ಬೆಂಗಳೂರು ಶೃಂಗೇರಿ ಮಠದ ಜ್ಞಾನೋದಯ ಪಿಯು ಕಾಲೇಜ್ ಕಟ್ಟಡ ತೆರವಿಗೆ ಮುಂದಾದ ಬಿಬಿಎಂಪಿ

3

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ನಗರದಲ್ಲಿರುವ ಅನಧಿಕೃತ ಕಟ್ಟಡಗಳ ಕೆಡವಲು ಮುಂದಾಗಿದೆ.

ರಾಜಧಾನಿಯ ಬಹುತೇಕ ಅನಧಿಕೃತ ಕಟ್ಟಡಗಳನ್ನ ತೆರವು ಮಾಡಲು ಸಿದ್ಧತೆ ಆರಂಭಿಸಿರುವ ಬಿಬಿಎಂಪಿಯು, ನಕ್ಷೆ ಅನುಮತಿ ಪಡೆಯದೇ ತಲೆ ಎತ್ತಿರುವ ಶಂಕರಪುರದ ಜ್ಞಾನೋದಯ ಪಿಯು ಕಾಲೇಜಿನ ಕಟ್ಟಡವನ್ನು ತೆರವುಗೊಳಿಸಲು ಮುಂದಾಗಿದೆ. ನಕ್ಷೆ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಈಗಾಗಲೇ ನೋಟಿಸ್ ನೀಡಿರುವ ಪಾಲಿಕೆ, ಇದೇ ನವೆಂಬರ್ 11ರಂದು ಕಟ್ಟಡ ತೆರವುಗೊಳಿಸಲು ಮುಂದಾಗಿದೆ.

ಶಂಕರಪುರಂನಲ್ಲಿರುವ ಶೃಂಗೇರಿ ಮಠಕ್ಕೆ ಸೇರಿದ ಆಸ್ತಿ ಸಂಖ್ಯೆ 160/24 ಬಿಬಿಎಂಪಿ ಬೈಲಾಗಳನ್ನು ಉಲ್ಲಂಘಿಸಿ ಶಾಲಾ ಮತ್ತು ಪಿಯು ಕಾಲೇಜಿಗೆ ಕಟ್ಟಡ ನಿರ್ಮಿಸಿದೆ ಎಂದು ಚಿಕ್ಕಪೇಟೆ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ (ಇಇ) ಆದೇಶದ ಮೂಲಕ ತಿಳಿಸಿದ್ದಾರೆ.

ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 248 (1), 248 (2) ಮತ್ತು 248 (3) ಅಡಿಯಲ್ಲಿ ಪಾಲಿಕೆ ಈಗಾಗಲೇ ನೋಟಿಸ್ ನೀಡಿದ್ದು, ಅನಧಿಕೃತ ಕಟ್ಟಡವನ್ನು ಸ್ವಂತವಾಗಿ ತೆಗೆದುಹಾಕುವಂತೆ ಮಠದ ಆಡಳಿತಕ್ಕೆ ಸೂಚಿಸಲಾಗಿತ್ತು.

ನವೆಂಬರ್ 4ರಂದೇ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ, ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನ.11ರಂದು ಪಾಲಿಕೆ ಕಟ್ಟಡ ಕೆಡವಲು ಬಿಬಿಎಂಪಿ ಮುಂದಾಗಿದೆ ಎಂದು ತಿಳಿದುಬಂದಿದೆ.

ಕಟ್ಟಡ ಕೆಡವಲು ಮುಂದಾಗಿರುವ ಬಿಬಿಎಂಪಿ ಇದೀಗ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಾಡಲು ಹೆಚ್ಚಿನ ಭದ್ರತೆ ನಿಯೋಜಿಸುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದೆ. ಈ ನಡುವೆ ಬಿಬಿಎಂಪಿಯ ಈ ಕ್ರಮಕ್ಕೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಚಾಮರಾಜಪೇಟೆಯ ಸುತ್ತಮುತ್ತ ನೂರಾರು ಅನಧಿಕೃತ ಕಟ್ಟಡಗಳಿವೆ. ಆದರೆ, ಅದನ್ನೆಲ್ಲ ಕೆಡವು ಧೈರ್ಯ ಮಾಡದ ಸರ್ಕಾರ ಹಾಗೂ ಪಾಲಿಕೆ ಮಠದ ಅಧೀನದಲ್ಲಿರುವ ಶಿಕ್ಷಣ ಕೇಂದ್ರದ ಮೇಲೆ ಕಣ್ಣಿಟ್ಟಿರುವುದು ಯಾಕೆ ಎಂದು ಕಿಡಿಕಾರಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯೋಮಿತಿ ಸಡಿಲಗೊಳಿಸಿದ ರಾಜ್ಯ  ಶಿಕ್ಷಣ ಇಲಾಖೆ

“ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯೋಮಿತಿ ಸಡಿಲಗೊಳಿಸುವ ಕುರಿತ ಶಿಫಾರಸು ಒಳಗೊಂಡ ತಾತ್ಕಾಲಿಕ ವರದಿಯನ್ನು...

ಮಹಾಕುಂಭಮೇಳದಲ್ಲಿ ಮಾಘ ಸ್ನಾನಕ್ಕೆ ಆಗಮಿಸಲಿರುವ 73 ದೇಶಗಳ ರಾಜ ತಾಂತ್ರಿಕ ರಾಯಭಾರಿಗಳು

“ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಮೇಳದ...

ಅಯೋಧ್ಯೆ ರಾಮಮಂದಿರ: ರಾಮಲಲ್ಲಾ ‘ಪ್ರಾಣ ಪ್ರತಿಷ್ಠೆ’ಗೆ ಒಂದು ವರ್ಷ

ಅಯೋಧ್ಯೆ ರಾಮಮಂದಿರ: ರಾಮಲಲ್ಲಾ ‘ಪ್ರಾಣ ಪ್ರತಿಷ್ಠೆ’ಗೆ ಒಂದು ವರ್ಷ ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹದ ಐತಿಹಾಸಿಕ ‘ಪ್ರಾಣ...

ವೃತ್ತಿ ಧರ್ಮ ಮತ್ತು ಸಾಮಾಜಿಕ ಜವಾಬ್ದಾರಿ- ನ್ಯಾಯವಾದಿಯ ಯಶಸ್ಸಿನ ಗುಟ್ಟು :: ಆರೂರು ಸುಕೇಶ್ ಶೆಟ್ಟಿ ನ್ಯಾಯವಾದಿ, ಉಡುಪಿ.

ವಕೀಲರ ದಿನಾಚರಣೆಯ ಶುಭಾಶಯಗಳು ವಿಶೇಷ ಸಂಚಿಕೆ ಬರಹ ::ಅರೂರು ಸುಕೇಶ್ ಶೆಟ್ಟಿ ಗೆಲ್ಲುವ ಪ್ರಕರಣಗಳ ಸಂಖ್ಯೆಯ...