ವಕ್ಫ್ ನಿಂದ ನಿಮ್ಮ ಆಸ್ತಿಬೇಕಾದರೆ ಹೋರಾಟ ಮಾಡಿ ಎಲ್ಲಾ ಬಸವಣ್ಣನವರರೀತಿಯಲ್ಲಿಹೊಳೆಗೆ ಹಾರಿ ಸಾಯಿರಿ ಯತ್ನಾಳ್ ಹೇಳಿಕೆಗೆ ಆಕ್ರೋಶ

1
ವಕ್ಫ್ ನಿಂದ ನಿಮ್ಮ ಆಸ್ತಿ ರಕ್ಷಣೆ ಮಾಡಿಕೊಳ್ಳಬೇಕಾದರೆ, ನೀವು ಮನೆಯಿಂದ ಹೊರ ಬಂದು ಹೋರಾಟ ಮಾಡಬೇಕಾಗುತ್ತದೆ. ಜಮೀನು ಹೋದರೂ ನೀವು ಹೊರಗ ಬರಲ್ಲ ಎಂದರೆ ಬಸವಣ್ಣನವರ ಹಾಗೆ ತುಂಬಿದ ಹೊಳೆಗೆ ಹಾರಿ ಸಾಯಬೇಕು. ಇಲ್ಲವಾದರೆ ಗಡ್ಡ ಬಿಟ್ಟು ಮುಸ್ಲಿಂ ಆಗಿ. ಬಸನಗೌಡ ಪಾಟೀಲ ಯತ್ನಾಳ್


ಬಸವಣ್ಣನವರಂತೆ ಹೊಳೆಗೆ ಹಾರಿ’ ಎಂದು ಭಾಷಣ ಮಾಡಿರುವ ಬಿಜೆಪಿ ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ ಯತ್ನಾಳ್ ಅವರ ಹೇಳಿಕೆಗೆ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಮವಾರ ಬೀದರಿನಲ್ಲಿ ವಕ್ಫ್ ಹೋರಾಟಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಮಾತನಾಡಿದ್ದ ಯತ್ನಾಳ್ ಅವರು, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಕ್ಫ್ ನಿಂದ ನಿಮ್ಮ ಆಸ್ತಿ ರಕ್ಷಣೆ ಮಾಡಿಕೊಳ್ಳಬೇಕಾದರೆ, ನೀವು ಮನೆಯಿಂದ ಹೊರ ಬಂದು ಹೋರಾಟ ಮಾಡಬೇಕಾಗುತ್ತದೆ. ಜಮೀನು ಹೋದರೂ ನೀವು ಹೊರಗ ಬರಲ್ಲ ಎಂದರೆ ಬಸವಣ್ಣನವರ ಹಾಗೆ ತುಂಬಿದ ಹೊಳೆಗೆ ಹಾರಿ ಸಾಯಬೇಕು. ಇಲ್ಲವಾದರೆ ಗಡ್ಡ ಬಿಟ್ಟು ಮುಸ್ಲಿಂ ಆಗಿ ಎಂದು ಕೈಯಿಂದ ಸನ್ಹೆ ಮಾಡಿದರು.

ಈ ಹೇಳಿಕೆ ಇದೀ ವ್ಯಾಪಕ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ. ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಅವರು ಯತ್ನಾಳ್ ಹೇಳಿಕೆ ಆಘಾತ ತಂದಿದೆ ಎಂದು ಹೇಳಿದ್ದಾರೆ.

ಯತ್ನಾಳ್ ಅವರು ಸಂದರ್ಭ, ಸಮಯ ಮತ್ತು ಸ್ಥಳದ ಎಲ್ಲಾ ಜ್ಞಾನವನ್ನು ಕಳೆದುಕೊಂಡಿದ್ದಾರೆಂದು ಕಿಡಿಕಾರಿದ್ದಾರೆ. ಯತ್ನಾಳ್ ಅವರ ಹೇಳಿಕೆಯು ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರನ್ನು ಕೆರಳಿಸುವ ಉದ್ದೇಶದಿಂದ ಕೂಡಿದ್ದು, ಬಸವಣ್ಣನವರ ಹೆಸರನ್ನು ಹೇಳುವ ಮೂಲಕ ಎಲ್ಲೆ ಮೀರಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಲಿಂಗಾಯತ ವಿದ್ವಾಂಸರು ಕೂಡ ಯತ್ನಾಳ್ ಹೇಳಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯತ್ನಾಳ್ ಹೇಳಿಕೆ ಬಸವಣ್ಣನವರ ಮೇಲಿನ ನೇರ ದಾಳಿ ಎಂದು ಪ್ರಾಧ್ಯಾಪಕ ಪಂಚಾಕ್ಷರಿ ಹಳೇಬೀಡು ಹೇಳಿದ್ದಾರೆ

. ಕೆಲವರು ಅಜ್ಞಾನದಿಂದ, ಇನ್ನು ಕೆಲವರು ದುರುದ್ದೇಶದಿಂದ ಮಾತನಾಡುತ್ತಿದ್ದಾರೆ, ಯತ್ನಾಳ್ ಅವರು ಬಸವಣ್ಣನವರನ್ನು ಅವಮಾನಿಸಲು, ಲಿಂಗಾಯತ ನಂಬಿಕೆಯನ್ನು ಹಾಳು ಮಾಡಲು ಮತ್ತು ಬಸವ ತತ್ವದ ಪ್ರಬಲ ಸತ್ಯಗಳನ್ನು ಅಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಯಾರೋ ಅಟ್ಟಿಸಿಕೊಂಡು ಬಂದಾಗ ಬಸವಣ್ಣನವರು ಹೇಡಿಯಂತೆ ಹೊಳೆಗೆ ಹಾರಿ ಸತ್ತರು ಎನ್ನುವ ಅರ್ಥ ಈ ಹೇಳಿಕೆಯಲ್ಲಿದೆ. ಯತ್ನಾಳರು ಈ ರೀತಿ ಹೇಳಲು ವಚನಗಳಲ್ಲಿ ಯಾವುದೇ ಸಾಕ್ಷ್ಯಾಧಾರ ಇಲ್ಲ. ವಚನಗಳನ್ನು ಸರಿಯಾಗಿ ಅಧ್ಯಯನ ಮಾಡಿರುವವರಿಗೆ ಬಸವಣ್ಣನವರ ಅಂತ್ಯ ಹೇಗಾಯಿತು, ಅವರ ಕೊನೆ ಘಳಿಗೆ ಹೇಗಿತ್ತು ಅನ್ನುವುದರಲ್ಲಿ ಸ್ಪಷ್ಟತೆ ಇದೆ.

ಆದರೆ ಯತ್ನಾಳ್ ಈ ಅರಿವಿಲ್ಲದೆ ಅಪಚಾರ ಮಾಡಿದ್ದಾರೆ. ಕೆಲವರು ಅಜ್ಞಾನದಿಂದ ಈ ರೀತಿ ಮಾತಾಡುತ್ತಾರೆ. ಕೆಲವು ವೈದಿಕಶಾಹಿ ಮನಸ್ಥಿತಿಯವರು ಸತ್ಯ ಗೊತ್ತಿದ್ದೂ ಬೇಕಂತಲೇ ಈ ರೀತಿ ಮಾತನಾಡುತ್ತಾರೆ. ಅವರ ಉದ್ಧೇಶ ಬಸವಣ್ಣನವರನ್ನು ತುಳಿಯುವುದು, ಲಿಂಗಾಯತ ಧರ್ಮ ಮತ್ತು ಬಸವತತ್ವ ಮೇಲೇಳದಂತೆ ನೋಡಿಕೊಳ್ಳುವುದು.


ಇಂತವರು ಲಿಂಗಾಯತ ಸಂಪ್ರದಾಯದಲ್ಲಿ ಹುಟ್ಟಿರುವ ಯತ್ನಾಳರನ್ನು ಛೂ ಬಿಟ್ಟು ನಮ್ಮ ಕೈಯಲ್ಲೇ ನಮ್ಮ ಗುರುವನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಬೇರೆಯವರು ಹೊರಗಡೆ ನಿಂತು ಮಗನ ಕೈಯಲ್ಲೇ ಅಪ್ಪನನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಮಾತುಗಳಿಂದ ಬಸವಣ್ಣನವರ ಅವಹೇಳನ ಆಗುವುದಿಲ್ಲ.

ಅವರ ಸಾಧನೆ ಇಡೀ ಜಗತ್ತಿಗೆ ಗೊತ್ತಿದೆ. ಇಲ್ಲಿ ನಡೆದಿರುವುದು ಯತ್ನಾಳರ ಮೂರ್ಖತನದ ಪ್ರದರ್ಶನ. ಯತ್ನಾಳ ಪ್ರಬುದ್ಧತೆ ಏನು ಎಂದು ಎಲ್ಲರಿಗೂ ಗೊತ್ತಿಯುವ ವಿಷಯ. ತನ್ನ ಮುಖಕ್ಕೆ ತಾನೇ ಮಸಿ ಬಳೆದುಕೊಂಡಿದ್ದಾರೆ. ಇದರಿಂದ ಬಸವಣ್ಣನವರಿಗೆ ಏನೂ ಆಗದಿದ್ದರೂ ಸಾಮಾಜಿಕ ಕಳಕಳಿ ಇರುವ ಪ್ರತಿಯೊಬ್ಬರೂ ಇದು ಖಂಡಿಸಬೇಕಾಗಿರುವ ವಿಷಯ ಎಂದು ತಿಳಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಧರ್ಮಸ್ಥಳ ಪ್ರಕರಣ: ಮೃತದೇಹಗಳ ಅಸ್ತಿಪಂಜರ ಪತ್ತೆ ಕಾರ್ಯಾಚರಣೆಗೆ ಜಿಪಿಆರ್ ಬಳಕೆಗೆ ಆಗ್ರಹ

ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳ ಪತ್ತೆಗೆ ಜಿಪಿಆರ್ ಬಳಕೆ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ....

ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ  ಜೈಲು ಶಿಕ್ಷೆ

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ...

ಧರ್ಮಸ್ಥಳ ಅಪರಿಚಿತ ಸಾವಿನ ಪ್ರಕರಣದ ಯುಡಿಆರ್ ಮಾಹಿತಿ ಡಿಲೀಟ್ ಬೆಳ್ತಂಗಡಿ ಪೊಲೀಸರ ಮೇಲೆ ಸಂಶಯದ ನೆರಳು

“ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಳಿಸಿರುವಂತೆಯೇ 2000 ದಿಂದ...

ಎಮ್ಮೆ ಕಟ್ಟುತ್ತಿದ್ದ ಶೆಡ್ ದ್ವಂಸ ರೊಚ್ಚಿಗೆದ್ದ ರೈತ ದಂಪತಿ; ಕಾಂಗ್ರೆಸ್ ಶಾಸಕರ ಕಚೇರಿಯಲ್ಲಿ ಎಮ್ಮೆ ಕಟ್ಟಿಹಾಕಿ ಆಕ್ರೋಶ

ತೆಲಂಗಾಣ: ಜಾನುವಾರಗಳ ಶೆಡ್ ಧ್ವಂಸಕ್ಕೆ ಶಾಸಕರೇ ಕಾರಣ ಎಂದು ಆರೋಪಿಸಿದ ರೈತ ದಂಪತಿ, ಕಾಂಗ್ರೆಸ್ ಶಾಸಕ...