ನಿಗೂಢ ರೋಗಕ್ಕೆ ತುತ್ತಾದ ಜಮ್ಮು ಕಾಶ್ಮೀರ 17 ಜನ ಮೃತ್ಯು 500 ಮಂದಿ ಕ್ವಾರಂಟೈನ್ ಕೇಂದ್ರಗಳಿಗೆ ರವಾನೆ!

3

ಜಮ್ಮು ಮತ್ತು ಕಾಶ್ಮೀರದಲ್ಲಿ ಕಂಡು ಬಂದಿರುವ ನಿಗೂಢ ಕಾಯಿಲೆಯೊಂದು ಸರ್ಕಾರ ಹಾಗೂ ಜನರ ನಿದ್ದೆಗೆಡುವಂತೆ ಮಾಡಿದ್ದು, ಈ ನಡುವಲ್ಲೇ ರಜೌರಿ ಜಿಲ್ಲೆಯ ಬಾಧಲ್ ಗ್ರಾಮದ ಸುಮಾರು 400-500 ನಿವಾಸಿಗಳನ್ನು ಕ್ವಾರಂಟೈನ್‌ಗಾಗಿ ಸರ್ಕಾರಿ ವಸತಿಗೃಹಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿದುಬಂದಿದೆ

. ಗ್ರಾಮದಲ್ಲಿ ಎರಡು ದಿನಗಳಲ್ಲಿ 5 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ರಜೌರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗ್ರಾಮವನ್ನು ಕಂಟೈನ್‌ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದಾರೆ.

ಗ್ರಾಮವನ್ನು ಮೂರು ಕಂಟೈನ್‌ಮೆಂಟ್ ವಲಯಗಳಾಗಿ ವಿಂಗಡಿಸಲಾಗಿದೆ. ಮೊದಲನೇ ವಲಯ 17 ಮಂದಿ ಸಾವನ್ನಪ್ಪಿರೋ ಪ್ರದೇಶ ಇದಾಗಿದ್ದು, ಇದನ್ನು ಸಂಪೂರ್ಣ ಲಾಕ್ ಮಾಡಲಾಗಿದೆ.

ಈ ಗ್ರಾಮಕ್ಕೆ ಯಾವುದೇ ಜನರಿಗೆ ಇಲ್ಲಿ ಪ್ರವೇಶವಿಲ್ಲ ಹಾಗೂ ಮೃತರ ಮನೆಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ. ಇನ್ನು ಈ ಪ್ರದೇಶಕ್ಕೆ ಹೋಗುವವರಿಗೆ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.


ಎರಡನೇ ವಲಯದ ಮೃತ ವ್ಯಕ್ತಿಗಳ ನಿಕಟ ಸಂಪರ್ಕದಲ್ಲಿರುವವರು ವಾಸಿಸುತ್ತಿವ ಜಾಗ ಇದಾಗಿದ್ದು. ಈ ವಲಯದಲ್ಲಿರುವ ಹಲವರಿಗೆ ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದ ಈ ಪ್ರದೇಶಕ್ಕೆ ಅನಗತ್ಯವಾಗಿ ಹೋಗದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ.

ಮೂರನೇ ವಲಯ ಒಂದು ಮತ್ತು ಎರಡನೇ ವಲಯ ಹೊರತು ಪಡೆಸಿದ ಗ್ರಾಮದ ಜಾಗವನ್ನು ಮೂರನೇ ವಲಯ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಈ ಭಾಗ ಇರುವುದರಲ್ಲಿ ಸುರಕ್ಷಿತ ಪ್ರದೇಶ ಎಂದು ಪರಿಗಣಿಸಲಾಗಿದೆ. ಅಗತ್ಯ ಮುಂಜಾಗೃತೆವಹಿಸುವಂತೆ ಈ ವಲಯದವರಿಗೂ ಸೂಚನೆಗಳನ್ನು ನೀಡಲಾಗಿದೆ.

ಕಂಟೈನ್‌ಮೆಂಟ್ ಝೋನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸೋಂಕಿತರ ಕುಟುಂಬಸ್ಥರು, ಸಂಬಂಧಿಕರು ಸೇರಿದಂತೆ ಸಂಪರ್ಕತರನ್ನು ಕ್ವಾರಂಟೈನ್ ನಲ್ಲಿ ಇರಿಸುವ ನಿರ್ಧಾರವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.

ಇಡೀ ಗ್ರಾಮವನ್ನು ಸ್ಥಳಾಂತರಿಸುತ್ತಿಲ್ಲ. ಬದಲಿಗೆ ಸೋಂಕಿತರ ಕುಟುಂಬಸ್ಥರು ಹಾಗೂ ಸಂಪರ್ಕಿತರನ್ನು ಅವರ ಸುರಕ್ಷತೆಯ ದೃಷ್ಠಿಯಿಂದ ಸ್ಥಳಾಂತರಿಸಲಾಗುತ್ತಿದೆ ಎಂದು ಶಾಸಕ ಬುಧಾಲ್ ಜಾವೇದ್ ಇಕ್ಬಾಲ್ ಅವರು ಹೇಳಿದ್ದಾರೆ.

ಕ್ವಾರಂಟೈನ್ ಗಾಗಿ ಜಿಎಂಸಿ, ಹಳೇ ಆಸ್ಪತ್ರೆ, ನರ್ಸಿಂಗ್ ಕಾಲೇಜು ಮತ್ತು ಬಾಯ್ಸ್ ಹೈಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು. ಗ್ರಾಮಸ್ಥರನ್ನು ಅಲ್ಲಿಗೆ ಸ್ಥಳಾಂತರಿಸಲಾಗುತ್ತಿದೆ

, ಈ ಕೇಂದ್ರಗಳಲ್ಲಿ ನಿಯಮಿತ ತಪಾಸಣೆ ಮತ್ತು ಆಹಾರ ಪೂರೈಕೆ ಸೇರಿದಂತೆ ವಾಸ್ತವ್ಯಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.2024ರ ಡಿಸೆಂಬರ್ 7ರಿಂದ ಜಮ್ಮು ಕಾಶ್ಮೀರದಲ್ಲಿ ವಿಚಿತ್ರ ಕಾಯಿಲೆಗೆ ಹಲವರು ಬಲಿಯಾಗುತ್ತಿದ್ದಾರೆ.

ಒಂದು ಕಾರ್ಯಕ್ರಮವೊಂದರಲ್ಲಿ ಊಟ ಮಾಡಿದ ಬಳಿಕ ಹಲವು ಮಂದಿ ಅಸ್ವಸ್ಥರಾಗಿದ್ದರು. ಫಜಲ್ ಹುಸೇನ್ ಅವರು ತಮ್ಮ ನಾಲ್ವರು ಪುತ್ರಿಯರನ್ನು ಕಳೆದುಕೊಂಡಿದ್ದಾರೆ.

ಮೊಹಮ್ಮದ್ ರಫೀಕ್ ಎಂಬುವವರು ತಮ್ಮ ಪತ್ನಿ ಮತ್ತು ಮೂವರು ಮಕ್ಕಳನ್ನು ಕಳೆದುಕೊಂಡರೆ, ಮೊಹಮ್ಮದ್ ಅಸ್ಲಾಮ್ ಅವರು ಆರು ಮಕ್ಕಳು, ತಾಯಿ, ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ಕಳೆದುಕೊಂಡಿದ್ದಾರೆ

. 10 ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಎಂಸಿ ರಜೌರಿಯಲ್ಲಿ ಆರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಸಿಕೆಯ ಲಕ್ಷಣಗಳು ಕಂಡು ಬಂದಿದೆ.

ಜಮ್ಮುವಿನ ಎಸ್‌ಎಂಜಿಎಸ್ ಆಸ್ಪತ್ರೆಯಲ್ಲಿ ಮೂವರು ದಾಖಲಾಗಿದ್ದು, ಓರ್ವ ವ್ಯಕ್ತಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಪಿಜಿಐ ಚಂಡೀಗಢದಲ್ಲಿ ಮತ್ತೋರ್ವ ರೋಗಿಯು ಕೂಡ ಚೇತರಿಸಿಕೊಳ್ಳುತ್ತಿದ್ದಾರೆ.

10 ರೋಗಿಗಳಲ್ಲಿ ಎಂಟು ಮಂದಿ ಸೋಂಕು ಪೀಡಿತ ಕುಟುಂಬಗಳಿಂದ ಬಂದವರಾಗಿದ್ದರೆ, ಇಬ್ಬರಿಗೆ ಯಾವುದೇ ಸಂಪರ್ಕವಿಲ್ಲದಿದ್ದರೂ ಸೋಂಕು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಇಸ್ಲಾಂಗೆ ಮತಾಂತರ, ಮದುವೆಗೆ ನಿರಾಕರಣೆ; ಕತ್ತು ಸೀಳಿ ಭಾಗ್ಯಶ್ರೀ ಹತ್ಯೆ ಮಾಡಿದ ಶೇಖ್ ರಯೀಸ್

ಮಧ್ಯಪ್ರದೇಶದಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದ್ದು, ಧಾರ್ಮಿಕ ಮತಾಂತರ ಮತ್ತು ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬರನ್ನು...

ವಿಧಾನಸಭೆ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲ್ ನಲ್ಲಿ ರಮ್ಮಿ ಅಡಿ ಕೃಷಿ ಖಾತೆಯನ್ನು ಕಳೆದುಕೊಂಡ ಸಚಿವ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲಿನಲ್ಲಿ ರಮ್ಮಿ ಆಡುತ್ತಿದ್ದ ಮಾಣಿಕ್ರಾವ್ ಕೊಕಾಟೆ ಕೃಷಿ...

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ದೋಷಿ ತೀರ್ಪು ವಿಶೇಷ ನ್ಯಾಯಾಲಯದಿಂದ ನಾಳೆ ಶಿಕ್ಷೆ ಪ್ರಮಾಣ ಪ್ರಕಟ

ಬೆಂಗಳೂರು: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಾಜಿ ಸಂಸದ ಪ್ರಜ್ವಲ್...

ಅವಧೇಶಾನಂದ ಮಹಾರಾಜ್ ಕೊಲೆ ಪ್ರಕರಣ: ಆರ್ ಎಸ್ಎಸ್ ಮಾಜಿ ಪ್ರಚಾರಕ ಉತ್ತಮ್ ಗಿರಿಗೆ ಜೀವಾವಧಿ ಶಿಕ್ಷೆ

ಸಿರೋಹಿ: 2018 ರಲ್ಲಿ ಏಕಲ್ ವಿದ್ಯಾಲಯದ ಪೋಷಕ ಅವಧೇಶಾನಂದ ಮಹಾರಾಜ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ...