“ಮತದಾನದ ಮುನ್ನಾದಿನ ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರತಿ ಚುನಾವಣೆಗೂ ಮುನ್ನ ಗೃಹ ಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ 2,000 ರೂ. ಜಮಾ ಮಾಡುತ್ತಿರುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದನ್ನು ಕೂಡಲೇ ನಿಲ್ಲಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಚುನಾವಣೆ ಪಾರದರ್ಶಕವಾಗಿರಬೇಕು. ರಾಜ್ಯ ಸರ್ಕಾರ ಪ್ರತೀ ಬಾರಿಯೂ ಚುನಾವಣೆಗೆ ಮುನ್ನ ಸರ್ಕಾರದ ಹಣದಲ್ಲಿ ತಮ್ಮ ರಾಜಕೀಯ ರೊಟ್ಟಿ ಸುಟ್ಟುಕೊಳ್ಳುವ ಕೆಲಸ ಮಾಡುತ್ತಿದೆ. ಇದು ಅತ್ಯಂತ ಖಂಡನೀಯ.
ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ. ಹಾವೇರಿ ಜಿಲ್ಲಾಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಚುನಾವಣೆಗೆ ಸರ್ಕಾರ ಹಣ ಬಳಕೆಯಾಗುತ್ತಿರುವುದು ಸ್ಪಷ್ಟ. ಸಿಎಂ ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವ, ಸಂವಿಧಾನದ ಬಹಳ ಬಗ್ಗೆ ಮಾತನಾಡುತ್ತಾರೆ.
ಇಡೀ ಸರಕಾರವೇ ಸರಕಾರಿ ದುಡ್ಡಿನಲ್ಲಿ ರಾಜಕೀಯ ಭ್ರಷ್ಟಾಚಾರ ಮಾಡುತ್ತಿದೆ. ಶಿಗ್ಗಾಂವಿ ಸವಣೂರು ಕ್ಷೇತ್ರದ ಜನರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ನಿರಂತರವಾಗಿ ನಡೆಯುತ್ತಿರುವ ಈ ಕ್ಷೇತ್ರದ ಅಭಿವೃದ್ಧಿಯನ್ನು ನೋಡಿ ಎಲ್ಲ ವರ್ಗದ ಜನರು ಈಗಾಗಲೇ ಏನು ತೀರ್ಮಾನ ಮಾಡಿದ್ದಿರಿ, ಅದನ್ನು ಯಾವುದೇ ಕಾರಣಕ್ಕೂ ಬದಲಾಯಿಸದೇ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.
https://www.kannadaprabha.com/karnataka/2024/Nov/13/bommai-accuses-cong-of-poll-code-violation#:~:text=%E0%B2%AE%E0%B2%A4%E0%B2%A6%E0%B2%BE%E0%B2%A8%E0%B2%A6%20%E0%B2%AE%E0%B3%81%E0%B2%A8%E0%B3%8D%E0%B2%A8%E0%B2%BE%E0%B2%A6%E0%B2%BF%E0%B2%A8%20%E0%B2%97%E0%B3%83%E0%B2%B9%E0%B2%B2%E0%B2%95%E0%B3%8D%E0%B2%B7%E0%B3%8D%E0%B2%AE%E0%B3%80%20%E0%B2%B9%E0%B2%A3%20%E0%B2%AC%E0%B2%BF%E0%B2%A1%E0%B3%81%E0%B2%97%E0%B2%A1%E0%B3%86%20%E0%B2%AE%E0%B2%BE%E0%B2%A1%E0%B3%81%E0%B2%B5,%E0%B2%AE%E0%B2%A4%E0%B2%A6%E0%B2%BE%E0%B2%A8%20%E0%B2%AE%E0%B2%BE%E0%B2%A1%E0%B3%81%E0%B2%B5%E0%B2%82%E0%B2%A4%E0%B3%86%20%E0%B2%AE%E0%B2%A8%E0%B2%B5%E0%B2%BF%20%E0%B2%AE%E0%B2%BE%E0%B2%A1%E0%B2%BF%E0%B2%A6%E0%B3%8D%E0%B2%A6%E0%B2%BE%E0%B2%B0%E0%B3%86%E2%80%8C.
previous post