ಲೈಂಗಿಕ ಕಿರುಕುಳ ಪ್ರಕರಣ ಧುರಂಧರ್  ಸಿನಿಮಾ ನಟ ನದೀಮ್ ಖಾನ್ ಬಂಧನ

41

” ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧುರಂಧರ್  ಸಿನಿಮಾ ಕಲಾವಿದ ನದೀಮ್ ಖಾನ್ ಅವರನ್ನು ಬಂಧಿಸಲಾಗಿದೆ

ಕಳೆದ 10 ವರ್ಷಗಳಿಂದ ಮನೆ ಕೆಲಸದಾಕೆಯನ್ನ ನದೀಮ್ ಖಾನ್ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು. ಮದುವೆ ಆಗೋದಾಗಿ ಭರವಸೆ ನೀಡಿದ್ದರು. ಆದರೆ ಈಗ ಅವರು ಮೋಸ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ ಎನ್ನಲಾಗಿದೆ. 41 ವರ್ಷದ ಮಹಿಳೆ ಈ ದೂರನ್ನು ನೀಡಿದ್ದು, 2015ರಲ್ಲಿ ನದೀಮ್ ಖಾನ್ ಅವರನ್ನು ಸಂತ್ರಸ್ತೆ ಭೇಟಿ ಮಾಡಿದರು. ಆಗ ಅವರಿಗೆ 31 ವರ್ಷ. ಮನೆಕೆಲಸದವಳಾಗಿ ಅವರು ಸೇರಿಕೊಂಡರು.

ನಂತರ ಇದು ದೈಹಿಕ ಸಂಬಂಧಕ್ಕೆ ತಿರುಗಿತು. ಇಬ್ಬರೂ ಆಪ್ತರಾದರು. ಈ ವೇಳೆ ನದೀಮ್ ಖಾನ್ ಅವರಿಗೆ ಮದುವೆ ಆಗುವ ಭರವಸೆ ನೀಡಿದ್ದು, ಈ ಭರವಸೆ ಮೇಲೆ ಅವರು ದೈಹಿಕ ಸಂಪರ್ಕಕ್ಕೆ ಒಪ್ಪಿದರು.ಇದು 10 ವರ್ಷಗಳ ಕಾಲ ಮುಂದುವರಿಯಿತು. ಈಗ ಅವರು ಮದುವೆ ಆಗಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದು, ಹೀಗಾಗಿ, ಪೊಲೀಸರನ್ನು ಸಂಪರ್ಕಿಸಲು ಅವರು ನಿರ್ಧರಿಸಿದರು. ಆರಂಭಿಕ ತನಿಖೆ ನಡೆಸಿ ನದೀಮ್ ಖಾನ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಹೆಚ್ಚಿನ ತನಿಖೆ ಮುಂದುವರೆದಿದ್ದು, ಅಧಿಕಾರಿಗಳು ಹೆಚ್ಚುವರಿ ಹೇಳಿಕೆಗಳನ್ನು ದಾಖಲಿಸುವ ಮತ್ತು ಆರೋಪಗಳಿಗೆ ಸಂಬಂಧಿಸಿದ ಪುರಾವೆಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ.

ಯಾರು ಈ ನದೀಮ್ ಖಾನ್? ‘ಧುರಂಧರ್’ ಸಿನಿಮಾದಲ್ಲಿ ಡಕಾಯಿತ್ ರೆಹಮಾನ್ ಮನೆಯ ಬಾಣಸಿಗ ಅಖ್ಲಾಕ್ ಆಗಿ ನದೀಮ್ ಖಾನ್ ಕಾಣಿಸಿಕೊಂಡಿದ್ದರು. ನದೀಮ್ ಖಾನ್ ಅವರನ್ನು ಪೊಲೀಸರು ವಶದಲ್ಲಿ ಇಟ್ಟುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಧುರಂಧರ್ ಸಿನಿಮಾ ಹೊಸ ದಾಖಲೆ ಬರೆದಿದೆ. ಈ ಚಿತ್ರ ವಿಶ್ವಾದ್ಯಂತ 1300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಜನವರಿ 30ರಂದು ಸಿನಿಮಾ ನೆಟ್ಫ್ಲಿಕ್ಸ್ ಮೂಲಕ ಪ್ರಸಾರ ಕಾಣಲಿದೆ. ರಣವೀರ್ ಸಿಂಗ್ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದ ಸೀಕ್ವೆಲ್ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಕನ್ನಡದ ‘ಟಾಕ್ಸಿಕ್’ ಎದುರು ಸಿನಿಮಾ ತೆರೆಗೆ ಬರುತ್ತಿದೆ”

Leave a comment

Leave a Reply

Your email address will not be published. Required fields are marked *

Related Articles

ಕರ್ನಾಟಕದಲ್ಲಿ ಜನರ ಭಾವನೆಗಳನ್ನು ಗುರುತಿಸಲಾಗದಷ್ಟು ಬಿಜೆಪಿ ಹೈಕಮಾಂಡ್ ದುರ್ಬಲವಾಗಿದೆ ಬಸನಗೌಡ ಪಾಟೀಲ್ ಯತ್ನಾಳ್

“ಬೆಂಗಳೂರು: ಕರ್ನಾಟಕದಲ್ಲಿ ಜನರ ಭಾವನೆಗಳನ್ನು ಗುರುತಿಸಲಾಗದಷ್ಟು ಬಿಜೆಪಿ ಹೈಕಮಾಂಡ್ ದುರ್ಬಲವಾಗಿದೆ ಎಂದು ನನಗನ್ನಿಸುತ್ತದೆ ಎಂದು ಬಸನಗೌಡ...

ಪೊಲೀಸ್ ಠಾಣೆಯಲ್ಲಿ ಲಂಚ ಸ್ವೀಕಾರ ಲೋಕಾಯುಕ್ತ ದಾಳಿ ಪಿಎಸ್ಐ ಹಾಗೂ ಓರ್ವ ಕಾನ್ಸ್ಟೇಬಲ್ ಬಂಧನ

“ಬಾಗಲಕೋಟೆ: ಲೋಕಾಯುಕ್ತ ಪೊಲೀಸರು ಬುಧವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ ಮೇಲೆ...

ಎಸ್ ಎಸ್ ಎಲ್ ಸಿ ತೃತೀಯ ಭಾಷೆ ವಿವಾದ: ಸಿಎಂ ಸಲಹೆ ಪಡೆಯಲು ಮುಂದಾದ ಸಚಿವ ಮಧು ಬಂಗಾರಪ್ಪ ಬದಲಾಗಲಿದೆ ಸರ್ಕಾರದ ಮುಂದಿನ ನಡೆ

ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಅಂಕ/ಗ್ರೇಡ್ ವ್ಯವಸ್ಥೆ ಕುರಿತು ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್...

ಕೊಡಗು, ಬೀದರ್, ಬಳ್ಳಾರಿ, ಚಿತ್ರದುರ್ಗ ಮತ್ತು ಮೈಸೂರು ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭ್ರಷ್ಟ ಅಧಿಕಾರಿಗೆ...