ದ ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಲಿಮಿಟೆಡ್ 2021-22ಮತ್ತು 2022-23 ನೇ ಸಾಲಿನಲ್ಲಿ ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಿದ ಅವ್ಯವಹಾರ, ಸಹಕಾರಿ ಕಾನೂನು ಸಂಸ್ಥೆಯ ಉಪನಿಯಮಗಳ ಉಲ್ಲಂಘನೆ ಮತ್ತು ಅಧಿಕಾರ ದುರುಪಯೋಗ ದಂತಹ ಗಂಭೀರ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ಸಹಕಾರಿ ಸಂಘಗಳ ಜಂಟಿ ನಿಬಂಧಕರು ಸಿ ಪ್ರಸಾದ್ ರೆಡ್ಡಿ(ಕೆ ಸಿ, ಎಸ್ ) ಮೈಸೂರು ಪ್ರಾಂತ ಮೈಸೂರು. ಇವರಲ್ಲಿ ಕೋಟ ನಾಗೇಂದ್ರ ಪುತ್ರನ್ ದೂರು ನೀಡಿ ಸಮಗ್ರ ತನಿಖೆ ನಡೆಸುವಂತೆ ವಿನಂತಿ
ಈಗಾಗಲೇ 2020 ಮತ್ತು 2021 ಹಾಗೂ 2022 ಮತ್ತು 23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳಿಂದ ಅವ್ಯವಹಾರ ಸರಕಾರಿ ಕಾನೂನು ಉಪನಿಯಮ ಉಲ್ಲಂಘನೆ, ಅಧಿಕಾರ ದುರುಪಯೋಗ ದಂತಹ ಹಲವಾರು ಗಂಭೀರ ಅಂಶಗಳನ್ನು ಲೆಕ್ಕಪರಿಶೋಧಕರು ಉಲ್ಲೇಖಿಸಿರುವುದು ಮತ್ತು ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಿರುವುದು ಲೆಕ್ಕ ಪರಿಶೋಧನಾ ವರದಿಯಲ್ಲಿ ಕಂಡುಬಂದಿದೆ.
ಪೆಡರೇಷನ್ ನ ಮಂಗಳೂರು ಮತ್ತು ಮಲ್ಪೆ ಶಾಖೆಗಳಲ್ಲಿ ಸಂಸ್ಥೆಯ ಉಪನಿಯಮ ಮತ್ತು ಸರ್ಕಾರದ ನಿಯಮಗಳನ್ನು ಮೀರಿ ಕರರಹಿತ ಡೀಸೆಲ್ ಮತ್ತು ವಿಪರೀತ ಸಾಲ ವಿತರಣೆ ಮಾಡಿದ್ದು ನಿಯಮ ಮೀರಿ ಡೀಸೆಲ್ ವಿತರಣೆ ಮಾಡಿರುವುದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ತೆರಿಗೆ ನಷ್ಟವಾಗಿರುತ್ತದೆ. ಹೀಗೆ ಫೆಡರೇಶನ್ ನ ಆರ್ಥಿಕ ತಕ್ತೆ ಪ್ರಕಾರ ಇರುವ ಕ್ಷೇಮ ನಿಧಿಯನ್ನು ವಿನಿಯೋಗಿಸದೇ ಅವ್ಯವಹಾರದಲ್ಲಿ ಬಳಸಿಕೊಂಡು ನಿಯಮ ಉಲ್ಲಂಘನೆ ಮಾಡಿದ್ದಾರೆ,
ಹೀಗೆ ಹಲವಾರು ಅವ್ಯವಹಾರಗಳು ನಡೆದಿದ್ದು ವಾರ್ಷಿಕವಾಗಿ ಸರ್ಕಾರಕ್ಕೆ ಸಲ್ಲಿಸಬೇಕಾದ ಶಿಕ್ಷಣ ನಿಧಿಯನ್ನು ಕೆಲವಾರು ವರ್ಷಗಳಿಂದ ಬಾಕಿ ಇರಿಸಿಕೊಂಡು ಅದನ್ನು ವ್ಯವಹಾರಕ್ಕೆ ದುರ್ಬಳಕೆ ಮಾಡಿಕೊಂಡಿದ್ದಾರೆ.
ಫೆಡರೇಷನ್ ನ ಗೋದಾಮುಗಳ ಬಾಡಿಗೆಗಳನ್ನು ನಿಯಮ ಮೀರಿ ಮಂಡಳಿ ಅಧ್ಯಕ್ಷರ ಸಂಬಂಧಿಗಳಿಗೆ ಬಾಡಿಗೆಗೆ ನೀಡಿ ಅವ್ಯವಹಾರಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಲೆಕ್ಕ ಪರಿಶೋಧನಾ ವರದಿಯಲ್ಲಿ ಸಂಸ್ಥೆಗೆ ಬರುವ ಆದಾಯಕ್ಕಿಂತ ಮಿತಿಮೀರಿ ಖರ್ಚುಗಳನ್ನು ಮಾಡಿರುವುದು, ಲೆಕ್ಕ ಪರಿಶೋಧನಾ ವರದಿಯಲ್ಲಿ ನ್ಯೂನತೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ,
ಸರ್ಕಾರ ಮತ್ತು ಇಲಾಖೆ ಅನುಮತಿ ಪಡೆಯದೇ ದೊಡ್ಡಮಟ್ಟದಲ್ಲಿ ಬ್ಯಾಂಕಿಂಗ್ ವ್ಯವಹಾರಗಳನ್ನು ಪ್ರಾರಂಭಿಸಿದ್ದು, ಆರ್ ಬಿ ಐ ಮತ್ತು ಸಹಕಾರ ನಿಯಮಗಳನ್ನು ಉಲ್ಲಂಘಿಸಿ ಸದಸ್ಯ ರಲ್ಲದವರಿಂದ ಠೇವಣಿಯನ್ನು ಸಂಗ್ರಹಿಸಿರುವುದು ಕಪ್ಪು ಹಣ ಚಲಾವಣೆಗೆ ಅವಕಾಶ ಮಾಡಿಕೊಟ್ಟಿರುವಂತೆ ಗೋಚರವಾಗುತ್ತದೆ.
ಸಂಸ್ಥೆಯಿಂದ ಮತ್ತು ಸಂಸ್ಥೆಯಲ್ಲಿ ವ್ಯವಹಾರ ಮಾಡುವ ಗ್ರಾಹಕರಿಂದ ಆದಾಯ ತೆರಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಯಾಗಿ ಪಡೆಯದೆ ಸರ್ಕಾರಕ್ಕೆ ಸಲ್ಲತಕ್ಕ ತೆರಿಗೆ ವಂಚನೆ ಆಗಿರೋದು ವರದಿಯಲ್ಲಿ ಸೂಚಿಸಿದ್ದಾರೆ.
ಮಂಗಳೂರು ಮತ್ತು ಮಲ್ಪೆ ಶಾಖೆಗಳಲ್ಲಿ ಡೀಸೆಲ್ ಬೋಟು ಗಳ ಮಾಲೀಕರಿಂದ ಡೀಸೆಲ್ ಸಾಲ ಕರಾಪತ್ರ,ಬಾಕಿ ದೃಢೀಕರಣ ಪತ್ರ ಪಡೆಯದೇ ಅದೇ ಬೋಟುಗಳಿಗೆ ಪದೇ ಪದೇ ಡೀಸೆಲ್ ಸಾಲ ನೀಡಿರುವುದನ್ನು ವರದಿಯಲ್ಲಿ ಗಂಭೀರವಾಗಿ ಉಲ್ಲೇಖಿಸಿರುತ್ತಾರೆ,
ಕರ್ನಾಟಕ ಸರ್ಕಾರದಿಂದ ಮಹಿಳಾ ಮೀನುಗಾರರಿಗೆ ವಿತರಿಸಲು ನೀಡಿದ ಮತ್ಸ್ಯ ಮಹಿಳಾ ಮೀನುಗಾರರ ಸ್ವಾವಲಂಬನ ನಿಧಿಯನ್ನು ಸರಕಾರಕ್ಕೆ ಮರುಪಾವತಿಸದೆ ಸಂಸ್ಥೆಯಲ್ಲಿ ಇರಿಸಿಕೊಂಡು ದುರ್ಬಳಕೆ ಮಾಡಿರುವುದು ಕೂಡ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಉಲ್ಲೇಖಿಸಿದ್ದಾರೆ, ಹಂಗಾರಕಟ್ಟೆ ಶಾಖೆಯ ಶಾಖಾಧಿಕಾರಿ ಆಗಿದ್ದ ದಿವಾಕರ್ ಎನ್ನುವ ಸಿಬ್ಬಂದಿಯಿಂದ 2022 -23 ಲೆಕ್ಕ ಪರಿಶೋಧನಾ ವರದಿಯಲ್ಲಿ ಪತ್ತೆ ಹಚ್ಚಿದ ಹಣದ ದುರುಪಯೋಗದ ಮೊತ್ತ ರೂಪಾಯಿ 1,89,00,000/-ರಷ್ಟು ಮೊತ್ತದ ಬಗ್ಗೆ ಸದ್ರಿ ಸಿಬ್ಬಂದಿಯು ಒಪ್ಪಿಕೊಂಡಿರುವುದು ಇವರ ದುರಡಳಿತಕ್ಕೆ ಸಾಕ್ಷಿಯಾಗಿದೆ,
ಅಲ್ಲದೆ ಇಂತಹ ಸಿಬ್ಬಂದಿಯ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಕೆಲಸದಲ್ಲಿ ಮುಂದುವರೆಯಲು ಬಿಟ್ಟು 2023- 24ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿಯೂ ಕೂಡ ಸದರಿ ಸಿಬ್ಬಂದಿಯಿಂದ ಮಲ್ಪೆ ಶಾಖೆಯಲ್ಲಿ ಹಣದ ದುರುಪಯೋಗ ಮುಂದುವರಿದು ರೂಪಾಯಿ 3,38,78,058/-ರಷ್ಟು ಮೊತ್ತಕ್ಕೆ ಏರಿಕೆಯಾಗಿದ್ದು ಉಲ್ಲೇಖಿಸಿದ್ದಾರೆ. ಅಲ್ಲದೆ ಸದ್ರಿ ಹಣದ ದುರುಪಯೋಗದ ವಿಚಾರವನ್ನು 2023- 24ರ ಸಾಲಿನ ಮಹಾಸಭೆ ನೋಟಿಸಿನಲ್ಲಿ ಮುದ್ರಿಸಲಾಗಿದೆ.
ಇಷ್ಟು ಮೊತ್ತದ ಅವ್ಯವಹಾರ ಒಬ್ಬ ಸಿಬ್ಬಂದಿಯಿಂದ ಯಾರ ಬೆಂಬಲವಿಲ್ಲದೆ ಮಾಡಲು ಸುಲಭ ಸಾಧ್ಯವೇ ಎನ್ನುವ ಅಂಶ ಗಂಭೀರವಾಗಿರುತ್ತದೆ,ಅಲ್ಲದೆ 2023 -24ರ ಲೆಕ್ಕ ಪರಿಶೋಧನಾ ವರದಲ್ಲಿಯೂ ಕೂಡ ಸಾಕಷ್ಟು ಅವ್ಯವಹಾರದ ಅಂಶಗಳಲ್ಲಿ ಉಲ್ಲೇಖಿಸಿರುವುದು ತಿಳಿದುಬಂದಿರುತ್ತದೆ. ಆದ್ದರಿಂದ ಈ ಮೇಲಿನ ಎಲ್ಲಾ ಗಂಭೀರ ಅಂಶಗಳನ್ನು ಪರಿಗಣಿಸಿ,ಬೇಕು
ಫೆಡರೇಶನ್ ನ ವ್ಯವಹಾರಗಳನ್ನು ಸಂಪೂರ್ಣವಾಗಿ ತನಿಖೆಗೆ ಒಳಪಡಿಸಿ ಕಾನೂನುಗಳ ಉಲ್ಲಂಘಿಸಿ ಅಧಿಕಾರವನ್ನು ದುರ್ಬಳಕೆ ಮಾಡಿ ಸಂಸ್ಥೆಯ ನಷ್ಟಕ್ಕೆ ಕಾರಣರಾಗಿರುವ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ವಿರುದ್ಧ ತನಿಖೆ ಮಾಡಿ
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಂಸ್ಥೆಗೆ ಆದ ಅಪಾರ ನಷ್ಟವನ್ನು ಸಂಬಂಧಪಟ್ಟವರಿಂದಲೇ ವಸೂಲಿ ಮಾಡಿ ಮೀನುಗಾರರ ಈ ಸಂಸ್ಥೆಯನ್ನು ಉಳಿಸಿ ಬೆಳೆಸುವರೇ ಸರಕಾರದ ಗಮನಕ್ಕೆ ತಂದು ನ್ಯಾಯ ಕೊಡಿಸಬೇಕಾಗಿ ಈ ಮೂಲಕ ನಾನು ವಿನಂತಿಸಿಕೊಳ್ಳುತ್ತೇನೆ.ಎಂದು ದೂರುದಾರ ಕೋಟ ನಾಗೇಂದ್ರ ಪುತ್ರನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.