“ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಅರಿಜೋನಾ ಸೇರಿ ಎಲ್ಲಾ 7 ನಿರ್ಣಾಯಕ ರಾಜ್ಯಗಳಲ್ಲಿ ಸೋಲು ಕಾಣುವಂತೆ ಮಾಡಿ, ಗೆಲುವಿನ ನಗೆ ಬೀರಿದ್ದಾರೆ
. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಪೆನ್ಸಿಲ್ವೇನಿಯಾ, ಮಿಷಿಗನ್, ವಿಸ್ಕಾನ್‌ಸಿನ್, ನೆವಾಡ, ಅರಿಜೋನಾ, ಜಾರ್ಜಿಯಾ ಮತ್ತು ಉತ್ತರ ಕೆರೊಲಿನಾವನ್ನು ನಿರ್ಣಾಯಕ ರಾಜ್ಯಗಳು ಎಂದು ಹೇಳಲಾಗುತ್ತಿತ್ತು. ಈ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ತಮ್ಮ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಟ್ರಂಪ್ ಸೋಲಿಸಿದ್ದು, ಗೆಲುವಿನ ನಗೆ ಬೀರಿದ್ದಾರೆ.
ಟ್ರಂಪ್‌ಗೆ 312 ಎಲೆಕ್ಟರ್‌ಗಳು ಹಾಗೂ ಕಮಲಾ ಅವರಿಗೆ 226 ಎಲೆಕ್ಟರ್‌ಗಳ ಬೆಂಬಲ ದೊರೆತಿದೆ. ಅಧ್ಯಕ್ಷರಾಗಿ ಆಯ್ಕೆಯಾಗಲು ಒಟ್ಟು 538 ಎಲೆಕ್ಟರ್‌ಗಳ ಪೈಕಿ 270 ಎಲೆಕ್ಟರ್‌ಗಳ ಬೆಂಬಲದ ಅಗತ್ಯವಿತ್ತು. ಇದರೊಂದಿಗೆ ರಿಪಬ್ಲಿಕನ್ ಪಕ್ಷವು ಸೆನೆಟ್‌ನಲ್ಲಿ ಮತ್ತೆ ಹಿಡಿತ ಸಾಧಿಸಿದೆ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧತೆ ನಡೆಸಿದೆ.