ಛತ್ತೀಸ್ ಗಢ ನಕ್ಸಲೀಯರ ಭೀಕರ ಅಟ್ಟಹಾಸ: ಐಇಡಿ ಬಳಸಿ ಸೇನಾ ವಾಹನ ಸ್ಪೋಟಿಸಿದ ನಕ್ಸಲ್ ರು 9 ಯೋಧರು ಹುತಾತ್ಮ,

64

ಬಿಜಾಪುರದಲ್ಲಿ ನಕ್ಸಲೀಯರ ಅಟ್ಟಹಾಸ: ಐಇಡಿ ಬಳಸಿ ಸೇನಾ ವಾಹನ ಸ್ಫೋಟ; 9 ಯೋಧರು ಹುತಾತ್ಮ, ದೇಹಗಳು ಚೆಲ್ಲಾಪಿಲ್ಲಿ!

ಬಸ್ತಾರ್ ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಬಿಜಾಪುರದ ಕುಟ್ರು-ಬೇದ್ರೆ ರಸ್ತೆಯಲ್ಲಿ ನಕ್ಸಲೀಯರು ಐಇಡಿ ಸ್ಫೋಟ ನಡೆಸಿದ್ದಾರೆ

ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶವಾದ ಬಿಜಾಪುರದಲ್ಲಿ ನಕ್ಸಲೀಯರು ದೊಡ್ಡ ಕುಕೃತ್ಯ ಎಸಗಿದ್ದಾರೆ. ಜಂಟಿ ಕಾರ್ಯಾಚರಣೆಯಿಂದ ಹಿಂದಿರುಗುತ್ತಿದ್ದ ಸೇನಾ ವಾಹನವನ್ನು ನಕ್ಸಲಿಯರು ಐಇಡಿಯಿಂದ ಸ್ಫೋಟಿಸಿದ್ದಾರೆ.

ಸ್ಫೋಟದಲ್ಲಿ 8 ಯೋಧರು ಮತ್ತು ಚಾಲಕ ಹುತಾತ್ಮರಾಗಿದ್ದಾರೆ. ಹುತಾತ್ಮರಾದ ಎಲ್ಲಾ ಯೋಧರು ದಾಂತೇವಾಡ ಡಿಆರ್‌ಜಿಯವರು ಎಂದು ಹೇಳಲಾಗಿದೆ. ಈ ಘಟನೆಯನ್ನು ಬಸ್ತಾರ್ ಐಜಿ ಪಿ ಸುಂದರರಾಜ್ ಖಚಿತಪಡಿಸಿದ್ದಾರೆ.

ಬಸ್ತಾರ್ ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಬಿಜಾಪುರದ ಕುಟ್ರು-ಬೇದ್ರೆ ರಸ್ತೆಯಲ್ಲಿ ನಕ್ಸಲೀಯರು ಐಇಡಿ ಸ್ಫೋಟ ನಡೆಸಿದ್ದಾರೆ. ದಂತೇವಾಡ, ನಾರಾಯಣಪುರ ಮತ್ತು ಬಿಜಾಪುರದ ಜಂಟಿ ಕಾರ್ಯಾಚರಣೆ ತಂಡವು ಕಾರ್ಯಾಚರಣೆ ಮುಗಿಸಿ ಹಿಂತಿರುಗುತ್ತಿತ್ತು.

ಜನವರಿ 6ರಂದು ಮಧ್ಯಾಹ್ನ 2.15ರ ಸುಮಾರಿಗೆ ಬಿಜಾಪುರ ಜಿಲ್ಲೆಯ ಕುಟ್ರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಲಿ ಗ್ರಾಮದ ಬಳಿ ಮಾವೋವಾದಿಗಳು ಐಇಡಿ ಸ್ಫೋಟಿಸುವ ಮೂಲಕ ಭದ್ರತಾ ಪಡೆಯ ವಾಹನವನ್ನು ಸ್ಫೋಟಿಸಿದ್ದಾರೆ.

ಸ್ಫೋಟದಲ್ಲಿ 9ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ಬೆಂಗಳೂರಿಗೆ ಬರಲಿದೆ ಬುಲೆಟ್ ಟ್ರೈನ್ ದೇಶದಲ್ಲಿ ಏಳು ಹೊಸ ಬುಲೆಟ್ ರೈಲು ಯೋಜನೆಗಳನ್ನು ಘೋಷಣೆ ಮಾಡಿದ ಕೇಂದ್ರ ಸರಕಾರ

“ನವದೆಹಲಿ: ಕೇಂದ್ರ ಸರ್ಕಾರ ದೇಶದಲ್ಲಿ ಏಳು ಹೊಸ ಬುಲೆಟ್ ರೈಲು ಯೋಜನೆಗಳನ್ನು ಘೋಷಣೆ ಮಾಡಿದ್ದು, ಸದ್ಯ...

ಕಾಶಿ ಗಂಜ್ ಶಹೀದಾ ಮಸೀದಿ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿದ ರೈಲ್ವೇ ಇಲಾಖೆ

ವಾರಣಾಸಿ: ವಾರಣಾಸಿಯ ಕಾಶಿ ರೈಲು ನಿಲ್ದಾಣದ ಮುಖ್ಯ ಪ್ರವೇಶದ್ವಾರದ ಸಮೀಪದಲ್ಲಿರುವ ಗಂಜ್ ಶಹೀದಾ ಮಸೀದಿಯನ್ನು ತೆರವುಗೊಳಿಸುವಂತೆ...

ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದಿಪ್ಕೆಗೆ ಸಾರ್ವಜನಿಕವಾಗಿ ಕಪಾಳಮೋಕ್ಷ

“ಜೈಪುರ: ನೀಟ್ ಪರೀಕ್ಷಾ ಅವಾಂತರದ ವಿರುದ್ಧ ಪ್ರತಿಭಟನೆಗೆ ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್...

ವಿಭಜನೆಯತ್ತ ತೃಣಮೂಲ ಕಾಂಗ್ರೆಸ್  ಬಂಡಾಯ ಸಂಸದರ ಸಂಖ್ಯೆ 20ರ ಮ್ಯಾಜಿಕ್

“ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಬಹುಕಾಲದಿಂದ ನಡೆಯುತ್ತಿದ್ದ ಅಂತರ್ಯುದ್ಧ ಈಗ ನಿಜವಾಗಿದೆ. ತೃಣಮೂಲ ಕಾಂಗ್ರೆಸ್  ಸ್ಥಾಪಕಿ ಮಮತಾ...