ಬಳಕೆಯಾಗದೆ ಉಳಿದ ಮೊಬೈಲ್ ಇಂಟರ್ನೆಟ್ ಡೇಟಾ ಮರುದಿನ ಬಳಕೆಗೆ ರೋಲ್ ಓವರ್ ಮಾಡಿ: ಟೆಲಿಕಾಂ ಕಂಪನಿಗಳಿಗೆ ರಾಘವ್ ಚಡ್ಡಾ ಆಗ್ರಹ

58

ನವದೆಹಲಿ: ಬಳಕೆಯಾಗದೆ ಉಳಿಯುವ ಇಂಟರ್ನೆಟ್ ಡೇಟಾವನ್ನು ಮರುದಿನ ಬಳಸಲು ಟೆಲಿಕಾಂ ಕಂಪನಿಗಳು ಅನುಮತಿ ನೀಡಬೇಕು, ಆ ರೀತಿಯ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಸಂಸತ್ ಅಧಿವೇಶನದಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ತಮ್ಮ ವಾದವನ್ನು ಮಂಡಿಸಿದ್ದಾರೆ. ಸಾಮಾನ್ಯವಾಗಿ ನಾವು ಇಂಟರ್ನೆಟ್ ಡೇಟಾ ಹಾಕಿಸುವ ಸಂದರ್ಭದಲ್ಲಿ 1.5GB, 2GB, 3GB ಎಂಬಂತೆ ರಿಚಾರ್ಜ್ ಮಾಡಿಕೊಳ್ಳುತ್ತೇವೆ.


ಟೆಲಿಕಾಂ ಕಂಪನಿಗಳು ಇದನ್ನು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಿರುತ್ತವೆ. 24 ಗಂಟೆ ಮುಗಿದ ಬಳಿಕ ಹೊಸ ಇಂಟರ್ನೆಟ್ ಡೇಟಾ ಆರಂಭವಾಗುತ್ತದೆ. ಆದರೆ ನಾವು ಕೆಲವೊಮ್ಮೆ ಒಂದು ದಿನದಲ್ಲಿ ಕಂಪ್ಲೀಟ್ ಡೇಟಾ ವನ್ನು ಬಳಸುವುದಿಲ್ಲ. ಇದೆ ಬಳಸದೆ ಉಳಿಯುವ ಇಂಟರ್ನೆಟ್ ಡೇಟಾವನ್ನು ಕಂಪನಿಗಳು ಹಿಂಪಡೆಯುತ್ತವೆ. ಆದರೆ ನಾವು ಅದಕ್ಕೆ ಸಂಪೂರ್ಣವಾಗಿ ಹಣವನ್ನು ಪಾವತಿಸಿರುತ್ತೇವೆ. ಹೀಗಾಗಿ ಬಳಕೆಯಾಗದೆ ಉಳಿದ ಇಂಟರ್ನೆಟ್ ಡೇಟಾವನ್ನು ಮರುದಿನ ಬಳಸಲು ಅನುಮತಿ ನೀಡಬೇಕೆಂದು ಸಂಸತ್ತಿನಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರು ಧ್ವನಿಯೆತ್ತಿದ್ದಾರೆ.
ಪ್ರತಿ 24 ಗಂಟೆಗಳಿಗೊಮ್ಮೆ ಡೇಟಾವನ್ನು ಮರುಹೊಂದಿಸುತ್ತವೆ. 2 ಜಿಬಿಯಲ್ಲಿ 1.5 ಜಿಬಿ ಡೇಟಾ ಬಳಿಸಿ 500ಎಂಬಿ ಉಳಿದ್ರೆ, ಅದನ್ನು ಮಾರನೇ ದಿನ ಬಳಸಲಾಗಲ್ಲ. ಬಳಕೆಯಾಗದ ಡೇಟಾವು ಸಂಪೂರ್ಣವಾಗಿ ಪಾವತಿಸಲ್ಪಟ್ಟಿದ್ದರೂ ಮಧ್ಯರಾತ್ರಿಯಲ್ಲಿ ಮುಕ್ತಾಯಗೊಳ್ಳುತ್ತದೆ. ಬಳಕೆದಾರರ ಬಳಕೆಯಾಗದ ಮೊಬೈಲ್ ಡೇಟಾವನ್ನು ಟೆಲಿಕಾಂ ಕಂಪನಿಗಳು ಮಧ್ಯರಾತ್ರಿ ಮುಟ್ಟುಗೋಲು ಹಾಕಿಕೊಳ್ಳುತ್ತವೆ. ಇದನ್ನು ಮರುದಿನಕ್ಕೆ ಮುಂದುವರಿಸಲಾಗುವುದಿಲ್ಲ. ಇದು ಅನೈತಿಕ ಎಂದು ಚಡ್ಡಾ ಕಿಡಿಕಾರಿದ್ದಾರೆ.
ಅಲ್ಲದೆ ಮೊಬೈಲ್ ಡೇಟಾವನ್ನು ರೋಲ್‌ಓವರ್ ಮಾಡಲು ಅಥವಾ ಮಾರನೇ ದಿನಕ್ಕೆ ಸಾಗಿಸಲು ಯಾವುದೇ ಸೌಲಭ್ಯವಿಲ್ಲ. ನಾವು ಪಾವತಿಸಿದ ಡೇಟಾವನ್ನು ಟೆಲಿಕಾಂ ಕಂಪನಿಗಳು ಯಾಕೆ ಮುಟ್ಟುಗೋಲು ಹಾಕಿಕೊಳ್ಳಬೇಕು?. ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್‌ನಂತಹ ಇತರ ಗ್ರಾಹಕ ಸೇವೆಗಳೊಂದಿಗೆ ಸಮಾನಾಂತರವಾಗಿ ಡೇಟಾವನ್ನು ನೋಡಬೇಕು.
ಬಳಕೆಯಾಗದ ಡೇಟಾವನ್ನು ರೋಲ್‌ಓವರ್ ಮಾಡಲು ಇಲ್ಲ, ಕುಟುಂಬ ಮತ್ತು ಸ್ನೇಹಿತರ ನಡುವೆ ಅದನ್ನು ವರ್ಗಾವಣೆ ಮಾಡುವ ಪ್ರೀತಿಯಲ್ಲಿ ಯಾವುದಾದರು ಕ್ರಮ ತರಬೇಕು ಎಂದು ಅವರು ಸಂಸತ್ತಿನಲ್ಲಿ ಆಗ್ರಹಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಮಧ್ಯಪ್ರಾಚ್ಯ ಯುದ್ಧ ವಿಸ್ತರಣೆ ಸಂಘರ್ಷ ಹಿಂದೂ ಮಹಾಸಾಗರವನ್ನೂ ತಲುಪಬಹುದು: ಸುಳಿವು ನೀಡಿದ ಇರಾನ್

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೊತ್ತಿ ಉರಿಯುತ್ತಿರುವ ಯುದ್ಧದ ಕಿಡಿ ಈಗ ಭಾರತದ ಹಿತ್ತಲಾಗಿರುವ ಹಿಂದೂ ಮಹಾಸಾಗರಕ್ಕೂ ವ್ಯಾಪಿಸುವ...

ಬ್ರಿಕ್ಸ್ ಶೃಂಗಸಭೆ: ಭಾರಿ ಭದ್ರತೆ, ಐಷಾರಾಮಿ ಡೂಮ್ಸ್ ಡೇ ವಿಮಾನದಲ್ಲಿ ನವದೆಹಲಿಗೆ ಆಗಮಿಸಿದ ಪುಟಿನ್

ನವದೆಹಲಿ: ಬ್ರಿಕ್ಸ್ ಶೃಂಗಸಭೆಗೆ ರಾಷ್ಟ್ರ ರಾಜಧಾನಿ ಸಜ್ಜಾಗಿದೆ. ನಾಳೆಯಿಂದ ಭಾರತ ಮಂಟಪದಲ್ಲಿ ಎರಡು ದಿನ ಭಾರತದ...

ವಿಮಾನದಲ್ಲಿ ಬಾಂಬ್ ಬೆದರಿಕೆ ತುರ್ತುಭೂ ಸ್ಪರ್ಶ ಮಾಡಿದ ಇಂಡಿಗೋ ವಿಮಾನ

“ಅಹಮದಾಬಾದ್: ಲಕ್ನೋದಿಂದ ಸೌದಿ ಅರೇಬಿಯಾದ ದಮ್ಮಾಮ್‌ಗೆ  ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ...

370ನೇ ವಿಧಿಯನ್ನು ರದ್ದುಗೊಳಿಸಿದ ನಂತರಬದಲಾದ ಜಮ್ಮು ಮತ್ತು ಕಾಶ್ಮೀರ ವಂದೇ ಮಾತರಂ’ ಸಂಪೂರ್ಣ ರಾಷ್ಟ್ರಗೀತೆ ಗಾಯನ,

ಶ್ರೀನಗರ: 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಬದಲಾಗಿದೆ. ಮುಸ್ಲಿಂ ಬಹುಸಂಖ್ಯಾತ...