ಮಹಾನಗರ ಪಾಲಿಕೆ ಚುನಾವಣೆ ಮುಸ್ಲಿಂ ಪ್ರಾಬಲ್ಯವಿರುವ ಗೋದ್ರಾ ವಾರ್ಡ್ ನಲ್ಲಿ ಜಯಶಾಲಿಯಾದ ಹಿಂದೂ ಮಹಿಳೆ

28
ಅಹ್ಮದಾಬಾದ್: ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ 2026ರಲ್ಲಿ ಅಚ್ಚರಿ ಫಲಿತಾಂಶವೊಂದು ಹೊರಬಿದ್ದಿದ್ದು, ಶೇ.100 ರಷ್ಟು ಮುಸ್ಲಿಂ ಮತದಾರರೇ ಇರುವ ಗೋಧ್ರಾ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ. ಹೌದು.. ಕೋಮು ಇತಿಹಾಸದ ಹಿನ್ನೆಲೆಯಲ್ಲಿ ಆಗಾಗ ಸುದ್ದಿಯಾಗುವ ಗುಜರಾತ್ ನ ಗೋದ್ರಾದಲ್ಲಿ, 2026ರ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಸಾಮಾಜಿಕ ಸಾಮರಸ್ಯದ ಪ್ರಬಲ ಸಂದೇಶವನ್ನು ರವಾನಿಸಿದೆ.


ಶೇ.100 ರಷ್ಟು ಮುಸ್ಲಿಂ ಮತದಾರರೇ ಇರುವ ಗೋಧ್ರಾ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ. ಗೋದ್ರಾ ನಗರಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ, ವಾರ್ಡ್ ಸಂಖ್ಯೆ 7ರಿಂದ ಪಕ್ಷೇತರ ಹಿಂದೂ ಮಹಿಳಾ ಅಭ್ಯರ್ಥಿ ಅಪೇಕ್ಷಾಬೆನ್ ನೈನೇಷ್‌ಭಾಯಿ ಸೋನಿ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ವಿಶೇಷವೆಂದರೆ, ಈ ಕ್ಷೇತ್ರದಲ್ಲಿ ಶೇ. 100ರಷ್ಟು ಮತದಾರರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ರಾಜಕೀಯ ನಿರೂಪಣೆಯನ್ನೇ ಬದಲಿಸಿದ ಫಲಿತಾಂಶ ಅಪೇಕ್ಷಾಬೆನ್ ಸೋನಿ ಅವರ ಈ ಗೆಲುವು ಈ ಭಾಗದ ರಾಜಕೀಯ ನಿರೂಪಣೆಯನ್ನೇ ಬದಲಿಸಿದ್ದು, ವಾರ್ಡ್ ಸಂಖ್ಯೆ 7ರಲ್ಲಿ ಅವರು ನೋಂದಾಯಿತ ಮತದಾರರಲ್ಲದಿದ್ದರೂ ಸಹ, ಸ್ಥಳೀಯ ನಿವಾಸಿಗಳ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಸ್ಲಿಂ ಮತದಾರರು ಸಾಂಪ್ರದಾಯಿಕ ಧರ್ಮ ಮತ್ತು ಜಾತಿ ಆಧಾರಿತ ಮತದಾನದ ಮಾದರಿಗಳನ್ನು ಬದಿಗಿಟ್ಟು, ಸ್ಥಳೀಯ ಆಡಳಿತಕ್ಕೆ ಸೂಕ್ತವೆಂದು ಕಂಡುಬಂದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಈ ಐತಿಹಾಸಿಕ ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇತಿಹಾಸ ನಿರ್ಮಾಣ ಈ ಫಲಿತಾಂಶವನ್ನು ಗೋದ್ರಾದ ರಾಜಕೀಯ ಇತಿಹಾಸದ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಲಾಗುತ್ತಿದ್ದು, ಇದು ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ಒಗ್ಗಟ್ಟಿಗೆ ಅಪರೂಪದ ಉದಾಹರಣೆಯಾಗಿದೆ. ಸಂಪೂರ್ಣ ಮುಸ್ಲಿಂ ಮತದಾರರಿರುವ ವಾರ್ಡ್‌ನಲ್ಲಿ ಹಿಂದೂ ಮಹಿಳೆಯನ್ನು ಭಾರಿ ಬಹುಮತದಿಂದ ಆರಿಸುವ ಮೂಲಕ, ಗೋದ್ರಾದ ಮತದಾರರು ಕೋಮು ವಿಭಜನೆಗಿಂತ ವೈಯಕ್ತಿಕ ಅರ್ಹತೆ ಮತ್ತು ಸ್ಥಳೀಯ ನಂಬಿಕೆಗೆ ಆದ್ಯತೆ ನೀಡಿದ್ದಾರೆ.

ಬಿಜೆಪಿ ಬಿಗಿ ಹಿಡಿತ, ಕಾಂಗ್ರೆಸ್ ಗೆ ಮುಖಭಂಗ ಇನ್ನು ಗುಜರಾತ್‌ನ ಒಟ್ಟಾರೆ ಚುನಾವಣಾ ಫಲಿತಾಂಶದತ್ತ ಗಮನ ಹರಿಸುವುದಾದರೆ, ಬಿಜೆಪಿಯು ರಾಜ್ಯದ ಎಲ್ಲಾ 15 ಮಹಾನಗರ ಪಾಲಿಕೆಗಳ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಭರ್ಜರಿ ಜಯ ದಾಖಲಿಸಿದೆ. ಅಹ್ಮದಾಬಾದ್‌ನ 192 ಸ್ಥಾನಗಳಲ್ಲಿ 146 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದರೆ, ಕಾಂಗ್ರೆಸ್ ಕೇವಲ 18 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

ಸೂರತ್‌ನಲ್ಲಿ 115 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಆಮ್ ಆದ್ಮಿ ಪಕ್ಷವನ್ನು (ಕೇವಲ 4 ಸ್ಥಾನ) ಧೂಳೀಪಟ ಮಾಡಿದೆ. ಇದೇ ರೀತಿಯ ಟ್ರೆಂಡ್ ರಾಜ್‌ಕೋಟ್ ಮತ್ತು ವಡೋದರಾದಲ್ಲೂ ಕಂಡುಬಂದಿದ್ದು, ಬಿಜೆಪಿ ತಲಾ 65 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ ಎರಡಂಕಿ ತಲುಪಲು ಪರದಾಡಿದೆ.

Leave a comment

Leave a Reply

Your email address will not be published. Required fields are marked *

Related Articles

ಮೇಕೆದಾಟು ಯೋಜನೆಗೆ ಕರ್ನಾಟಕಕ್ಕೆ ಕಾನೂನುಬದ್ಧ ಹಕ್ಕಿದೆ, ತಮಿಳುನಾಡಿನ ಸಮ್ಮತಿ ಅಗತ್ಯವೇ ಇಲ್ಲ ಕೇಂದ್ರ ಜಲಶಕ್ತಿ ಸಚಿವಾಲಯ

ಬೆಂಗಳೂರು: ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ಪರವಾಗಿ ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ...

ಕಾಕ್ರೋಚ್ ಜನತಾ ಪಕ್ಷಕ್ಕೆ 1 ಕೋಟಿ ದೇಣಿಗೆ ನೀಡಿ ಕಾನೂನು ನೆರವು ಉಚಿತ ಎಂದ ಕಪಿಲ್ ಸಿಬಲ್

“ನವದೆಹಲಿ: ನೀಟ್ ಅಕ್ರಮ ಖಂಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳಿಗೆ ಕಾನೂನು ಬೆಂಬಲ ನೀಡುತ್ತೇನೆ ಮತ್ತು...

ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ 13 ಅಂಶಗಳ ಮಂಡನೆಗೆ ದೆಹಲಿಯಲ್ಲಿ ರಾಜ್ಯದ ಸಂಸದರ ಸಭೆ ನಡೆಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ನವದೆಹಲಿ: ಜಲಸಂಪನ್ಮೂಲ ಇಲಾಖೆಯನ್ನು ಹೊರತುಪಡಿಸಿ ಕೇಂದ್ರ ಸರ್ಕಾರದಿಂದ ಬಾಕಿ ಇರುವ ಪ್ರಮುಖ ಯೋಜನೆಗಳಿಗೆ ಅನುಮೋದನೆ, ಅನುದಾನಗಳು...

ನೀಟ್ ಪರೀಕ್ಷೆ ನಡೆಸುವ ಎನ್ ಟಿಎನಲ್ಲಿ ಮಹತ್ವದ ಬದಲಾವಣೆ 47 ಅಧಿಕಾರಿಗಳನ್ನು ವಜಾಗೊಳಿಸಿದ ಕೇಂದ್ರ ಸರಕಾರ

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿ ಪ್ರತಿಭಟನೆ ದೇಶಾದ್ಯಂತ ಹಬ್ಬುತ್ತಿದ್ದಂತೆ ಎಚ್ಚೇತ ಕೇಂದ್ರ...