ವಿಧಾನಪರಿಷತ್ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್ ಗೆ ಸಹಾಯ ಮಾಡುವ ಕೆಲಸವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಡಿದ್ದಾನೆ:: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

12

ವಿಜಯಪುರ: ಅತ್ಯಂತ ವ್ಯವಸ್ಥಿತವಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್ ಅವರಿಗೆ ಸಹಾಯ ಮಾಡುವ ಕೆಲಸವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಡಿದ್ದಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದಿದ್ದಾರೆ. ವಿಜಯಪುರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವೈಯಕ್ತಿಕ ವಿಚಾರ ಹಾಗೂ ನನ್ನ ಕುಟುಂಬದ ಬಗ್ಗೆ ಕೆಟ್ಟ ರೀತಿಯಲ್ಲಿ ಮಾತನಾಡಿದರೆ, ನಿಮ್ಮ ಕುಟುಂಬದ ಇತಿಹಾಸ ನನ್ನ ಬಳಿ ಇದೆ. ಅಗತ್ಯ ಬಂದರೆ ಅದನ್ನೂ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಬೇಕಾಗುತ್ತದೆ. ನಿಮ್ಮ ಚೇಲಾಗಳಿಂದ ನನ್ನ ವಿರುದ್ಧ ಏನಾದರೂ ಪೋಸ್ಟ್ ಮಾಡಿಸಿದರೆ, ಅದಕ್ಕಿಂತ ತೀಕ್ಷ್ಣವಾಗಿ ನಾನು ಉತ್ತರ ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ನಾನು ಮೊನ್ನೆ ಬಿಜೆಪಿಗೆ ಮತ ಹಾಕಿದ್ದೇನೆ. ನಾನು ಯಾವ ಪಕ್ಷದ ಶಾಸಕನಾಗಿದ್ದೇನೋ ಆ ಪಕ್ಷಕ್ಕೆ ಮತ ಹಾಕಿದ್ದೇನೆ. ಇದರಿಂದ ಕೆಲವರ ಎದೆ ಒಡೆದಂತಾಗಿದೆ ಎಂದು ಹೇಳಿದರು. ಕೆಲವರು ಕಾಂಗ್ರೆಸ್‌ನಿಂದ ಹಣ ಹಾಗೂ ಅಭಿವೃದ್ಧಿಗೆ ಅನುದಾನ ಸಿಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಬಿಜೆಪಿಯ ಕೆಲ ಶಾಸಕರು ಕೂಡ ಮತ ಹಾಕಿದ್ದಾರೆ. ನಮ್ಮ ಮಾಹಿತಿಯ ಪ್ರಕಾರ ಬಿಜೆಪಿ ರಾಜ್ಯಾಧ್ಯಕ್ಷರೇ ಮತ ಹಾಕಿಸಿರುವ ಸಾಧ್ಯತೆಯಿದೆ ಎಂದು ಯತ್ನಾಳ ಆರೋಪಿಸಿದರು. ಡಿ.ಕೆ. ಶಿವಕುಮಾರ್ ಹೇಳಿದಂತೆ ಮತ ಹಾಕದಿದ್ದರೆ ನನ್ನ ಹಗರಣಗಳನ್ನು ಹೊರತೆಗೆಯುತ್ತಾರೆ ಎಂಬ ಭಯದಿಂದ ಬಿಜೆಪಿ ರಾಜ್ಯಾಧ್ಯಕ್ಷರು ನಡೆದುಕೊಂಡಿದ್ದಾರೆ. ಮತದಾನಕ್ಕೂ ಮುನ್ನ ವಿಪ್ ನೀಡಬೇಕಿತ್ತು. ಆದರೆ ಮತದಾನದ ನಂತರ ವಿಪ್ ಜಾರಿಗೊಳಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಬೆಂಬಲ ನೀಡುವ ಉದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷರು ನಾಚಿಕೆಗೇಡಿನ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.

ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು ಮಾಹಿತಿ ನೀಡಿರುವುದಾಗಿ ತಿಳಿಸಿದ ಅವರು, ಈ ಹಿನ್ನೆಲೆಯಲ್ಲಿ ಕೆಲವು ನಕಲಿ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ತಾವು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂಬ ಅನುಮಾನ ಮೂಡಿಸುವ ರೀತಿಯ ಪೋಸ್ಟ್‌ಗಳನ್ನು ಹಾಕಿಸಲಾಗಿದೆ ಎಂದು ಆರೋಪಿಸಿದರು.

Leave a comment

Leave a Reply

Your email address will not be published. Required fields are marked *

Related Articles

ಈದ್ ಮೆರವಣಿಗೆ ವೇಳೆ ಪುನೀತ್ ಕೆರೆಹಳ್ಳಿ ವಿರುದ್ಧ ಘೋಷಣೆ ಕೂಗಿ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆಗೈದ ಮುಸ್ಲಿಂ ಪುಂಡರು

“ಬೆಂಗಳೂರು: ಈದ್ ಮೆರವಣಿಗೆ ವೇಳೆ 100ಕ್ಕೂ ಹೆಚ್ಚು ಮುಸ್ಲಿಂ ಪುಂಡರು ರಾಷ್ಟ್ರ ರಕ್ಷಣಾ ಪಡೆ ಸ್ಥಾಪಕ...

ರೈತರಿಗೆ ನೀಡುತ್ತಿರುವ ಬೆಳೆ ಸಾಲ ಶೂನ್ಯ ಬಡ್ಡಿ ದರ ಕೃಷಿ ಸಾಲಮಿತಿ 5 ಲಕ್ಷ ರೂ ಗೆ ಏರಿಕೆ

ಬೆಂಗಳೂರು: ಸಹಕಾರ ಸಂಘಗಳ ಮೂಲಕ ರೈತ ಸದಸ್ಯರಿಗೆ ನೀಡುವ ಶೂನ್ಯ ಬಡ್ಡಿ ದರದ ಸಾಲಮಿತಿಯನ್ನು 5...

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮೊದಲ ಶಾಸಕಾಂಗ ಪಕ್ಷದ ಸಭೆಗೆ ಸಿದ್ದರಾಮಯ್ಯ ಸೇರಿ ಅತೃಪ್ತ ಶಾಸಕರ ಗೈರು

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೊದಲ ಕಾಂಗ್ರೆಸ್...

20 ವರ್ಷದಿಂದ ಸಂತ್ರಸ್ತ ರೈತರಿಗೆ ಭೂ ಒತ್ತುವರಿ ಪರಿಹಾರ ಬಾಕಿ ಗದಗ ಜಿಲ್ಲಾಧಿಕಾರಿ ಸರಕಾರಿ ಕಾರು ಕಚೇರಿ ಸೊತ್ತು ಜಪ್ತಿ

“ಗದಗ:  ಸರಕಾರ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದಿದ್ದರೆ, ಏನು ಮಾಡುತ್ತಾರೆ? ಎಂದುಕೊಂಡರು ಅನಿಸುತ್ತೆ ಗದಗ ಜಿಲ್ಲಾಧಿಕಾರಿಗಳು!...