thekarnatakatoday.com
National

ನವೆಂಬರ್ 7 ವಿಜಯಪುರಕ್ಕೆ ವಕ್ಫ್   ಮಸೂದೆ ಜಂಟಿ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಬೇಟಿ

“ವಕ್ಫ್ ಮಸೂದೆ 2024ರ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ನವೆಂಬರ್ 7 ರಂದು ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮಂಗಳವಾರ ತಿಳಿಸಿದ್ದಾರೆ

. ವಕ್ಫ್ ಭೂ ವಿವಾದ ಸಂಬಂಧ ವಿಜಯಪುರ ಜಿಲ್ಲೆಯ ರೈತರನ್ನು ಭೇಟಿ ಮಾಡಿ, ಚರ್ಚಿಸುವಂತೆ ತೇಜಸ್ವಿ ಸೂರ್ಯ ಅವರು ಪಾಲ್ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರು ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡುತ್ತಿದ್ದಾರೆ.

“ವಕ್ಫ್‌ ಅತಿಕ್ರಮಣದಿಂದ ಸಂತ್ರಸ್ತರಾದ ರೈತರೊಂದಿಗೆ ಸಂವಾದ ನಡೆಸಲು ನವೆಂಬರ್ 7 ರಂದು ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡುವಂತೆ ನಾನು ಮಾಡಿದ್ದ ಮನವಿಗೆ ಜೆಪಿಸಿ ಅಧ್ಯಕ್ಷರು ಒಪ್ಪಿಗೆ ನೀಡಿದ್ದಾರೆ ಎಂದರು.

ಜೆಪಿಸಿ ಅಧ್ಯಕ್ಷರು ರೈತ ಸಂಘಟನೆಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮಠಾಧೀಶರು ಮತ್ತು ಇತರರು ನೀಡಿದ ಮನವಿಗಳನ್ನು ಜೆಪಿಸಿ ಮುಂದೆ ಇಡಲಾಗುವುದು” ಎಂದು ಜೆಪಿಸಿ ಸದಸ್ಯರಾದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ. “ರೈತರು ಸುಮಾರು ಒಂದು ಶತಮಾನದಿಂದ ತಮ್ಮ ಜಮೀನುಗಳನ್ನು ಸಾಗುವಳಿ ಮಾಡುತ್ತಿದ್ದಾರೆ.

ಆದರೆ ಇತ್ತೀಚಿನ ತಿಂಗಳುಗಳಲ್ಲಿ, ಅವರಲ್ಲಿ ಹಲವರಿಗೆ ಯಾವುದೇ ದಾಖಲೆ ಅಥವಾ ವಿವರಣೆಯಿಲ್ಲದೆ ಅವರ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಲು ನೋಟಿಸ್ ನೀಡಲಾಗಿದೆ ಎಂದು ಬಿಜೆಪಿ ಸಂಸದ ದೂರಿದ್ದಾರೆ. ವಕ್ಫ್‌ ಅತಿಕ್ರಮಣ ಮಾಡಿದ ಆಸ್ತಿಯ ಪ್ರಮಾಣವು ಗಣನೀಯವಾಗಿದೆ.

ಸುಮಾರು 1,500 ಎಕರೆ ಆಸ್ತಿಯನ್ನು ಅವರ ಹಳ್ಳಿಯಲ್ಲಿಯೇ ವಕ್ಫ್ ಆಸ್ತಿ ಎಂದು ಗೊತ್ತುಪಡಿಸಲಾಗಿದೆ” ಎಂದು ಪಾಲ್‌ಗೆ ಬರೆದ ಪತ್ರದಲ್ಲಿ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

Related posts

ಕಾಂಗ್ರೆಸ್ ಪಕ್ಷ ಗೋಮಾಂಸ  ನಿಷೇಧಿಸುವಂತೆ ಪತ್ರ ಬರೆದರೆ ತಕ್ಷಣದಿಂದಲೇ ರಾಜ್ಯದಲ್ಲಿ ಗೋಮಾಂಸ ನಿಷೇಧಕ್ಕೆ ಆದೇಶ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ

The Karnataka Today

ರಾಜ್ಯ ಸಭಾ ಉಪಚುನಾವಣೆ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಬಿಜೆಪಿ ನಾಯಕಿ ರೇಖಾ ಶರ್ಮ ಅವಿರೋಧ ಆಯ್ಕೆ

The Karnataka Today

ಜಾರ್ಖಂಡ್ ನೂತನ ಮುಖ್ಯಮಂತ್ರಿ ಯಾಗಿ ಹೇಮಂತ್ ಸೊರೆನ್ ನ್ ನವೆಂಬರ್ 28ಕ್ಕೆ ಪ್ರಮಾಣವಚನ ಸ್ವೀಕಾರ

The Karnataka Today

Leave a Comment