ಮುಖ್ಯ ವಾಹಿನಿಯ ಯತ್ತ ನಕ್ಸಲಿಯರು ಮಹಿಳೆ ಸೇರಿದಂತೆ ಐವರು ನಕ್ಸಲಿಯರ ಶರಣಾಗತಿ

70

“ಇಬ್ಬರು ನಕ್ಸಲೀರನ್ನು ಅರಣ್ಯದಿಂದ ಬಂಧಿಸಲಾಗಿದ್ದರೂ ಓರ್ವ ಮಹಿಳೆ ಸೇರಿದಂತೆ ಐವರು ನಕ್ಸಲೀಯರು ಛತ್ತೀಸ್ ಗಢದ ಬಸ್ತಾರ್ ವಲಯದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಿರಿಯ ನಕ್ಸಲ್ ಮುಖಂಡರಿಂದ ನಡೆಯುತ್ತಿರುವ ದೌರ್ಜನ್ಯ ಮತ್ತು ಅಮಾನವೀಯತೆ, ಪೊಳ್ಳು ನಕ್ಸಲ್ ಸಿದ್ದಾಂತದಿಂದ ಹತಾಶೆಗೊಂಡು ಶರಣಾಗತಿಯಾಗುತ್ತಿರುವುದಾಗಿ ಸೋಮವಾರ ಮಧ್ಯಾಹ್ನ ಸುಕ್ಮಾದಲ್ಲಿ ಹಿರಿಯ ಪೊಲೀಸ್ ಮತ್ತು ಸಿಆರ್ ಪಿಎಫ್ ಅಧಿಕಾರಿಗಳ ಮುಂದೆ ನಕ್ಸಲೀಯರು ಹೇಳಿದ್ದಾರೆ.


ಪ್ರತ್ಯೇಕ ಘಟನೆಯಲ್ಲಿ ಬಿಜಾಪುರ ಜಿಲ್ಲೆಯ ಬರ್ದೆಲಾ ಮತ್ತು ಬಾಡೆ ಗ್ರಾಮಗಳ ನಡುವಣ ಅರಣ್ಯದಿಂದ ಭಾನುವಾರ ಸಂಜೆ ಇಬ್ಬರು ನಕ್ಸಲೀಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ರಾಜ್ಯ ಸರ್ಕಾರದ ನಕ್ಸಲ್ ಪುರ್ನವಸತಿ ನೀತಿ ಮತ್ತು ದೂರದ ಹಳ್ಳಿಗಳಲ್ಲಿ ಅಭಿವೃದ್ದಿಗಾಗಿ ನಿಯಾದ್ ನೆಲ್ಲನಾರ್’ ಯೋಜನೆಯಿಂದ ಪ್ರೇರಣೆಗೊಂಡು ಶರಣಾಗಿರುವುದಾಗಿ ನಕ್ಸಲೀಯರು ತಿಳಿಸಿದ್ದಾರೆ.

ಈ ನಕ್ಸಲೀಯರು ಪೊಲೀಸ್ ತಂಡಗಳ ಮೇಲೆ ದಾಳಿ, ಐಇಡಿ ಸ್ಫೋಟ, ರಸ್ತೆ ಹಾನಿ, ನಕ್ಸಲ್ ಪೋಸ್ಟರ್ ಮತ್ತು ಬ್ಯಾನರ್ ಅಳವಡಿಕೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಬೆಂಗಳೂರಿಗೆ ಬರಲಿದೆ ಬುಲೆಟ್ ಟ್ರೈನ್ ದೇಶದಲ್ಲಿ ಏಳು ಹೊಸ ಬುಲೆಟ್ ರೈಲು ಯೋಜನೆಗಳನ್ನು ಘೋಷಣೆ ಮಾಡಿದ ಕೇಂದ್ರ ಸರಕಾರ

“ನವದೆಹಲಿ: ಕೇಂದ್ರ ಸರ್ಕಾರ ದೇಶದಲ್ಲಿ ಏಳು ಹೊಸ ಬುಲೆಟ್ ರೈಲು ಯೋಜನೆಗಳನ್ನು ಘೋಷಣೆ ಮಾಡಿದ್ದು, ಸದ್ಯ...

ಕಾಶಿ ಗಂಜ್ ಶಹೀದಾ ಮಸೀದಿ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿದ ರೈಲ್ವೇ ಇಲಾಖೆ

ವಾರಣಾಸಿ: ವಾರಣಾಸಿಯ ಕಾಶಿ ರೈಲು ನಿಲ್ದಾಣದ ಮುಖ್ಯ ಪ್ರವೇಶದ್ವಾರದ ಸಮೀಪದಲ್ಲಿರುವ ಗಂಜ್ ಶಹೀದಾ ಮಸೀದಿಯನ್ನು ತೆರವುಗೊಳಿಸುವಂತೆ...

ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದಿಪ್ಕೆಗೆ ಸಾರ್ವಜನಿಕವಾಗಿ ಕಪಾಳಮೋಕ್ಷ

“ಜೈಪುರ: ನೀಟ್ ಪರೀಕ್ಷಾ ಅವಾಂತರದ ವಿರುದ್ಧ ಪ್ರತಿಭಟನೆಗೆ ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್...

ವಿಭಜನೆಯತ್ತ ತೃಣಮೂಲ ಕಾಂಗ್ರೆಸ್  ಬಂಡಾಯ ಸಂಸದರ ಸಂಖ್ಯೆ 20ರ ಮ್ಯಾಜಿಕ್

“ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಬಹುಕಾಲದಿಂದ ನಡೆಯುತ್ತಿದ್ದ ಅಂತರ್ಯುದ್ಧ ಈಗ ನಿಜವಾಗಿದೆ. ತೃಣಮೂಲ ಕಾಂಗ್ರೆಸ್  ಸ್ಥಾಪಕಿ ಮಮತಾ...