀಡುವಂತೆ ಹಾಗೂ  ಆರೋಪಿತರ ವಿರುದ್ಧ ರೌಡಿಶೀಟರ್ ಹಾಳೆ ತೆರೆದು ಸೂಕ್ತ ಕ್ರಮ ಕೈಗೊಳ್ಳುವಂತೆ  ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಮಾಡಿದರು

ನಮ್ಮ ಮನೆಗೆ.ಅತಿಕ್ರಮ ಪ್ರವೇಶ ಮಾಡಿ ನನ್ನ ಗಂಡನಿಗೆ ಮತ್ತು ನನಗೆ ಹಲ್ಲೆ ಮಾಡಿದ ಬಗ್ಗೆ ಮಲ್ಪೆ ಪೋಲಿಸ್ 10/20250 (BNS),2023 (U/s -189(2), 191(2),115(2), 126(2) 329(3),352,351(2),74,190)  ಆರೋಪಿಗಳು, ಮಾನ್ಯ ನ್ಯಾಯಾಲಯದಲ್ಲಿ ಜಾಮೀನನ್ನು ಪಡೆದುಕೊಂಡು, ನಂತರ ನನ್ನ ಗಂಡನನ್ನು ಹುಡುಕಿಕೊಂಡು ಬಂದು 22-01-2025రెందు ನಮ್ಮ ವಿಲ್ಲಾ ಗೆ ‘ರಾತ್ರಿ 11.10 € ಹಿಂಬಾಗದಲ್ಲಿ ಸಾಗರ್ ಮೆಂಡನ್ ಮತ್ತು ಇತರರು ಬಂದು ಅತಿಕ್ರಮ ಪ್ರವೇಶ ಮಾಡಿ ‘ಎಲ್ಲ’ಗೆ ಅಳವಡಿಸಿದ ನೀರಿನ ಟ್ಯಾಪನ್ನು ಮುರಿದು ನಷ್ಟವನ್ನು ಉಂಟುಮಾಡಿರುತ್ತಾರೆ,

ಆ ಬಗ್ಗೆ ಮಲ್ಪೆ ಪೋಲಿಸ್ 12/2025 5 (BNS),2023 (U/s-329(3), 324(4),3(5) ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸಾಗರ್ ಮೆಂಡನ್ ಈತ ಒಬ್ಬ ರೌಡಿ ಪ್ರವೃತ್ತಿಯುಳ್ಳವನಾಗಿದ್ದು, ಇವನ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಈತನ ರೌಡಿ ಸ್ವಭಾವವನ್ನು ನೋಡಿದಾಗ ಮುಂದಿನ ದಿವಸದಲ್ಲಿ ನನ್ನ ಗಂಡನಿಗೆ ಹಲ್ಲೆ ಮಾಡುವ ಸಂಭವವಿರುತ್ತದೆ.

ನನ್ನ ಗಂಡನಿಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದು ಈ ರೌಡಿ ಸ್ವಭಾವದ ಸಾಗರ್ ಮತ್ತು ಇತರ ಆರೋಪಿಗಳನ್ನು ಸೇರಿಕೊಂಡು ಮುಂದಿನ ದಿವಸದಲ್ಲಿ ನನ್ನ ಗಂಡನ ಮೇಲೆ ಮರಣಾಂತಿಕ ಹಲ್ಲೆ ಮಾಡುವ ಸಂಭವವಿರುತ್ತದೆ.

ಮಾನ್ಯ ನ್ಯಾಯಾಲಯದಲ್ಲಿ ಜಾಮೀನನ್ನು ಪಡೆದು ಆ ದಿನವೇ ಬಂದು ಪುನಃ ಹಲ್ಲೆ ಮಾಡುವ ಉದ್ದೇಶದಿಂದ ಆತ ನಮ್ಮ ವಿಲ್ಲಗೆ ಅತಿಕ್ರಮ ಪ್ರವೇಶ ಮಾಡಿರುವುದನ್ನು ನೋಡಿದರೆ ಸಾಗರ್ ಮತ್ತು ಇತರ ಆರೋಪಿಗಳಿಗೆ ಪೋಲಿಸರ ಮತ್ತು ಕಾನೂನಿನ ಯಾವುದೇ ಭಯವಿಲ್ಲ ಎಂದು ಕಂಡುಬರುತ್ತದೆ.

ಮಾನ್ಯ ನ್ಯಾಯಾಲಯ ಸಾಗರ್ ಮತ್ತು ಇತರ ಆರೋಪಿಗಳಿಗೆ ಜಾಮೀನು ನೀಡಿದ ಸಂದರ್ಭದಲ್ಲಿ ಮಾಡಿದೆ ಆದೇಶವನ್ನು ಆರೋಪಿಗಳು ಉಲ್ಲಂಘನೆ ಮಾಡಿರುತ್ತಾರೆ.

ಆರೋಪಿಗಳಿಗೆ ಮಾನ್ಯ ನ್ಯಾಯಾಲಯ ನೀಡಿರುವ ಜಾಮೀನು ಆದೇಶವನ್ನು ರದ್ದು ಗೊಳಿಸುವ ಬಗ್ಗೆ ಸೂಕ್ತ ಕಾನೂನು ಕ್ರಮ ಜರಗಿಸಬೇಕಾಗಿ ಮತ್ತು ನನ್ನ ಗಂಡ ಮಲ್ಪೆ ಬಂದರಿನಲ್ಲಿ ಮೀನಿನ ವ್ಯವಹಾರ ಮಾಡುವ ಸಂದರ್ಭದಲ್ಲಿ

ಸಾಗರ್ ಮೆಂಡನ್ ಮತ್ತು ಚರಣ್ ರಾಜ್ ಮತ್ತು ಇತರ ಆರೋಪಿಗಳು ಹಲ್ಲೆ ಮಾಡುವ ಸಂಭವವಿರುವುದರಿಂದ ನನ್ನ ಗಂಡನಿಗೆ ರಕ್ಷಣೆಯನ್ನು ನೀಡುವ ಬಗ್ಗೆ ಮತ್ತು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಅವರನ್ನು ಮನವಿ ಮಾಡಿಕೊಂಡಿದ್ದಾರೆ

Leave a comment

Leave a Reply

Your email address will not be published. Required fields are marked *

Related Articles

ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ರಾಜ್ಯದ 18 ಸ್ಥಳಗಳಲ್ಲಿ ಎನ್ಐಎ ದಾಳಿ

ನವದೆಹಲಿ: ಬಜರಂಗದಳ ಸದಸ್ಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶನಿವಾರ...

ಪರಶುರಾಮ್ ಥೀಮ್ ಪಾರ್ಕ್ ವಿಚಾರದಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ ಗೊಂದಲದ ನಡೆ ಕೂಡಲೆ ಸೃಷ್ಟಿಕರಣ ನೀಡಿ ::ನಿತಿನ್ ಪೂಜಾರಿ ಆಗ್ರಹ

ಧಾರ್ಮಿಕ ನಂಬಿಕೆಯ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ : ಉದಯಕುಮಾರ್ ಶೆಟ್ಟಿ ಅವರು ಸಲ್ಲಿಸಿದ ಹೈಕೋರ್ಟ್...

ಧರ್ಮಸ್ಥಳ 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಪ್ರಕರಣದ...

ಧರ್ಮಸ್ಥಳ ಆಗೆದ ಸ್ಥಳದಲ್ಲಿ ಸಿಗದ ಅವಶೇಷಗಳು ಕಾರ್ಯಾಚರಣೆ ನಾಳೆಗೆ ಮುಂದೂಡಿದ ಎಸ್ಐಟಿ

“ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಪ್ರಕರಣದ ಸಾಕ್ಷಿ-ದೂರುದಾರನಾಗಿರುವ ವ್ಯಕ್ತಿ ಶವಗಳನ್ನು...