thekarnatakatoday.com
Editor's Picks

ಕಲ್ಬುರ್ಗಿ ಜೈಲಿನಲ್ಲಿರುವ ನಟೋರಿಯಸ್ ಕೈದಿಗಳಿಗೆ ಮತ್ತು ಭ್ರಷ್ಟ ಸಿಬ್ಬಂದಿಗಳಿಗೆ ಸಿಂಹಸ್ವಪ್ನರಾದ ದಕ್ಷ ಅಧಿಕಾರಿ ಗುಲ್ಬರ್ಗ ಜೈಲುಅಧೀಕ್ಷಕಿ ಅನಿತಾ ಆರ್

ಕಳೆದ ಹಲವಾರು ದಿನಗಳಿಂದ ಸುದ್ದಿಯಲ್ಲಿರುವ ಗುಲ್ಬರ್ಗ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ನೂತನವಾಗಿ ಕಾರಾಗೃಹ ಅದೀಕ್ಷಕಿಯಾಗಿ ಅಧಿಕಾರ ಸ್ವೀಕರಿಸಿದ ಅನಿತಾ ಆರ್ ಅವರು ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆಗಳನ್ನು ನಿಲ್ಲಿಸಿ

ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಂಡ ಪರಿಣಾಮ ಜೈಲಿನಲ್ಲಿದ್ದ ಹಲವು ಭ್ರಷ್ಟ ಅಧಿಕಾರಿಗಳು ಹಾಗೂ ನಟೋರಿಯಸ್ ಕೈದಿಗಳು ಸೇರಿಕೊಂಡು ಇವರನ್ನು ಬ್ಲಾಕ್ ಮೇಲ್ ಮಾಡುವ ಷಡ್ಯಂತರ ಕೂಡ ನಡೆದಿತ್ತು

ಇದರ ವಿರುದ್ಧ ದಕ್ಷ ಪ್ರಾಮಾಣಿಕ ಅಧಿಕಾರಿ ಅನಿತಾ ರವರಿಗೆ ಬೆಂಬಲವಾಗಿ ಕಲ್ಬುರ್ಗಿಯ ಹಿಂದೂ ಜಾಗೃತಿ ಸೇನೆ ಹಾಗೂ ಇತರ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿ ಜೈಲಿನಲ್ಲಿ ಹಲವಾರು ವರ್ಷಗಳಿಂದ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿರುವ

ಸ್ಥಳೀಯ ಸಿಬ್ಬಂದಿಗಳು ಇಂಥ ಅಕ್ರಮ ಚಟುವಟಿಕೆಗಳಿಗೆ ಕಾರಣಿಕರ್ತರಾಗಿರುವುದನ್ನು ಪರಿಗಣಿಸಿ ಅಂತವರನ್ನು ಇಲ್ಲಿಂದ ಬೇರೆ ಜೈಲುಗಳಿಗೆ ವರ್ಗಾವಣೆ ನಡೆಸುವಂತೆ ಜೈಲ್ ನಲ್ಲಿರುವ ನಟೋರಿಯಸ್ ಕೈದಿಗಳನ್ನ ಬೇರೆ ಜೈಲುಗಳಿಗೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದ್ದರು

ಅದರಂತೆ ಈಗಾಗಲೇ ಈ ಷಡ್ಯಂತರ ನಡೆಸಿದ ಕೆಲವು ನಟೋರಿಯಸ್ ಖೈದಿಗಳನ್ನು ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿದೆ. ಅದಾಗಿಯೂ ಕೂಡ ಪೊಲೀಸ ಇಲಾಖೆ ಅಥವಾ ಬಂದಿಖಾನೆ ಇಲಾಖೆಗಳಲ್ಲಿ ಮೂರು ವರ್ಷಗಳಂತೆ ಹೆಚ್ಚು ಯಾರು ಕೂಡ ಒಂದೇ ಕಡೆಯಲ್ಲಿ ಸೇವೆ ಸಲ್ಲಿಸುವುದನ್ನು ಬದಲಾಯಿಸಿ ಬೇರೆ ಕಡೆ ವರ್ಗಾವಣೆಯಾಗುವಂತೆ ಸರಕಾರ ಆದೇಶ ಹೊರಡಿಸಿತ್ತು

ಆದರೆ ಗುಲ್ಬರ್ಗ ಜೈಲಿನಲ್ಲಿ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ವ್ಯಕ್ತಿಗಳು ಇಲ್ಲಿನ ಸ್ಥಳೀಯರಾಗಿದ್ದು ಕಳೆದ 10 ವರ್ಷಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತ ಸ್ಥಳೀಯ ಪ್ರಭಾವ ಬಳಸಿಕೊಂಡು ಜೈಲಿನಲ್ಲಿರುವ ಕೈದಿಗಳಿಗೆ ಬೇಕು ಬೇಡವಾದ ಎಲ್ಲಾ ಸೌಲಭ್ಯಗಳನ್ನು ನೀಡುತ್ತಾ ಹಣ ಮಾಡಿಕೊಂಡಿರುವ ಇವರು ಎಲ್ಲಿಯವರೆಗೆ ಪ್ರಭಾವಿಗಳೆಂದರೆ

ದಕ್ಷ ಅಧಿಕಾರಿಗಳ ವಿರುದ್ಧ ಜೈಲ್ ನಲ್ಲಿರುವ ಕೈದಿಗಳ ಮುಖಾಂತರ ಪ್ರತಿಭಟನೆ ನಡೆಸಿ ದಕ್ಷ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿಸುವಷ್ಟು ಪ್ರಭಾವಿಗಳಾಗಿದ್ದಾರೆ. ಆದ್ದರಿಂದ ಹಲವಾರು ವರ್ಷಗಳಿಂದ ಇದೇ ಜೈಲಿನಲ್ಲಿ ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳೀಯರನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related posts

ಭಯೋತ್ಪಾದಕರಿಗೆ ಆಶ್ರಯ ನೀಡುವವರ ಮನೆಗಳನ್ನು ನೆಲಸಮಗೊಳಿಸಲಾಗುವುದು ಲೆಫ್ಟಿನೆಂಟ್ ಗವರ್ನರ್ ಮನೋಜ್  ಸಿನ್ಹಾ

The Karnataka Today

ಮಹಿಳಾ ವಕೀಲರು ಬುರ್ಖಾ ಧರಿಸಿ ನ್ಯಾಯಾಲಯದ ಕಲಾಪಗಳಲ್ಲಿ ವಾದ ಮಂಡಿಸುವಂತಿಲ್ಲ ಎಂದು ಅದೇಶಿಸಿದ ಜಮ್ಮು- ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್

The Karnataka Today

ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ಬೇಕಾದ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

The Karnataka Today

Leave a Comment