ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ ಕರಪತ್ರ ಹಂಚಿಕೆ ಆರೋಪ ಇಬ್ಬರು ಪೊಲೀಸ್ ಅಧಿಕಾರಿಗಳ ವರ್ಗಾವಣೆ

34

ಬಾಗಲಕೋಟೆ: ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 9ರಂದು ನಡೆಯುತ್ತಿದ್ದು ಕಣದಲ್ಲಿರುವ ಅಭ್ಯರ್ಥಿಗಳು ಭರ್ಜರಿಯಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ  ಎನ್ ಎಸ್ ಯುಐ ಘಟಕದಿಂದ ಕರಪತ್ರ ಹಂಚಿಕೆ ಆರೋಪ ಕೇಳಿಬಂದಿತ್ತು.

ಹೀಗಾಗಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ. ಬಾಗಲಕೋಟೆಯ ಕುಮಾರೇಶ್ವರ ಕ್ಯಾಂಪಸ್ನಲ್ಲಿ ಕರಪತ್ರ ಹಿಡಿದು ಬಂದಿದ್ದ ಎನ್ ಎಸ್ ಯುಐ ಕಾರ್ಯಕರ್ತರು ಹಾಗೂ ಬಿಜೆಪಿಯ ಕಾರ್ಯಕರ್ತರ ನಡುವೆ ಗಲಾಟೆಯಾಗಿತ್ತು.
ಬಳಿಕ ಐವರು  ಎನ್ ಎಸ್ ಯು ಐ ಕಾರ್ಯಕರ್ತರನ್ನು ಪೊಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಲಾಗಿತ್ತು. ಇದೀಗ ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆ ಸಿಪಿಐ ವಿಜಯ ಮುರಗುಂಡಿ ಮತ್ತು ನವನಗರ ಪೊಲೀಸ್ ಠಾಣೆ ಪಿಎಸ್ಐ ಅಶೋಕ ಚೌಹಾಣ್ರನ್ನು ವರ್ಗಾವಣೆ ಮಾಡಿ ಡಿಜಿ & ಐಜಿಪಿ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ.
ವಿಜಯಪುರ ಮಹಿಳಾ ಠಾಣೆಗೆ ಸಿಪಿಐ ವಿಜಯ ಮುರಗುಂಡಿ ಅವರನ್ನ ವರ್ಗಾವಣೆ ಮಾಡಲಾಗಿದ್ದರೆ ಬೆಳಗಾವಿ ಉತ್ತರ ವಲಯ ಐಜಿಪಿ ಕಚೇರಿಗೆ ಪಿಎಸ್ ಐ ಅಶೋಕ್ ಅವರನ್ನು ವರ್ಗಾವಣೆ ಮಾಡಲಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ಈದ್ ಮೆರವಣಿಗೆ ವೇಳೆ ಪುನೀತ್ ಕೆರೆಹಳ್ಳಿ ವಿರುದ್ಧ ಘೋಷಣೆ ಕೂಗಿ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆಗೈದ ಮುಸ್ಲಿಂ ಪುಂಡರು

“ಬೆಂಗಳೂರು: ಈದ್ ಮೆರವಣಿಗೆ ವೇಳೆ 100ಕ್ಕೂ ಹೆಚ್ಚು ಮುಸ್ಲಿಂ ಪುಂಡರು ರಾಷ್ಟ್ರ ರಕ್ಷಣಾ ಪಡೆ ಸ್ಥಾಪಕ...

ರೈತರಿಗೆ ನೀಡುತ್ತಿರುವ ಬೆಳೆ ಸಾಲ ಶೂನ್ಯ ಬಡ್ಡಿ ದರ ಕೃಷಿ ಸಾಲಮಿತಿ 5 ಲಕ್ಷ ರೂ ಗೆ ಏರಿಕೆ

ಬೆಂಗಳೂರು: ಸಹಕಾರ ಸಂಘಗಳ ಮೂಲಕ ರೈತ ಸದಸ್ಯರಿಗೆ ನೀಡುವ ಶೂನ್ಯ ಬಡ್ಡಿ ದರದ ಸಾಲಮಿತಿಯನ್ನು 5...

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮೊದಲ ಶಾಸಕಾಂಗ ಪಕ್ಷದ ಸಭೆಗೆ ಸಿದ್ದರಾಮಯ್ಯ ಸೇರಿ ಅತೃಪ್ತ ಶಾಸಕರ ಗೈರು

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೊದಲ ಕಾಂಗ್ರೆಸ್...

20 ವರ್ಷದಿಂದ ಸಂತ್ರಸ್ತ ರೈತರಿಗೆ ಭೂ ಒತ್ತುವರಿ ಪರಿಹಾರ ಬಾಕಿ ಗದಗ ಜಿಲ್ಲಾಧಿಕಾರಿ ಸರಕಾರಿ ಕಾರು ಕಚೇರಿ ಸೊತ್ತು ಜಪ್ತಿ

“ಗದಗ:  ಸರಕಾರ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದಿದ್ದರೆ, ಏನು ಮಾಡುತ್ತಾರೆ? ಎಂದುಕೊಂಡರು ಅನಿಸುತ್ತೆ ಗದಗ ಜಿಲ್ಲಾಧಿಕಾರಿಗಳು!...