thekarnatakatoday.com
Politics

ದೆಹಲಿ ವಿಧಾನಸಭಾ ಚುನಾವಣೆ ಮುನ್ನ ಅಮ್ ಆದ್ಮಿ ನಾಯಕ ಕೈಲಾಶ್ ಗೆಹ್ಲೋಟ್ ಬಿ ಜೆ ಪಿ ಸೇರ್ಪಡೆ

“ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದ್ದು, ಮಾಜಿ ಸಚಿವ ಮತ್ತು ಆಪ್ ನಾಯಕ ಕೈಲಾಶ್ ಗೆಹ್ಲೋಟ್ ಅವರು ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಪಕ್ಷದ ನಿರ್ದೇಶನ ಮತ್ತು ಆಂತರಿಕ ಸವಾಲುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಭಾನುವಾರ ಎಎಪಿಗೆ ರಾಜೀನಾಮೆ ನೀಡಿದ್ದ ಗೆಹ್ಲೋಟ್, ಇಂದು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಎಎಪಿಗೆ ರಾಜೀನಾಮೆ ನೀಡಿದ ಕುರಿತು ಮಾತನಾಡಿದ ಕೈಲಾಶ್ ಗೆಹ್ಲೋಟ್, ಇದು ನನಗೆ ಸುಲಭದ ಹೆಜ್ಜೆಯಲ್ಲ. ನಾನು ಅಣ್ಣಾಜಿಯವರ ಕಾಲದಿಂದಲೂ ಎಎಪಿಯೊಂದಿಗೆ ಸಂಬಂಧ ಹೊಂದಿದ್ದೇನೆ ಮತ್ತು ದೆಹಲಿಯ ಜನರಿಗಾಗಿ ನಿರಂತರವಾಗಿ ಕೆಲಸ ಮಾಡಿದ್ದೇನೆ.

ಒತ್ತಡದಲ್ಲಿ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಭಾವಿಸುವ ಪ್ರತಿಯೊಬ್ಬರಿಗೂ ನಾನು ಹೇಳಲು ಬಯಸುತ್ತೇನೆ. ನಾನು ಯಾವತ್ತೂ ಒತ್ತಡದಲ್ಲಿ ಏನನ್ನೂ ಮಾಡಿಲ್ಲ.

ನಾನು ಎಎಪಿಗೆ ಸೇರಲು ನನ್ನ ವಕೀಲ ವೃತ್ತಿಯನ್ನು ತೊರೆದಿದ್ದೇನೆ ಮತ್ತು ನಮ್ಮ ಏಕೈಕ ಉದ್ದೇಶ ದೆಹಲಿಯ ಜನರಿಗೆ ಸೇವೆ ಸಲ್ಲಿಸುವುದಾಗಿದೆ ಎಂದರು. ಅರವಿಂದ್ ಕೇಜ್ರಿವಾಲ್ ಆಧುನಿಕ ಸ್ವಾತಂತ್ರ್ಯ ಹೋರಾಟಗಾರ: ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್

ಆ ಮೌಲ್ಯಗಳಿಗೆ ಧಕ್ಕೆಯಾಗುತ್ತಿರುವುದನ್ನು ಕಂಡು ಅತೀವ ನೋವಿನಿಂದ ನಾನು ಪಕ್ಷ ತೊರೆದಿದ್ದೇನೆ’ ಗೆಹ್ಲೋಟ್ ಹೇಳಿದರು. “ದೆಹಲಿ ಸರ್ಕಾರವು ಪ್ರತಿಯೊಂದು ವಿಷಯದಲ್ಲೂ ನಿರಂತರವಾಗಿ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷದಲ್ಲಿ ತೊಡಗಿದರೆ, ದೆಹಲಿಯ ಅಭಿವೃದ್ಧಿ ನಡೆಯಲು ಸಾಧ್ಯವಿಲ್ಲ” ಎಂದು ಗೆಹ್ಲೋಟ್ ಹೇಳಿದರು.

“ದಿಲ್ಲಿಯ ಅಭಿವೃದ್ಧಿಯು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಮಾತ್ರ ಆಗಬಹುದು ಎಂದು ನಾನು ದೃಢವಾಗಿ ನಂಬುತ್ತೇನೆ. ಅದಕ್ಕಾಗಿಯೇ ನಾನು ಬಿಜೆಪಿಗೆ ಸೇರಿದ್ದೇನೆ.

ನಾನು ಪ್ರಧಾನಿಯವರ ದೂರದೃಷ್ಟಿ ಮತ್ತು ನೀತಿಗಳಿಂದ ಪ್ರೇರಿತನಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ” ಎಂದು ಅವರು ತಿಳಿಸಿದರು.

ಏತನ್ಮಧ್ಯೆ, ದೆಹಲಿ ಮಾಜಿ ಸಚಿವ ಕೈಲಾಶ್ ಗಹ್ಲೋಟ್ ಅವರ ರಾಜೀನಾಮೆ ಮತ್ತು ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಕ್ಷ(ಎಎಪಿ)ದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು, ಗಹ್ಲೋಟ್ ಅವರು ಯಾವುದೇ ಪಕ್ಷ ಸೇರಲು ಸ್ವತಂತ್ರರು. ಅವರು ಎಲ್ಲಿ ಬೇಕಾದರೂ ಹೋಗಬಹುದು ಎಂದರು.

Related posts

ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಬಿಜೆಪಿ ಸಂಸದನನ್ನು ತಳ್ಳಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಆರೋಪ

The Karnataka Today

ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ಮಹಾಯತಿಯಲ್ಲಿ ಅಸಮಾಧಾನ ಸ್ಫೋಟ ಶಿವಸೇನೆ ಶಾಸಕ ರಾಜೀನಾಮೆ??

The Karnataka Today

ಶಾಸಕಯಶ್ ಪಾಲ್ ಸುವರ್ಣ ಅಧ್ಯಕ್ಷತೆಯ ಬ್ಯಾಂಕ್ ನಿಂದ ಅವ್ಯವಹಾರ ಸರಕಾರದಿಂದ ಉನ್ನತ ಮಟ್ಟದ ತನಿಖೆಗೆ ಅಗ್ರಹ

The Karnataka Today

Leave a Comment