ಗಣರಾಜ್ಯೋತ್ಸವ ಸಚಿವ ಜಮೀರ್ ಅಹ್ಮದ್ ಖಾನ್ ಧ್ವಜಾರೋಹಣಕ್ಕೆ ಚಾಲನೆ ಕೆಳಕ್ಕೆ ಬಿದ್ದ  ಬೃಹತ್ ತ್ರಿವರ್ಣ ಧ್ವಜ 

36

“ಗಣರಾಜ್ಯೋತ್ಸವ ಆಚರಣೆ ವೇಳೆ ದೇಶದ ಎರಡನೇ ಬೃಹತ್ ಧ್ವಜಸ್ತಂಭಕ್ಕೆ ಏರುತ್ತಿದ್ದ ಬೃಹತ್ ಧ್ವಜ ಕುಸಿದು ಬಿದ್ದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಪುನೀತ್ ರಾಜ್ ಕುಮಾರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್‌ ಖಾನ್ ಅವರು ಸಾಂಕೇತಿಕವಾಗಿ ಧ್ವಜಾರೋಹಣ ನೆರವೇರಿಸಿದ್ದರು.


ನಂತರ ಅವರು ಅವರು ಪರೇಡ್‌ನಲ್ಲಿ ಪಥಸಂಚಲನದಲ್ಲಿ ಭಾಗಿಯಾಗಿ ಗೌರವ ವಂದನೆ ಸ್ವೀಕರಿಸುತ್ತಿದ್ದ ವೇಳೆ ಧ್ವಜ ಏಕಾಏಕಿ ಕುಸಿದು ಬಿದ್ದಿದೆ.

ಘಟನೆ ವೇಳೆ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು, ತನಿಖೆಗೆ ಆದೇಶಿಸಿದ್ದು, ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ

. ಧ್ವಜಸ್ತಂಭವನ್ನು ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡದಿರುವುದು ಘಟನೆಗೆ ಕಾರಣವೆಂದು ಹೇಳಲಾಗುತ್ತಿದೆ

. ಈ ನಡುವೆ ತ್ರಿವರ್ಣ ಜಾರಿ ಕೆಳಗೆ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಧ್ವಜಸ್ತಂಭ ನಿರ್ವಹಣೆ ಬಗ್ಗೆ ಅಸಮಾಧಾನವಾಗಿದೆ. ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇನೆ.

ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ನಾನು ಪುನೀತ್ ರಾಜ್‌ಕುಮಾರ್ ಮೈದಾನದಲ್ಲಿ ಧ್ವಜಾರೋಹಣ ಮಾಡಿದ್ದೆ. ಇಂತಹ ಘಟನೆ ಯಾವತ್ತೂ ನಡೆದಿಲ್ಲ. ವರದಿ ಸಲ್ಲಿಸಿದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಮೀರ್ ಅವರು ಹೇಳಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ವಂದೇ ಮಾತರಂ ವಿರೋಧಿಸುವವರಿಗೆ ಭಾರತದಲ್ಲಿ ನೆಲೆಸುವ ಹಕ್ಕಿಲ್ಲ: ಸಿಎಂ ಯೋಗಿ ಆದಿತ್ಯನಾಥ್

ಲಖನೌ: ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಎಲ್ಲಾ ಶಾಲೆಗಳಲ್ಲಿ ವಂದೇ ಮಾತರಂ ಗೀತೆಯ ಎಲ್ಲಾ ಆರು...

ಮೆಗಾ ರಫೆಲ್ ಜೆಟ್ ಯೋಜನೆಗೆ ‘ಕೇಂದ್ರ’ ಅನುಮೋದನೆ, 114 ಜೆಟ್‌ ಖರೀದಿ, ಬಹುತೇಕ ಭಾರತದಲ್ಲೇ ನಿರ್ಮಾಣ

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂದೂರ್...

ಮುಂಬೈ ನೂತನ ಮೇಯರ್‌ ರೀತು ತಾವಡೆ ಅವಿರೋಧ ಆಯ್ಕೆ: 40ವರ್ಷ್ ಗಳ ನಂತರ ಬಿಜೆಪಿಗೆ ಒಲಿದ ಪಟ್ಟ

ಮುಂಬೈ: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನ ನೂತನ ಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ರೀತು ತಾವ್ಡೆ...

ಸ್ವಪಕ್ಷ ಸರಕಾರದ ಸಚಿವರನ್ನು ಜಾಡಿಸಿದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ

ಪಾಟ್ನಾ: ನೇರವಾಗಿ ಪ್ರಶ್ನೆ ಕೇಳುವುದರಲ್ಲಿ ಹೆಸರಾದ ಬಿಹಾರದ ಬಿಜೆಪಿಯ ಅತ್ಯಂತ ಕಿರಿಯ ಶಾಸಕಿ ಮೈಥಿಲಿ ಠಾಕೂರ್...