ಪದಚ್ಯುತ ಮಾಜಿ ಪ್ರಧಾನಿ ಶೇಖ್ ಹಸೀನಾ ರನ್ನು ಕಳಿಸಿಕೊಡುವಂತೆ ಭಾರತ ಸರಕಾರಕ್ಕೆ ಪತ್ರ ಬರೆದ ಬಾಂಗ್ಲಾದೇಶ ಸರಕಾರ

57

“ಪದಚ್ಯುತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಢಾಕಾಗೆ ವಾಪಸ್ ಕಳುಹಿಸುವಂತೆ ಕೋರಿ ಭಾರತಕ್ಕೆ ರಾಜತಾಂತ್ರಿಕ ಪತ್ರವನ್ನು ಕಳುಹಿಸಲಾಗಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಸೋಮವಾರ ತಿಳಿಸಿದೆ.

ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ 77 ವರ್ಷದ ಹಸೀನಾ ಅವರು ಆಗಸ್ಟ್ 5 ರಂದು ದೇಶವನ್ನು ಭಾರತಕ್ಕೆ ಪಲಾಯನ ಮಾಡಿದ್ದರು.

ಪ್ರತಿಭಟನೆ ಉಂಟಾದ ಹಿಂಸಾಚಾರಾಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು (ICT) ಹಸೀನಾ ಸೇರಿದಂತೆ ಹಲವಾರು ಮಾಜಿ ಸಚಿವರು, ಸಲಹೆಗಾರರು ಮತ್ತು ಮಿಲಿಟರಿ ಮತ್ತು ನಾಗರಿಕ ಅಧಿಕಾರಿಗಳ ವಿರುದ್ದ ಪ್ರಕರಣಗಳನ್ನು ದಾಖಲಿಸಿದ್ದು, ಬಂಧನ ವಾರಂಟ್‌ಗಳನ್ನು ಹೊರಡಿಸಿದೆ.

‘ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿ ಶೇಖ್ ಹಸೀನಾ ಅವರು ಢಾಕಾಗೆ ಮರಳಬೇಕು ಎಂದು ಬಾಂಗ್ಲಾದೇಶವು ಬಯಸುತ್ತದೆ.

ಹೀಗಾಗಿ, ನಾವು ಭಾರತ ಸರ್ಕಾರಕ್ಕೆ ಮೌಖಿಕ (ರಾಜತಾಂತ್ರಿಕ ಸಂದೇಶ) ಕಳುಹಿಸಿದ್ದೇವೆ’ ಎಂದು ವಿದೇಶಾಂಗ ಸಚಿವ ತೌಹಿದ್ ಹುಸೇನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಗೃಹ ಸಚಿವ ಜಹಾಂಗೀರ್ ಆಲಂ ತಾವು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಮನವಿ ಮಾಡಲಾಗಿದೆ.

ಈ ಸಂಬಂಧ ಪ್ರಕ್ರಿಯೆಗಳು ಪ್ರಗತಿಯಲ್ಲಿರುವುದಾಗಿ ತಿಳಿಸಿದ್ದಾರೆ. ಢಾಕಾ ಮತ್ತು ನವದೆಹಲಿ ನಡುವೆ ಹಸ್ತಾಂತರ ಒಪ್ಪಂದವು ಈಗಾಗಲೇ ಅಸ್ತಿತ್ವದಲ್ಲಿದೆ.

ಈ ಒಪ್ಪಂದದ ಅಡಿಯಲ್ಲಿ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಮರಳಿ ಕರೆತರಬಹುದು ಎಂದು ಆಲಂ ಹೇಳಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ದೇಶ ರಕ್ಷಣೆಗೆ 92 ಶತಕೋಟಿ ಡಾಲರ್ ಬಜೆಟ್ ವಿಶ್ವದ 5ನೇ ರಾಷ್ಟ್ರವಾಗಿ ಎಲೈಟ್ ಗ್ರೂಪ್ ಸೇರಿದ ಭಾರತ!

ನವದೆಹಲಿ: ರಕ್ಷಣಾ ವಿಭಾಗದಲ್ಲಿ ಭಾರತ ಐತಿಹಾಸಿಕ ಮೈಲುಗಲ್ಲು ಸಾಧಿಸಿದ್ದು, ದೇಶದ ರಕ್ಷಣಾ ಬಜೆಟ್ 92 ಶತಕೋಟಿ...

ಅಮೆರಿಕ ಶ್ವೇತಭವನದಲ್ಲಿ ಔತಣಕೂಟ ವೇಳೆ ಶೂಟೌಟ್ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್,

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದ ಆಡಳಿತ ಶಕ್ತಿಕೇಂದ್ರ ವೈಟ್ ಹೌಸ್ ನಲ್ಲಿ ಕ್ಷಿಪ್ರ ಬೆಳವಣಿಗೆಯೊಂದು ನಡೆದಿದೆ....

ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಬರುತ್ತಿದ್ದ ಎಪಾಮಿನೊಂಡಾಸ್ ಮತ್ತು ಎಂಎಸ್‌ಸಿ ಫ್ರಾನ್ಸೆಸ್ಕಾ ಹಡಗುಗಳನ್ನು ವಶಕ್ಕೆ ಪಡೆದ ಇರಾನ್ ನೌಕಾ ಪಡೆ

“ಟೆಹರಾನ್: ಭಾರತಕ್ಕೆ ಬರುತ್ತಿದ್ದ ಹಡಗು ಸೇರಿದಂತೆ ಎರಡು ಹಡಗುಗಳ ಮೇಲೆ ಇರಾನ್ ನೌಕಪಡೆ ಸಮುದ್ರದಲ್ಲೇ ಮಿಂಚಿನ...

ದಿಗ್ಬಂಧನ ನಡುವೆ ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ಹಡಗು ಸಾಗಲು ಇರಾನ್ ಭರವಸೆ

ಟೆಹರಾನ್: ಅಮೆರಿಕ ಇರಾನ್ ಬಂದರುಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಈ ಪ್ರದೇಶದಲ್ಲಿ ಮತ್ತೆ ಉದ್ವಿಗ್ನತೆ...