ಪಾದರಕ್ಷೆ ಧರಿಸಿಕೊಂಡೇ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ‌ ವಿವಾದದ ಸುಳಿಯಲ್ಲಿ ಬಾನು ಮುಷ್ತಾಕ್

35

ಮಂಡ್ಯ: ಕಾರ್ಯಕ್ರಮವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ। ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರಕ್ಕೆ ಸಾಹಿತಿ ಬಾನು ಮುಷ್ತಾಕ್‌ ಪುಷ್ಪ ನಮನ ಸಲ್ಲಿಸಿದ್ದು ವಿವಾದಕ್ಕೆ ತಿರುಗಿದೆ.
ಚಪ್ಪಲಿ ಧರಿಸಿಕೊಂಡೇ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲು ಬಾನು ಮುಷ್ತಾಕ್‌ ಮುಂದಾದಾಗ ಸಂಘಟಕರು ಚಪ್ಪಲಿ ಬಿಟ್ಟು ಬರುವಂತೆ ಮನವಿ ಮಾಡಿದರು.
ಅದಕ್ಕೆ ಬಾನು ಮುಷ್ತಾಕ್‌ ಒಪ್ಪಲಿಲ್ಲ. ಆದರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಪ್ಪಲಿ ಹೊಲೆಯುವುದು ನಮ್ಮ ವೃತ್ತಿ. ಚಪ್ಪಲಿ ನಮ್ಮ ಮನೆ ದೇವರು ಎಂದು ಸರ್ಮಥಿಸಿಕೊಂಡಿದ್ದಾರೆ.
ಅದು ನಮ್ಮ ಅಸ್ಮಿತೆಯ ಸಂಕೇತ. ನಾವು ಚಪ್ಪಲಿ ಹೊಲಿಯುವವರು. ನಮಗೆ ಅದರ ಬಗ್ಗೆ ಅಪಾರ ಗೌರವವಿದೆ ಎಂದು ಸಮರ್ಥನೆ ನೀಡಿದರು.

Leave a comment

Leave a Reply

Your email address will not be published. Required fields are marked *

Related Articles

ಅಯೋಧ್ಯೆ ರಾಮಮಂದಿರ 5 ಕೋಟಿ ಮೌಲ್ಯದ ಚಿನ್ನಲೇಪಿತ ‘ರಾಮಚರಿತ ಮಾನಸ’ ನಾಪತ್ತೆ

ಅಯೋಧ್ಯೆಯ ರಾಮ ಮಂದಿರವು ದೇಣಿಗೆ ವಿವಾದ ಮತ್ತೊಮ್ಮೆ ಸುದ್ದಿಯಲ್ಲಿದೆ. ಸುಮಾರು 5 ಕೋಟಿ ರೂ. ಮೌಲ್ಯದ...

ಹೊಸದಾಗಿ ರಚನೆಯಾದ ಟಿಟಿಡಿ ಬೋರ್ಡ್ ಮೊದಲ ಸಭೆಯಲ್ಲಿ ಮೊದಲ ನಿರ್ಧಾರ ದೇವಸ್ಥಾನದಲ್ಲಿ ಹಿಂದೂಯೇತರ ಸಿಬ್ಬಂದಿಗಳ ತೆರವು

ತಿರುಪತಿಯಲ್ಲಿ ಮಹತ್ವದ ಬದಲಾವಣೆ; ಹಿಂದೂಯೇತರ ಸಿಬ್ಬಂದಿಗೆ ಕೋಕ್, 2-3 ಗಂಟೆಯಲ್ಲಿ ದರ್ಶನ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂಯೇತರ...