2026ರಲ್ಲಿ ಫ್ಲಿಪ್‌ಕಾರ್ಟ್, ಫೋನ್ ಪೇ, ಜೆಪ್ಟೋ ಸೇರಿ ಪ್ರಮುಖ ಕಂಪನಿಗಳು ಐಪಿಒ ತೆರೆಯುವ ಸಾಧ್ಯತೆ

70

ಮುಂಬೈ: 2026ರಲ್ಲಿ ಫ್ಲಿಪ್‌ಕಾರ್ಟ್, ಫೋನ್ ಪೇ, ಜೆಪ್ಟೋ ಸೇರಿ ಪ್ರಮುಖ ಕಂಪನಿಗಳು ಐಪಿಒ ತೆರೆಯುವ ಸಾಧ್ಯತೆ ಲೇಟ್-ಸ್ಟೇಜ್ ಫಂಡಿಂಗ್ ಕೊರತೆಯಿಂದಾಗಿ ಷೇರುಪೇಟೆಯತ್ತ ಮುಖ ಮಾಡುತ್ತಿರುವ ಸ್ಟಾರ್ಟ್‌ಅಪ್‌ಗಳು 2025ರಲ್ಲಿ ನವೋದ್ಯಮ ಐಪಿಒಗಳಿಂದ ಸುಮಾರು 40,000 ಕೋಟಿ ರೂ. ಬಂಡವಾಳ ಸಂಗ್ರಹ ಐಪಿಒ ಸರತಿಯಲ್ಲಿವೆ ಫಿನ್‌ಟೆಕ್, ಇ-ಕಾಮರ್ಸ್, ಲಾಜಿಸ್ಟಿಕ್ಸ್ ಮತ್ತು ಗ್ರಾಹಕ ಉತ್ಪನ್ನಗಳ ಕಂಪನಿಗಳು ಸಾಲು ಸಾಲು ನವೋದ್ಯಮ ಕಂಪನಿಗಳು 2026ರಲ್ಲಿ ಐಪಿಒ ತೆರೆಯಲು ಸಜ್ಜಾಗಿವೆ.

ದೇಶೀಯ ನವೋದ್ಯಮ ವಲಯದಲ್ಲಿ ಆರಂಭಿಕ ಸಾರ್ವಜನಿಕ ಷೇರು ಕೊಡುಗೆ (ಐಪಿಒ) ಪರ್ವ ಜೋರಾಗಿದೆ. 2025ರ ಯಶಸ್ವಿ ಐಪಿಒ ವರ್ಷದ ನಂತರ, ಇದೀಗ 2026ರಲ್ಲೂ ಸುಮಾರು 20ಕ್ಕೂ ಹೆಚ್ಚು ಪ್ರಮುಖ ನವೋದ್ಯಮ ಕಂಪನಿಗಳು ಷೇರುಪೇಟೆ ಪ್ರವೇಶಿಸಲು ಸಜ್ಜಾಗಿವೆ. ಬೋಟ್‌ನಿಂದ ಜೆಪ್ಟೋವರೆಗೆ, ಫಿನ್‌ಟೆಕ್, ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳ ಕಂಪನಿಗಳು ಈ ಪಟ್ಟಿಯಲ್ಲಿವೆ.

ಪ್ರಮುಖ ಕಂಪನಿಗಳು ಯಾವುವು? ಮುಂದಿನ ವರ್ಷ ಐಪಿಒ ಮಾರುಕಟ್ಟೆಗೆ ಲಗ್ಗೆ ಇಡಲು ಕಾಯುತ್ತಿರುವ ಪಟ್ಟಿಯಲ್ಲಿ ಭಾರತದ ಅತ್ಯಂತ ಜನಪ್ರಿಯ ಬ್ರ್ಯಾಂಡ್‌ಗಳಿವೆ. ಫೋನ್ ಪೇ, ಫ್ಲಿಪ್‌ಕಾರ್ಟ್, ಜೆಪ್ಟೋ, ಬೋಟ್, ಶಿಪ್‌ರಾಕೆಟ್, ಇನ್‌ಫ್ರಾ.ಮಾರ್ಕೆಟ್, ಆಫ್‌ಬಿಸಿನೆಸ್ ಮತ್ತು ಶಾಡೋಫ್ಯಾಕ್ಸ್‌ನಂತಹ ಕಂಪನಿಗಳು ಸಾರ್ವಜನಿಕ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ಯೋಜನೆ ರೂಪಿಸುತ್ತಿವೆ.

ಐಪಿಒಗಳ ಸಂಖ್ಯೆ ಹೆಚ್ಚಲು ಕಾರಣವೇನು? 2026ರ ಐಪಿಒ ಪೈಪ್‌ಲೈನ್ ಹೆಚ್ಚಲು ಪ್ರಮುಖ ಕಾರಣವೆಂದರೆ ಖಾಸಗಿ ಮಾರುಕಟ್ಟೆಯಲ್ಲಿ ಲೇಟ್ – ಸ್ಟೇಜ್ ಫಂಡಿಂಗ್ (ಅಂತಿಮ ಹಂತದ ಬಂಡವಾಳ ಹೂಡಿಕೆ) ಕುಸಿತ. ದೊಡ್ಡ ಮಟ್ಟಕ್ಕೆ ಬೆಳೆದಿರುವ ಕಂಪನಿಗಳಿಗೆ ಈಗ ಸಾರ್ವಜನಿಕ ಮಾರುಕಟ್ಟೆಯೇ ಬಂಡವಾಳ, ನಗದೀಕರಣ ಮತ್ತು ಮೌಲ್ಯಮಾಪನಕ್ಕೆ ಅತ್ಯಂತ ಸೂಕ್ತ ಮಾರ್ಗವಾಗಿ ಕಾಣುತ್ತಿದೆ.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಕ್ಯಾಪಿಟಲ್‌ಮೈಂಡ್‌ನ ಸಂಸ್ಥಾಪಕ ದೀಪಕ್ ಶೆಣೈ. “ಯಾವಾಗ ಖಾಸಗಿ ವಲಯದಲ್ಲಿ ದೊಡ್ಡ ಮಟ್ಟದ ಬಂಡವಾಳ ಸಿಗುವುದಿಲ್ಲವೋ, ಆಗ ಕಂಪನಿಗಳು ಐಪಿಒ ಕಡೆ ಮುಖಮಾಡುತ್ತವೆ. ಖಾಸಗಿ ಮಾರುಕಟ್ಟೆಗಳು ಸಾರ್ವಜನಿಕ ಮಾರುಕಟ್ಟೆಗಳಿಗಿಂತ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳಬಲ್ಲವು.

ಆದರೆ ಆ ಬಂಡವಾಳದ ಹರಿವು ಕಡಿಮೆಯಾದಾಗ, ಹೂಡಿಕೆದಾರರು ಸಾರ್ವಜನಿಕ ಮಾರುಕಟ್ಟೆಯ ಮೂಲಕ ನಿರ್ಗಮಿಸಲು ಬಯಸುತ್ತಾರೆ,” ಎಂದು ವಿಶ್ಲೇಷಿಸಿದ್ದಾರೆ. ವೆಂಚರ್ ಇಂಟೆಲಿಜೆನ್ಸ್ ದತ್ತಾಂಶದ ಪ್ರಕಾರ, 2025ರಲ್ಲಿ ಲೇಟ್-ಸ್ಟೇಜ್ ಫಂಡಿಂಗ್ ಶೇ. 8ರಷ್ಟು ಕುಸಿದು 7.39 ಬಿಲಿಯನ್ ಡಾಲರ್‌ಗೆ ಇಳಿದಿದೆ. ಇದು ಐಪಿಒಗಳತ್ತ ಕಂಪನಿಗಳು ವಾಲಲು ಮುಖ್ಯ ಕಾರಣವಾಗಿದೆ.

ಹೂಡಿಕೆದಾರರ ವಿಶ್ವಾಸಕ್ಕೆ ಕಾರಣವೇನು? 2021-22ರ ಅವಧಿಗೆ ಹೋಲಿಸಿದರೆ, ಪ್ರಸ್ತುತ ಭಾರತೀಯ ಷೇರುಪೇಟೆಯು ನವೋದ್ಯಮಗಳ ಐಪಿಒಗಳನ್ನು ಉತ್ತಮವಾಗಿ ಸ್ವೀಕರಿಸುತ್ತಿದೆ. 2025ರಲ್ಲಿ ಲಿಸ್ಟ್ ಆದ ಕಂಪನಿಗಳು ಲಾಭದಾಯಕತೆ ಮತ್ತು ಉತ್ತಮ ಆರ್ಥಿಕ ಶಿಸ್ತನ್ನು ಪ್ರದರ್ಶಿಸಿವೆ. 2025ರಲ್ಲಿ 15 ನವೋದ್ಯಮ ಐಪಿಒಗಳು ಸುಮಾರು 40,000 ಕೋಟಿ ರೂ. ಸಂಗ್ರಹಿಸಿವೆ. ಇದು 2024ಕ್ಕಿಂತ ಶೇ. 35ರಷ್ಟು ಹೆಚ್ಚಾಗಿದೆ. ಯಾವ ವಲಯಗಳ ಪ್ರಾಬಲ್ಯವಿದೆ? 2026ರ ಪಟ್ಟಿಯಲ್ಲಿ ಫಿನ್‌ಟೆಕ್, ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ಕಂಪನಿಗಳದ್ದೇ ಸಿಂಹಪಾಲು ಇದೆ.

ಫಿನ್‌ಟೆಕ್ & ಲಾಜಿಸ್ಟಿಕ್ಸ್: ಫೋನ್ ಪೇ, ಪೇಯು, ಶಿಪ್‌ರಾಕೆಟ್, ಶಾಡೋಫ್ಯಾಕ್ಸ್, ಇನ್‌ಕ್ರೆಡ್ ಗ್ರಾಹಕ ಉತ್ಪನ್ನಗಳ ಬ್ರ್ಯಾಂಡ್‌ಗಳು: ಬೋಟ್, ಕ್ಯೂರ್‌ಫುಡ್ಸ್ ಮತ್ತು ಜೆಪ್ಟೋ ಬಿ2ಬಿ & ಸಪ್ಲೈ ಚೈನ್: ಇನ್‌ಫ್ರಾ.ಮಾರ್ಕೆಟ್, ಆಫ್‌ಬಿಸಿನೆಸ್, ಕ್ಯಾಪ್ಟನ್ ಫ್ರೆಶ್, ಝೆಟ್‌ವರ್ಕ್ ಸಾಫ್ಟ್‌ಬ್ಯಾಂಕ್ ಇನ್ವೆಸ್ಟ್‌ಮೆಂಟ್ ಅಡ್ವೈಸರ್ಸ್‌ನ ಸುಮರ್ ಜುನೇಜಾ ಹೇಳುವಂತೆ, “2017-18ರಲ್ಲಿ ನಾವು ಹೂಡಿಕೆ ಆರಂಭಿಸಿದಾಗ ಐಪಿಒ ಎಂಬುದು ಅಪರೂಪವಾಗಿತ್ತು.

ಆದರೆ ಇಂದು ನಾವು ಐಪಿಒ ಮಾರುಕಟ್ಟೆಯೊಂದಿಗೆ ಸ್ಪರ್ಧಿಸುವಂತಾಗಿದೆ.” ಒಟ್ಟಾರೆಯಾಗಿ, ಐಪಿಒಗಳು ಈಗ ಕೇವಲ ಹಣಕಾಸಿನ ಮುಗ್ಗಟ್ಟು ಪರಿಹರಿಸುವ ಮಾರ್ಗವಾಗಿರದೆ, ಕಂಪನಿಗಳ ಬೆಳವಣಿಗೆಯ ಆಯಕಟ್ಟಿನ ಆಯ್ಕೆಯಾಗಿ ಮಾರ್ಪಟ್ಟಿವೆ”

Leave a comment

Leave a Reply

Your email address will not be published. Required fields are marked *

Related Articles

ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ನಾಳೆ ನಡೆಯುವ ಸಾಧ್ಯತೆ

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಜೊತೆ ಸಿದ್ದರಾಮಯ್ಯ,...

ರಾಜ್ಯಾದ್ಯಂತ ಹೋಮ್ ಸ್ಟೇ ನೋಂದಣಿ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ; 500 ಹೋಮ್‌ಸ್ಟೇ ಮಾಲೀಕರಿಂದ ಅರ್ಜಿ ಸಲ್ಲಿಕೆ

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಮ್‌ಸ್ಟೇಗಳ ನೋಂದಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಲ್ಲಿಯವರೆಗೆ 500ಕ್ಕೂ ಹೆಚ್ಚು ಹೋಮ್‌ಸ್ಟೇ...

ಬಿಡದಿ ಟೌನ್‌ಶಿಪ್‌ : ಅನಿತಾ ಕುಮಾರಸ್ವಾಮಿ, ನಿಖಿಲ್‌ಗೆ ಸೇರಿದ ಭೂಮಿಗೂ ಅಧಿಸೂಚನೆ ಹೊರಡಿಸಿದ ರಾಜ್ಯ ಸರಕಾರ

ಬೆಂಗಳೂರು: ಬಿಡದಿ ಟೌನ್ ಶಿಪ್ ಜಟಾಪಟಿ ಮತ್ತಷ್ಟು ತೀವ್ರಗೊಂಡಿದ್ದು, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತೀವ್ರ...

ಹೊಸಮುಖಗಳಿಗೆ ಆದ್ಯತೆ ನೂತನ ಸಚಿವರ ಪರಿಷ್ಕೃತ ಪಟ್ಟಿ ಹೈಕಮಾಂಡ್ ಬಳಿ; ಸಿಎಂ-ಮಾಜಿ ಸಿಎಂ ಬೆಂಗಳೂರಿಗೆ ವಾಪಸ್

ದೆಹಲಿದಲ್ಲಿ ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ಮಹತ್ವದ ಸಭೆಗಳನ್ನು ನಡೆಸಿದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ...