ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ನ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಡೆಯುತ್ತಿರುವ ಹೋರಾಟಗಳ ನಡುವೆ
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕೇವಲ ಮಾಧ್ಯಮಗಳ ಮುಂದೆ ಯಾವುದೇ ತನಿಖೆಗೆ ಸಿದ್ದ ಎಂದು ಹೇಳಿಕೊಂಡು ನ್ಯಾಯಾಲಯದಿಂದ ತರುವುದು ಹಾಸ್ಯಸ್ಪದವಾಗಿದೆ ಎಂದು ಮಾಜಿ ಶಾಸಕ ರಘುಪತಿ ಯಶ್ ಪಾಲ್ ಸುವರ್ಣ ವಿರುದ್ಧ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ . ಈ ಬಗ್ಗೆ ಮಾಜಿ ಶಾಸಕ ರಘುಪತಿ ಭಟ್ ಶಾಸಕ ಯಶ್ ಪಾಲ್ ಸುವರ್ಣರಿಗೆ ಪತ್ರ ಬರೆದು ಪ್ರಶ್ನೆ ಮಾಡಿದ್ದಾರೆ
09-11-2024ರ ತಮ್ಮ ಪತ್ರಿಕಾ ಗೋಷ್ಠಿಯಲ್ಲಿ ತಾವೇ ಉಲ್ಲೇಖಿಸಿರುವಂತೆ ಸಿ.ಬಿ.ಐ., ಇ.ಡಿ. ಇನ್ನಿತರ ಯಾವುದೇ ತನಿಖೆ ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿರುವುದು ಪ್ರಶಂಸಾರ್ಹವಾಗಿರುತ್ತದೆ.
ಆದರೆ ಈ ತನಿಖೆ ಗಳನ್ನು ನಡೆಸುವ ಮುಂಚಿತವಾಗಿ ತಮ್ಮದೇ ವ್ಯಾಪ್ತಿಯಲ್ಲಿ ಉಡುಪಿ ಹಾಗೂ ಇನ್ನಿತರ ಪೊಲೀಸ್ ಠಾಣೆಗಳಲ್ಲಿ ಸಂತ್ರಸ್ತರು ಇಗಾಗಲೇ ನೀಡಿರುವ ದೂರದಾರರುಗಳಿಗೆ ಆಗಿರುವ ಎಫ್.ಐ.ಆರ್. ಮೇಲೆ ತಾವು ಮಾನ್ಯ ಉಚ್ಚನ್ಯಾಯಲಯದಿಂದ ತಡೆಯಾಜ್ಞೆ ತಂದಿದ್ದು, ಸದ್ರಿ ತಡೆಯಾಜ್ಞೆಯನ್ನು ತಾವು ತೆರವುಗೊಳಿಸಿ.
ತನಿಖೆಗೆ ಸ್ಪಂದಿಸಿ ದೂರುದಾರರಸಾಲದ ಅರ್ಜಿಗಳಲ್ಲಿ ಹಾಗೂ ಸಾಲದ ದಾಖಲಾತಿಗಳಲ್ಲಿ ಸಂತ್ರಸ್ತರು ತಮ್ಮ ಸಹಿ ಅಲ್ಲ ಎಂದು ಹೇಳುತ್ತಿರುವ ಕಾರಣ ಸದ್ರಿ ಸಹಿಗಳ ಸತ್ಯಸತ್ಯಾತೆಯನ್ನು ತಿಳಿಯಲು ಪೊಲೀಸ್ ಇಲಾಖೆಯ ಮೂಲಕವೇ ಫಾರೆನ್ಸಿಕ್ (ವಿಧಿ ವಿಜ್ಞಾನ ಪ್ರಯೋಗಾಲಯ) ವಿಚಾರಣೆಗೆ ಕಳುಹಿಸಲು ಅನುವುಮಾಡಿಕೊಡಬೇಕು.
ಆದ ಕಾರಣ ಮಾನ್ಯ ಉಚ್ಚನ್ಯಾಯಲಯದಿಂದ ತಡೆಯಾಜ್ಞೆಯನ್ನು ಹಿಂಪಡೆದು ನ್ಯಾಯಯುತವಾದ ತನಿಖೆ ನಡೆದು ಸತ್ಯಸತ್ಯಾತೆಯು ಹೊರಬರಲೆಂದು ಆಪೇಕ್ಷಿಸುತ್ತೇನೆ.
ನನ್ನ ಹೋರಾಟ, ಅನ್ಯಾವಾಗಿದೆಯೆಂದು ತಮ್ಮ ಅಳಲು ತೋಡಿಕೊಂಡು ಸಹಾಯ ನಿರೀಕ್ಷಿಸಿದ ಸಂತ್ರಸ್ತರ ಹಿತ ಕಾಪಾಡುವುದೇ ಹೊರತು, ತಮ್ಮ ಅಥವಾ ಬ್ಯಾಂಕಿನ ವಿರುದ್ಧ ಆಗಿರುವುದಿಲ್ಲ.
ಇದರಲ್ಲಿ ನನ್ನ ಯಾವುದೇ ವಯಕ್ತಿಕ ಹಿತಾಸಕ್ತಿಯಿರುವುದಿಲ್ಲ ಅನ್ಯಾಯವಾಗಿದೆ ಎಂದು ನನ್ನ ಬಳಿ ಬಂಧಿರುವ ಸಾಲಗಾರ ಸಂತ್ರಸ್ತರ ಪರ ಕಾನೂನು ಹೋರಾಟ ಮಾಡುವರೇ, ನಾನು ಇನ್ನು ಮುಂದೆ ಸಹಾಯ ಮಾಡಲು ಬದ್ಧನಾಗಿರುವೆ ಎಂದು ಸ್ಪಷ್ಟಿಕರಿಸುತ್ತೇನೆ ಈ ಬಗ್ಗೆ