ದಿವ್ಯಾಂಗ ರಕ್ಷಣಾ ಸಮಿತಿಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ ಹಾಗೂ ಆಹಾರ ಕಿಟ್ ವಿತರಣೆ

3

ಉಡುಪಿ/ಕೋಡವೂರು: ದಿವ್ಯಾಂಗ ರಕ್ಷಣಾ ಸಮಿತಿ (ರಿ.), ಕೋಡವೂರು ಹಾಗೂ MCKS ಫುಡ್ ಫಾರ್ ದಿ ಹಂಗ್ರಿ ಫೌಂಡೇಶನ್, ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆಸ್ಪತ್ರೆ, NCD ಘಟಕ ಹಾಗೂ ಆದರ್ಶ ಆಸ್ಪತ್ರೆ, ಉಡುಪಿ ಇವರ ಸಹಕಾರದೊಂದಿಗೆ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ ಹಾಗೂ ಮಾಸಿಕ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಕೋಡವೂರಿನಲ್ಲಿ ನಡೆಯಿತು.

ಕಳೆದ 7 ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ದಿವ್ಯಾಂಗ ರಕ್ಷಣಾ ಸಮಿತಿಯ 49ನೇ ಮಾಸಿಕ ಸವಲತ್ತು ವಿತರಣಾ ಕಾರ್ಯಕ್ರಮ ಇದಾಗಿದ್ದು, ಆಯ್ಕೆಯಾದ ದಿವ್ಯಾಂಗ ಹಾಗೂ ಅಶಕ್ತ ಫಲಾನುಭವಿಗಳಿಗೆ ಅಗತ್ಯ ಆಹಾರ ಧಾನ್ಯಗಳನ್ನು ಒಳಗೊಂಡ ಮಾಸಿಕ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕ ಕೆ. ವಿಜಯ ಕೋಡವೂರು, “ದಿವ್ಯಾಂಗರ ಸೇವೆ ದೇವರ ಕೆಲಸ. ನಾವೆಲ್ಲರೂ ಕಟಿಬದ್ಧರಾಗಿ ಈ ಸೇವಾ ಕೆಲಸವನ್ನು ಮಾಡೋಣ. ಈ ಕಾರ್ಯವು ಕೋಡವೂರಿನಲ್ಲಿ ಮಾತ್ರವಲ್ಲದೆ ಬೇರೆ ತಾಲೂಕು ಹಾಗೂ ಜಿಲ್ಲೆಗಳಿಗೂ ವಿಸ್ತರಣೆಯಾಗಲಿ,” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆದರ್ಶ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ವೈದ್ಯರಾದ ಡಾ. ಅನಂತ ಎಸ್. ಮಠದ್ ಅವರು ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು, ರೋಗವನ್ನು ತಡೆಗಟ್ಟುವ ಕ್ರಮಗಳು, ಆರೋಗ್ಯಕರ ಜೀವನಶೈಲಿ ಹಾಗೂ ಲಭ್ಯವಿರುವ ಚಿಕಿತ್ಸಾ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಗುಣಮುಖರಾಗುವ ಸಾಧ್ಯತೆ ಹೆಚ್ಚಿದೆ ಎಂಬ ಸಂದೇಶವನ್ನು ಅವರು ನೀಡಿದರು.

ಕಾರ್ಯಕ್ರಮವನ್ನು ಸಂಚಾಲಕ ಕೆ. ವಿಜಯ ಕೋಡವೂರು ಉದ್ಘಾಟಿಸಿದರು. MCKS ಫೌಂಡೇಶನ್‌ನ ಶ್ರೀಮತಿ ನಿಧಿ, ಜಿಲ್ಲಾ ಆಸ್ಪತ್ರೆಯ ಹೆಲ್ತ್ ಇನ್‌ಸ್ಪೆಕ್ಟರ್ ಮಂಜುನಾಥ್, ಆಪ್ತ ಸಮಾಲೋಚಕ ಮನು, ಮಹಿಳಾ ಸಮಿತಿ ಅಧ್ಯಕ್ಷೆ ಗುಣವತಿ ಕೋಡವೂರು, ಅಶೋಕ್ ಶೆಟ್ಟಿಗಾರ್, ಅಮಿತ್ ಗರ್ಡೇ ಹಾಗೂ ಓಸ್ ವೇಲ್ಡ್ ಪೇರರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು. ಸರ್ವೋತ್ತಮ ಹೆರ್ಗ ಹಾಗೂ ಜಯ ಪೂಜಾರಿ ಸ್ವಾಗತಿಸಿದರು. ಹರೀಶ್ ಅವರು ವಂದಿಸಿದರು.

ದಿವ್ಯಾಂಗರು ಹಾಗೂ ಅಶಕ್ತ ಕುಟುಂಬಗಳಿಗೆ ನಿರಂತರ ನೆರವು ನೀಡುವ ಜೊತೆಗೆ ಆರೋಗ್ಯ ಜಾಗೃತಿ ಮೂಡಿಸುವ ಮೂಲಕ ಸಮಾಜದ ದುರ್ಬಲ ವರ್ಗಗಳ ಬದುಕಿಗೆ ಆಸರೆಯಾಗುತ್ತಿರುವ ದಿವ್ಯಾಂಗ ರಕ್ಷಣಾ ಸಮಿತಿಯ ಸೇವಾ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

Leave a comment

Leave a Reply

Your email address will not be published. Required fields are marked *

Related Articles

ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಕಿರುಕುಳ ವಿರುದ್ಧ ಜಿಲ್ಲಾಧ್ಯಂತ ಹೋರಾಟ ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲಾ ಸಂಯೋಜಕ ರಾಜೇಶ್ ಉಚ್ಚಿಲ

80ನೇ ಸ್ವಾತಂತ್ರ್ಯ ದಿನೋತ್ಸವದ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನಲ್ಲಿ ಆಯೋಜನೆಗೊಂಡಿದ್ದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮಕ್ಕೆ...

ಮರವಂತೆ ಶ್ರೀ ವರಾಹಸ್ವಾಮಿ ಕ್ಷೇತ್ರದಲ್ಲಿ ಬೆಳಕಿಲ್ಲದೆ ಕರ್ಕಾಟಕ ಅಮಾವಾಸ್ಯೆ ಜಾತ್ರೆ: ಕತ್ತಲಲ್ಲಿ ಕಂಗಾಲಾದ ಭಕ್ತರು, ಮಂಡಳಿಯ ವಿರುದ್ಧ ತೀವ್ರ ಆಕ್ರೋಶ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಮರವಂತೆಯ ಶ್ರೀ ವರಾಹಸ್ವಾಮಿ...

ಉಡುಪಿ: ಅಕ್ರಮವಾಗಿ ನಡೆಯುತ್ತಿದ್ದ 109 ಹೋಂಸ್ಟೇ, 21 ರೆಸಾರ್ಟ್‌ಗಳು ಬಂದ್

ಬೆಂಗಳೂರು: ನಿಯಮ ಉಲ್ಲಂಘಿಸಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಉಡುಪಿ ಜಿಲ್ಲೆಯ ಒಟ್ಟು 109 ಹೋಂಸ್ಟೇಗಳು ಮತ್ತು 21...

ಅಧಿವಕ್ತಪರಿಷತ್ ವತಿಯಿಂದ ಹಿರಿಯ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ ಯವರಿಗೆ ಗುರುವಂದನೆ

ಉಡುಪಿ: ಗುರುಪೂರ್ಣಿಮೆಯ ಪ್ರಯುಕ್ತ ಅಧಿವಕ್ತ ಪರಿಷತ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಧಾರ್ಮಿಕ, ಸಾಮಾಜಿಕ ಹಾಗೂ...