thekarnatakatoday.com
News

ಬೆಂಗಳೂರಿನ 8 ವರ್ಷದ ಮಗುವಿಗೆ ಎಚ್ಎಂಪಿ ವಿ ವೈರಸ್ ಸೋಂಕು ಪತ್ತೆಯೆಂಬದು ನಿಜವಲ್ಲ ::ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

HMPV ಹೊಸ ವೈರಸ್ ಅಲ್ಲ, ಭಾರತದಲ್ಲಿ ಮೊದಲ ಕೇಸ್ ಪತ್ತೆ ಎಂಬುದು ನಿಜವಲ್ಲ: ಆರೋಗ್ಯ ಸಚಿವ ಭಾರತದಲ್ಲಿ ಇದು ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ.

ಆದರೆ, ಇದು ನಿಜವಲ್ಲ. ಎಚ್‌ಎಂಪಿವಿ ಹೊಸ ವೈರಸ್ ಅಲ್ಲ. ಅಸ್ತಿತ್ವದಲ್ಲಿರು ವೈರಸ್. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ


ಬೆಂಗಳೂರು: ಎಚ್‌ಎಂಪಿವಿ ಹೊಸ ವೈರಸ್ ಅಲ್ಲ. ಇದು ಅಸ್ತಿತ್ವದಲ್ಲಿರುವ ವೈರಸ ಆಗಿದೆ. ಆಂತಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಗುವೊಂದರಲ್ಲಿ ಎಚ್‌ಎಂಪಿವಿ ಸೋಂಕು ಪತ್ತೆಯಾಗಿರುವ ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಭಾರತದಲ್ಲಿ ಇದು ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ.

ಆದರೆ, ಇದು ನಿಜವಲ್ಲ. ಎಚ್‌ಎಂಪಿವಿ ಹೊಸ ವೈರಸ್ ಅಲ್ಲ. ಅಸ್ತಿತ್ವದಲ್ಲಿರು ವೈರಸ್. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.


ಈ ವೈರಸ್ ನಿಂದ ಉಸಿರಾಟದ ತೊಂದರೆ ಸಮಸ್ಯೆ ಸಾಧ್ಯತೆ ಇದೆ. ಈ ವೈರಸ್ ಕಡಿಮೆ ಇಮ್ಯೂನಿಟಿ ಹೊಂದಿರುವ ಮಕ್ಕಳಿಗೆ ಬರುತ್ತೆ. ಮಗುವಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಮಗು ಹಾಗೂ ಪೋಷಕರು ಸ್ಥಳೀಯರಾಗಿದ್ದಾರೆ

. ಇಲ್ಲಿ ಕಂಡುಬಂದಿರುವ ವೈರಸ್ಗೂ, ಚೀನಾ ವೇರಿಯಂಟ್ಗೂಐ ಸಂಬಂಧವಿಲ್ಲ. ಇದರ ಬಗ್ಗೆ ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಪ್ರಸ್ತುತ ಮಗುವಿಗೆ ಯಾವುದೇ ಸಮಸ್ಯೆ ಇಲ್ಲ. ಸ್ಯಾಂಪಲ್ ಅನ್ನು ಪುಣೆ ಲ್ಯಾಬ್ ಗೆ ಕಳುಹಿಸುತ್ತೇವೆ.

ಇದರ ಬಗ್ಗೆ ಐಸಿಎಂಆರ್, ಕೇಂದ್ರದಿಂದ ಮಾಹಿತಿ ಪಡೆದು ಮುಂದೆ ಚರ್ಚೆ ಮಾಡುತ್ತೇವೆ. ಎಲ್ಲಾ ಕಡೆ ಟೆಸ್ಟ್ ಮಾಡುತ್ತೇವೆ. ಇದರ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುತ್ತೇವೆ ಎಂದು ಹೇಳದರು.




Related posts

ಕನ್ನಡಿಗರ ಮೇಲೆ ಹಲ್ಲೆ ಖಂಡಿಸಿ ಮಾರ್ಚ್ 3 ರಾಜ ಭವನ ಚಲೋ ಮಾರ್ಚ್ 22 ಕರ್ನಾಟಕ ಬಂದ್ ಗೆ ಕರೆ ವಾಟಾಳ್ ನಾಗರಾಜ್

The Karnataka Today

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರಕ್ಕಾಗಿ ಅಧಿಕಾರಿಗಳ ಬಲಿ ಪಡೆಯುತ್ತಿದೆ ಆರ್ ಅಶೋಕ್

The Karnataka Today

ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ :: ಬಿಜೆಪಿ ಮಹಿಳಾ ಮೋರ್ಚಾ ಆರೋಪ

The Karnataka Today

Leave a Comment

Join our WhatsApp community