ಸಂಕಷ್ಟದಲ್ಲಿರುವ ರೈತರ ಬೇಡಿಕೆ ಈಡೇರಿಕೆಗಾಗಿ ನನ್ನ ಜೀವ ಮುಖ್ಯವಲ್ಲ ರೈತನಾಯಕ ಜಗಜಿತ್ ಸಿಂಗ್ ದಲ್ಲೆವಾಲ್

53

“ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 40 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ‘ನಿಮಗಿಂತ ನನ್ನ ಜೀವ ಮುಖ್ಯವಲ್ಲ’ ಎಂದು ಶನಿವಾರ ರೈತರಿಗೆ ಹೇಳಿದ್ದಾರೆ.

ಇಂದು ಖಾನೌರಿ ಗಡಿಯಲ್ಲಿ(ಪಂಜಾಬ್-ಹರಿಯಾಣ ಗಡಿ) ಕಿಸಾನ್ ಮಹಾಪಂಚಾಯತ್ ಅನ್ನು ಉದ್ದೇಶಿಸಿ ಮಾತನಾಡಿದ ದಲ್ಲೆವಾಲ್ ಅವರು, ಸವಾಲುಗಳಿಂದ “ಸಂಕಷ್ಟದಲ್ಲಿ ತತ್ತರಿಸುತ್ತಿರುವ” ತಮ್ಮ ಸಹವರ್ತಿ ರೈತರ ಜೀವನದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಾಗಿ ತಿಳಿಸಿದ್ದಾರೆ.

“ಸಂಕಷ್ಟದಲ್ಲಿ ತತ್ತರಿಸುತ್ತಿರುವ ಲಕ್ಷಾಂತರ ಭಾರತೀಯ ರೈತರ ಜೀವಕ್ಕಿಂತ ನನ್ನ ಜೀವ ಮುಖ್ಯವಲ್ಲ. ಈಗಾಗಲೇ ಏಳು ಲಕ್ಷಕ್ಕೂ ಹೆಚ್ಚು ರೈತರು ಕೃಷಿ ವಲಯದಲ್ಲಿನ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ದಲ್ಲೆವಾಲ್ ಹೇಳಿದರು.

  ಆಮರಣಾಂತ ಉಪವಾಸ ಸತ್ಯಾಗ್ರಹದ 40ನೇ ದಿನದಂದು ರೈತರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ದಲ್ಲೆವಾಲ್, ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಬ್ಯಾನರ್ ಅಡಿಯಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಖಾನೌರಿ ಗಡಿಯಲ್ಲಿರುವ ಪ್ರತಿ ಹಳ್ಳಿಯಿಂದ ರೈತರು ಭಾಗವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ನಿರತ ರೈತರ ನಿರಂತರ ಬೆಂಬಲಕ್ಕೆ ಧನ್ಯವಾದ ಹೇಳಿದ 70 ವರ್ಷದ ರೈತ ನಾಯಕ ದಲ್ಲೆವಾಲ್ ಅವರು, ಹೋರಾಟದಲ್ಲಿ ಒಗ್ಗಟ್ಟಾಗಿ ಇರುವಂತೆ ಒತ್ತಾಯಿಸಿದರು. ದಲ್ಲೆವಾಲ್‌ ಅವರನ್ನು ಸ್ಟ್ರೆಚರ್‌ನಲ್ಲಿ ಪ್ರತಿಭಟನಾ ಸ್ಥಳಕ್ಕೆ ತರಲಾಗಿದ್ದು, ಅವರು ವೇದಿಕೆಯಲ್ಲಿ ಹಾಸಿಗೆಯಲ್ಲಿ ಮಲಗಿಕೊಂಡೇ ರೈತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ,

ಆರೋಗ್ಯ ಹದಗೆಟ್ಟಿದ್ದರೂ ಯಾವುದೇ ವೈದ್ಯಕೀಯ ನೆರವು ಪಡೆಯಲು ಅವರು ಈವರೆಗೆ ನಿರಾಕರಿಸುತ್ತಲೇ ಬಂದಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ದಲ್ಲೆವಾಲ್ ಅವರು ಕಿರು ವೀಡಿಯೊ ಸಂದೇಶಗಳ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಆದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ ಬಳಿಕ ಶನಿವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ

Leave a comment

Leave a Reply

Your email address will not be published. Required fields are marked *

Related Articles

ಟಿಸಿಎಸ್ ನಲ್ಲಿ ಕಾರ್ಪೊರೇಟ್ ಜಿಹಾದ್ ಲೈಂಗಿಕ ಕಿರುಕುಳ ಪ್ರಕರಣ ಬುರ್ಖಾ ಧರಿಸುವಂತೆ ಕಿರುಕುಳ ಹಿಂದೂ ಧರ್ಮ ನಿಂದನೆ ಸತ್ಯ ಬಿಚ್ಚಿಟ್ಟ ಸಂತ್ರಸ್ತೆ

ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ದೇಶದ ಪ್ರಮುಖ ಟೆಕ್ ಕಂಪನಿ ಟಿಸಿಎಸ್ ನಲ್ಲಿ ನಡೆದಿದೆ ಎನ್ನಲಾದ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ಪೋಟಕ್ಕೆ ಸಂಚು ನಾಲ್ವರು ಉಗ್ರರ ಬಂಧನ ತಪ್ಪಿದ ಬಾರಿ ದುರಂತ

“ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಮಹಾಸ್ಫೋಟಕ್ಕೆ ಸಂಚು ನಡೆದಿದೆ. ಸೂಕ್ಷ್ಮ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು...

ಕ್ಷೇತ್ರ ಪುನರ್ವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ ಮಂಡನೆ; ವಿರೋಧಿಸಿ ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸಿದ ವಿಪಕ್ಷಗಳು

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಗುರುವಾರ ಆರಂಭದ ದಿನವೇ ತೀವ್ರ ರಾಜಕೀಯ ವಾಗ್ವಾದ, ಕೋಲಾಹಲ ಉಭಯ...

ಬಿಹಾರ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕಾರ

ಭಾರತೀಯ ಜನತಾ ಪಕ್ಷದ  ನಾಯಕ ಸಾಮ್ರಾಟ್ ಚೌಧರಿ ಅವರು ಇಂದು ಬುಧವಾರ ಬಿಹಾರದ 24ನೇ ಮುಖ್ಯಮಂತ್ರಿಯಾಗಿ...