ಚೀನಾ ಕಿರಿಕ್ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟುವ ಚೀನಾದ ನೂತನ ಡ್ಯಾಮ್ ಗೆ ಭಾರತದ ಆಕ್ಷೇಪ

3

ಚೀನಾದಿಂದ ಎರಡು ಹೊಸ ಕೌಂಟಿಗಳು: ಭಾರತದಿಂದ ಬಲವಾದ ಪ್ರತಿಭಟನೆ, ಬ್ರಹ್ಮಪುತ್ರ ಡ್ಯಾಮ್ ಗೂ ಆಕ್ಷೇಪ ಭಾರತ ಈ ಕುರಿತು ಚೀನಾದೊಂದಿಗೆ “ಬಲವಾದ ಪ್ರತಿಭಟನೆ” ದಾಖಲಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಶುಕ್ರವಾರ ಹೇಳಿದ್ದಾರೆ.

MEA ವಕ್ತಾರ ರಣಧೀರ್ ಜೈಸ್ವಾಲ್ ಅವರು ಶುಕ್ರವಾರ, ಜನವರಿ 3, 2025 ರಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು


ಲಡಾಕ್ ಗಡಿಯಲ್ಲಿ ಚೀನಾ ಮತ್ತೆ ಕಿರಿಕ್ ಆರಂಭಿಸಿದ್ದು, ಭಾರತದ ಭೂ ಭಾಗದ ಹೋಟಾನ್ ಪ್ರಾಂತ್ಯದಲ್ಲಿ ಎರಡು ಹೊಸ ಕೌಂಟಿಗಳನ್ನು ನಿರ್ಮಿಸಿದೆ. ಚೀನಾದ ಈ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದೆ

. ಭಾರತ ಈ ಕುರಿತು ಚೀನಾದೊಂದಿಗೆ “ಬಲವಾದ ಪ್ರತಿಭಟನೆ” ದಾಖಲಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಶುಕ್ರವಾರ ಹೇಳಿದ್ದಾರೆ.

ಚೀನಾದ ಹೋಟಾನ್ ಪ್ರಿಫೆಕ್ಚರ್‌ನಲ್ಲಿ ಎರಡು ಕೌಂಟಿಗಳ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕಟಣೆಯನ್ನು ನಾವು ಗಮನಿಸಿದ್ದೇವೆ. ಈ ಕೌಂಟಿಗಳ ಕೆಲವು ಭಾಗಗಳು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಬರುತ್ತವೆ ಮತ್ತು ಚೀನಾದ ಈ ಅಕ್ರಮ ಆಕ್ರಮಣವನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.

ಸುಮಾರು ಐದು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಗಡಿ ಮಾತುಕತೆಯನ್ನು ಎರಡು ರಾಷ್ಟ್ರಗಳ ವಿಶೇಷ ಪ್ರತಿನಿಧಿಗಳು ಪುನರಾರಂಭಿಸಿದ ಕೆಲವು ದಿನಗಳ ನಂತರ ಎರಡು ಕೌಂಟಿಗಳನ್ನು ನಿರ್ಮಿಸುವ ಕುರಿತು ಚೀನಾ ಘೋಷಣೆ ಮಾಡಿದೆ. “

ಹೊಸ ಕೌಂಟಿಗಳ ನಿರ್ಮಾಣವು ಪ್ರದೇಶದ ಮೇಲೆ ನಮ್ಮ ಸಾರ್ವಭೌಮತ್ವದ ಬಗ್ಗೆ ಭಾರತದ ದೀರ್ಘಕಾಲೀನ ಮತ್ತು ಸ್ಥಿರವಾದ ನಿಲುವಿನ ಮೇಲೆ ಪರಿಣಾಮ ಬೀರುವುದಿಲ್ಲ ಅಥವಾ ಚೀನಾದ ಅಕ್ರಮ ಮತ್ತು ಬಲವಂತದ ಆಕ್ರಮಣಕ್ಕೆ ಒಪ್ಪಿಗೆ ನೀಡುವುದಿಲ್ಲ” ಎಂದು ಜೈಸ್ವಾಲ್ ಹೇಳಿದ್ದಾರೆ.

ಇನ್ನು ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಮೆಗಾ ಅಣೆಕಟ್ಟು ನಿರ್ಮಿಸುವ ಚೀನಾದ ಉದ್ದೇಶಿತ ಯೋಜನೆಗೂ ಭಾರತ ಆಕ್ಷೇಪ ವ್ಯಕ್ತಪಡಿಸಿದೆ

(ಜಾಗತಿಕ ಜಗಲಿ) ಪ್ರಸ್ತಾವಿತ ಅಣೆಕಟ್ಟಿಗೆ ತನ್ನ ಮೊದಲ ಪ್ರತಿಕ್ರಿಯೆಯಲ್ಲಿ, ಬ್ರಹ್ಮಪುತ್ರದ ಕೆಳಗಿರುವ ರಾಜ್ಯಗಳ ಹಿತಾಸಕ್ತಿಗಳಿಗೆ ಅಪ್‌ಸ್ಟ್ರೀಮ್ ಪ್ರದೇಶಗಳಲ್ಲಿನ ಚಟುವಟಿಕೆಗಳಿಂದ ಹಾನಿಯಾಗದಂತೆ ನೋಡಿಕೊಳ್ಳಲು ಬೀಜಿಂಗ್ ಅನ್ನು ದೆಹಲಿ ಒತ್ತಾಯಿಸಿದೆ.

“ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಮೇಲ್ವಿಚಾರಣೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತೇವೆ” ಎಂದು ಜೈಸ್ವಾಲ್ ತಿಳಿಸಿದ್ದಾರೆ

Leave a comment

Leave a Reply

Your email address will not be published. Required fields are marked *

Related Articles

ಕೇರಳ ನರ್ಸ್ ನಿಮಿಷಾ ಪ್ರಿಯಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಯೆಮೆನ್ ಗಲ್ಲು ಶಿಕ್ಷೆ ರದ್ದಾಗಿಲ್ಲ; ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ನವದೆಹಲಿ: ಯುದ್ಧಪೀಡಿತ ಯೆಮೆನ್ ದೇಶದಲ್ಲಿ ಮರಣದಂಡನೆ ಎದುರಿಸುತ್ತಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಪ್ರಕರಣಕ್ಕೆ...

ಮ್ಯಾನ್ಮಾರ್‌ನಲ್ಲಿ ಭಾರತದ ಸರ್ಜಿಕಲ್ ಸ್ಟ್ರೈಕ್?: ಡ್ರೋನ್ ದಾಳಿಯಲ್ಲಿ ಉಲ್ಫಾ-ಐ ಕಮಾಂಡರ್ ನಯನ್ ಮೇಧಿ ಸೇರಿ 19 ಮಂದಿ ಸಾವು

ಮ್ಯಾನ್ಮಾರ್‌ನ ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ-ಇಂಡಿಪೆಂಡೆಂಟ್ (ULFA) ತನ್ನ ಪೂರ್ವ ಪ್ರಧಾನ ಕಚೇರಿಯ...

ಪಾಕಿಸ್ತಾನದ ಐಎಸ್ ಐ ಜೊತೆಗೆ ಸಂಬಂಧ ಹೊಂದಿದ್ದ ಮೋಸ್ಟ್ ವಾಂಟೆಡ್ ಉಗ್ರ ಪವಿತ್ರ ಸಿಂಗ್ ಬಟಾಲ ಬಂಧನ

“ಪಾಕಿಸ್ತಾನದ ಐಎಸ್ ಐ ಜೊತೆಗೆ ಸಂಪರ್ಕ ಹೊಂದಿರುವ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ) ಸಂಘಟನೆಯೊಂದಿಗೆ ಸಂಬಂಧ...

ಕೈಲಾಸ ಮಾನಸ ಸರೋವರ ಯಾತ್ರೆ ಸೇತುವೆ ಕುಸಿತದಿಂದ ಗೈರಾ೦ಗ್ ಕೌಂಟಿಯಲ್ಲಿ ಸಿಲುಕಿಕೊಂಡ 23 ಯಾತ್ರಿಗಳು

“ಭೂಕುಸಿತದಿಂದಾಗಿ ಸೇತುವೆ ಕುಸಿದ ಪರಿಣಾಮ, ಕೈಲಾಸ ಮಾನಸಸರೋವರಕ್ಕೆ ತೆರಳುತ್ತಿದ್ದ 23 ಯಾತ್ರಿಕರ ಗುಂಪು ಟಿಬೆಟ್‌ನ ಗೈರಾಂಗ್...