ಅಮೆರಿಕವು ಕಳೆದ 18 ವರ್ಷಗಳಿಂದ ಜಾರಿಯಲ್ಲಿದ್ದ ಎಚ್‌-1ಬಿ ವೀಸಾ ಲಾಟರಿ ಪದ್ಧತಿಯನ್ನು ಅಧಿಕೃತವಾಗಿ ರದ್ದು

23

ವಾಷಿಂಗ್ಟನ್‌: ಅಮೆರಿಕವು ಕಳೆದ 18 ವರ್ಷಗಳಿಂದ ಜಾರಿಯಲ್ಲಿದ್ದ ಎಚ್‌-1ಬಿ ವೀಸಾ ಲಾಟರಿ ಪದ್ಧತಿಯನ್ನು ಅಧಿಕೃತವಾಗಿ ರದ್ದು ಹೊಸ ನಿಯಮಗಳು ಫೆಬ್ರವರಿ 27, 2026 ರಿಂದ ಜಾರಿಗೆ ಬರಲಿವೆ. ಇದು 2027ರ ಹಣಕಾಸು ವರ್ಷದ ವೀಸಾ ಮಿತಿಗೆ ಅನ್ವಯ ಎಚ್‌-1ಬಿ ವೀಸಾಗಳಲ್ಲಿ ಶೇ. 70 ರಷ್ಟು ಭಾರತೀಯರೇ ಇರುವುದರಿಂದ, ಭಾರತೀಯ ಉದ್ಯೋಗಿಗಳ ಮೇಲೆ ಪ್ರತಿಕೂಲ ಪರಿಣಾಮ ಎಚ್ 1 ಬಿ ಹಾಗೂ ಎಚ್ 4 ವೀಸಾ

ಎಚ್‌-1ಬಿ ವೀಸಾ ಲಾಟರಿ ವ್ಯವಸ್ಥೆಯನ್ನು ಅಮೆರಿಕ ಅಧಿಕೃತವಾಗಿ ರದ್ದುಗೊಳಿಸಿದೆ. ಲಾಟರಿ ವ್ಯವಸ್ಥೆ ಬದಲಾಗಿ ಹೆಚ್ಚಿನ ವೇತನ ಮತ್ತು ಕುಶಲತೆ ಇರುವ ವಿದೇಶಿ ವೃತ್ತಿಪರರಿಗೆ ಹೆಚ್ಚು ಆದ್ಯತೆ ನೀಡಲಿದೆ. ಫೆ.27ರಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಗೃಹ ಭದ್ರತಾ ಇಲಾಖೆ (ಡಿಎಚ್‌ಎಸ್‌) ಘೋಷಿಸಿದೆ. ತಜ್ಞ ಉದ್ಯೋಗಿಗಳು ಸಲ್ಲಿಸುವ ಎಚ್‌-1ಬಿ ವೀಸಾ ಅರ್ಜಿಗಳಿಗೆ ಶ್ರೇಯಾಂಕ ನೀಡಲಾಗುತ್ತದೆ.

ಅಮೆರಿಕದ ಕಾರ್ಮಿಕರ ವೇತನ, ಕೆಲಸದ ಪರಿಸ್ಥಿತಿ ಮತ್ತು ಉದ್ಯೋಗಾವಕಾಶಗಳನ್ನು ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಚ್‌ಎಸ್‌ ಹೇಳಿದೆ. ಅಮೆರಿಕ 2024ರಲ್ಲಿ ನೀಡಿದ ಎಚ್‌-1ಬಿ ವೀಸಾದಲ್ಲಿ ಶೇ.70ರಷ್ಟು ಭಾರತೀಯರೇ ಇದ್ದಾರೆ. ಹೊಸ ನಿಯಮದಿಂದ ಭಾರತೀಯ ಉದ್ಯೋಗಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಅವರು ಚೌಕಾಸಿ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ ಎಂದು ಉದ್ಯೋಗ ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ನವೀಕರಿಸಿದ ಎಚ್‌-1ಬಿ ವೀಸಾ ನಿಯಮಗಳು ಫೆಬ್ರವರಿ 27, 2026 ರಿಂದ ಜಾರಿಗೆ ಬರಲಿವೆ. ಇದು ಹಣಕಾಸು ವರ್ಷ 2027 ರಲ್ಲಿ ನಿಗದಿಪಡಿಸಿರುವ ಎಚ್‌ -1ಬಿ ವೀಸಾ ಮಿತಿಗೂ ಅನ್ವಯವಾಗಲಿದೆ. ಈಗ ಅಮೆರಿಕ ವಾರ್ಷಿಕವಾಗಿ 65,00 ಎಚ್‌-1ಬಿ ವೀಸಾಗಳನ್ನು ನೀಡುತ್ತದೆ.

ಇದಲ್ಲದೆ ಅಮೆರಿಕದ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಪದವಿ ಪಡೆಯುವ ಆಕಾಂಕ್ಷಿಗಳಿಗೆ 20,000 ವೀಸಾಗಳನ್ನು ಕಾಯ್ದಿರಿಸಲಾಗಿದೆ. ಈ ಸಂಖ್ಯಾ ಮಿತಿ ಬದಲಾಗದಿದ್ದರೂ ಅರ್ಜಿದಾರರನ್ನು ವೀಸಾಗೆ ಪರಿಗಣಿಸುವ ವಿಧಾನಗಳು ಮೂಲಭೂತವಾಗಿ ಬದಲಾಗಲಿವೆ.

ಏನಿದು ಎಚ್‌-1ಬಿ ವೀಸಾ? ಅಮೆರಿಕದ ಕಂಪನಿಗಳಲ್ಲಿ ಕೌಶಲ್ಯಯುತ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತ ಕ್ಷೇತ್ರಗಳಲ್ಲಿ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿ ಪಡೆದವರಿಗೆ ಕಡಿಮೆ ವೇತನ ನೀಡಿ ಉದ್ಯೋಗಾವಕಾಶ ನೀಡಲು ಈ ವೀಸಾ ಆಸ್ಪದ ಕಲ್ಪಿಸುತ್ತದೆ.

ಇದು ಕಾರ್ಮಿಕ ರಕ್ಷಣೆಗೆ ಕಡಿಮೆ ಅವಕಾಶ ಹೊಂದಿತ್ತು. ಹೊಸ ನಿಯಮಗಳು ದೇಶೀಯ ಉದ್ಯೋಗಿಗಳಿಗೆ ಹೆಚ್ಚು ಅವಕಾಶ ಕಲ್ಪಿಸುತ್ತದೆ. ವಿದೇಶಿ ಉದ್ಯೋಗಿಗಳು, ವಿಶೇಷವಾಗಿ ಭಾರತೀಯರಿಗೆ ಅವಕಾಶ ಕಡಿಮೆಯಾಗುತ್ತದೆ. ಪ್ರಸ್ತುತ, ಪ್ರತಿ ವರ್ಷ 85,000 ವೀಸಾಗಳ ಮಿತಿ ಇದೆ. ಇದರಲ್ಲಿ 65,000 ಸಾಮಾನ್ಯ ವೀಸಾಗಳು ಮತ್ತು 20,000 ವೀಸಾಗಳು ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದವರಿಗಾಗಿ ಮೀಸಲಿಡಲಾಗಿದೆ.

ಅರ್ಜಿಗಳ ಸಂಖ್ಯೆ ಈ ಮಿತಿಗಿಂತ ಹೆಚ್ಚಾದಾಗ ಕಂಪ್ಯೂಟರ್ ಮೂಲಕ ‘ರಾಂಡಮ್ ಲಾಟರಿ’ ಎತ್ತಿ ಅದೃಷ್ಟವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಕೌಶಲಕ್ಕಿಂತ ‘ಅದೃಷ್ಟ’ಕ್ಕೇ ಪ್ರಾಮುಖ್ಯತೆ ಇತ್ತು. ಭಾರತೀಯರ ಮೇಲೆ ಪರಿಣಾಮವೇನು? ‘‘ವೀಸಾ ಮಂಜೂರು ಮಾಡಲು ಈಗ ಆಯ್ಕೆ ಮಾಡಿಕೊಳ್ಳುವ ಆಯ್ಕೆ ವಿಧಾನಗಳು ಅಮೆರಿಕದ ಉದ್ಯೋಗ ಮಾರುಕಟ್ಟೆಗೆ ಹೆಚ್ಚಿನ ಆರ್ಥಿಕ ಮತ್ತು ವೃತ್ತಿಪರ ಮೌಲ್ಯವನ್ನು ತಂದುಕೊಡುವವರಿಗೆ ವೀಸಾ ನೀಡುವ ಸಾಧ್ಯತೆ ಹೆಚ್ಚಿಸುತ್ತದೆ.

ಇದಲ್ಲದೆ ಉದ್ಯೋಗದಾತರು ವಿವಿಧ ವೇತನ ಮಟ್ಟಕ್ಕೆ ಅನುಸಾರವಾಗಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ,’’ಎಂದು ಉದ್ಯಮ ತಜ್ಞರು ಹೇಳಿದ್ದಾರೆ. ಹೀಗಾಗಿ ಕಡಿಮೆ ವೇತನ ಪಡೆಯುವ ಅಥವಾ ವೃತ್ತಿಜೀವನ ಆರಂಭಿಸುತ್ತಿರುವ ಭಾರತೀಯ ಯುವ ಎಂಜಿನಿಯರ್‌ಗಳಿಗೆ ವೀಸಾ ಸಿಗುವ ಸಾಧ್ಯತೆ ಕಡಿಮೆಯಾಗಬಹುದು. ವೀಸಾ ನೀಡಲು ಈಗ ಅನುಸರಿಸಲಾಗುವ ವಿಧಾನವು ಅಮೆರಿಕದ ಸ್ಪರ್ಧಾತ್ಮಕತೆಯನ್ನು ಬಲಪಡಿಸುತ್ತದೆ.

ಹೆಚ್ಚು ಕುಶಲಿಗಳಿಂದ ಹೆಚ್ಚು ತಜ್ಞತೆ ಹರಿದು ಬರುತ್ತದೆ. ನಮ್ಮ ಕಣ್ಣ ಮುಂದೆಯೇ ಹೆಚ್ಚು ಕುಶಲಿಗಳನ್ನು ನೋಡಿದಾಗ ಅದನ್ನು ನಾವು ಕೂಡ ಕರಗತ ಮಾಡಿಕೊಳ್ಳಬೇಕು ಎಂಬ ಪ್ರವೃತ್ತಿ ಬೆಳೆಯುತ್ತದೆ ಎಂದು ಮ್ಯಾಥ್ಯೂ ಟ್ರಾಗೆಸ್ಸರ್‌ ಪ್ರತಿಪಾದಿಸಿದ್ದಾರೆ.

H1-B ಹೊಸ ರೂಲ್ಸ್‌ನಿಂದ ಭಾರತೀಯರು ಅತಂತ್ರ! ಹೊಸ ಟೆಕ್ಕಿಗಳಿಗೆ ಅಮೆರಿಕ ಬಾಗಿಲು ಬಂದ್‌? ಜಾಸ್ತಿ ಸ್ಯಾಲರಿ ಇದ್ರಷ್ಟೇ ಎಂಟ್ರಿ! ಲಾಟರಿ ರದ್ದುಪಡಿಸಿದ್ದೇಕೆ? ಎಚ್‌-1ಬಿ ವೀಸಾ ಮಂಜೂರು ಮಾಡಲು ಕಳೆದ 18 ವರ್ಷಗಳಿಂದ ಲಾಟರಿ ಆಧಾರಿತ ಪದ್ಧತಿ ಇತ್ತು. ಇದು ವ್ಯಾಪಕವಾಗಿ ದುರುಪಯೋಗವಾಗುತ್ತಿತ್ತು. ಕಡಿಮೆ ಕೌಶಲ ಇರುವವರಿಗೆ ಕಡಿಮೆ ವೇತನ ನೀಡಿ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತಿತ್ತು. ಇದರಿಂದ ಸ್ಥಳೀಯ ಉದ್ಯೋಗಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು.

ಹೀಗಾಗಿ ಇದನ್ನು ರದ್ದುಪಡಿಸಲಾಗಿದೆ ಎಂದು ಡಿಎಚ್‌ಎಸ್‌ ತಿಳಿಸಿದೆ. ‘‘ಅಮೆರಿಕದ ಕಾರ್ಮಿಕರಿಗೆ ಪಾವತಿಸುವ ವೇತನಕ್ಕಿಂತ ಕಡಿಮೆ ವೇತನದಲ್ಲಿವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಬಯಸುವ ಕೆಲವು ಉದ್ಯೋಗದಾತರು ಲಾಟರಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು,’’ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ (ಯುಎಸ್‌ಸಿಐಎಸ್‌) ವಕ್ತಾರ ಮ್ಯಾಥ್ಯೂ ಟ್ರಾಗೆಸ್ಸರ್‌ ಕಿಡಿಕಾರಿದ್ದಾರೆ.”

Leave a comment

Leave a Reply

Your email address will not be published. Required fields are marked *

Related Articles

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಸಂದರ್ಭದಲ್ಲಿ ಮೋದಿ ಸರಕಾರದ ನಿಲುವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಯುದ್ಧದಂತಹ ಪರಿಸ್ಥಿತಿಯ ನಡುವೆ, ಹಿರಿಯ ಕಾಂಗ್ರೆಸ್ ನಾಯಕ...

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 74 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ ಟಿಎಂಸಿಯಲ್ಲಿ ಭುಗಿಲೆದ್ದ ಅಸಮಾಧಾನ

ಕೋಲ್ಕತ್ತಾ: ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ...

ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ  ಸೇರಿದಂತೆ 40ಪ್ರಮುಖರು ಬಿಜೆಪಿಗೆ ಸೇರ್ಪಡೆ

“ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿಯಿರುವಂತೆಯೇ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬಿದ್ದಿದೆ....

ಮಹಿಳೆಯರ ಬಗ್ಗೆ ಅಶ್ಲೀಲ ಹಾಡು ಹಾಡಿದ ರ‍್ಯಾಪರ್ ಬಾದ್‌ಶಾ ಹಣೆಗೆ ನೇರವಾಗಿ ‘ಗುಂಡು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬೆದರಿಕೆ

“ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈಗ ಗಾಯಕ-ರ‍್ಯಾಪರ್ ಬಾದ್‌ಶಾ ಅವರ ಹರಿಯಾಣ ಭಾಷೆಯ ಹಾಡು ‘ಟಟೀರಿ’ ಸುತ್ತಲಿನ...