ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ವತಿಯಿಂದ ಬಡಜನರ ಸೇವೆ ಸಹಾಯಾರ್ಥ ಆಂಬುಲೆನ್ಸ್ ಲೋಕಾರ್ಪಣೆ

41

ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ಮಂಗಳೂರು ವತಿಯಿಂದ ಚಿತ್ರಾಪುರ ದುರ್ಗಪರಮೇಶ್ವರಿ ದೇವಸ್ಥಾನದಿಂದ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಪರಮಪಾದದಿಂದ ಮೂಲ ಪಾದದೆಡೆಗೆ ಭಕ್ತಿ ಧರ್ಮದ ನಡೆ ಪಾದಯಾತ್ರೆ ಕಾರ್ಯಕ್ರಮ ನಡೆಯಿತು

ಸಹಸ್ರಾರು ಭಕ್ತರು ಪಾದಯಾತ್ರೆ ಮೂಲಕ ನಡೆಸಿದ ಕೈಂಕರ್ಯ ಸಹಸ್ರಾರು ಮನಸ್ಸು ಗಳನ್ನು ಒಂದು ಗೂಡಿಸುವ ಕ್ಲಾಘನೀಯ ಕಾರ್ಯವಾಗಿದೆ. ಸಮಾಜದ ಅವಶ್ಯಕತೆಗೆ ಅನುಗುಣವಾಗಿ ಆಂಬುಲೆನ್ಸ್ ಸೇವೆ ಸಮಾಜ ಕಟ್ಟುವ ಕೆಲಸವಾಗಿದೆ ಎಂದು ಕೇಮಾರು ಸಾಧನಾಶ್ರಮದ ಶ್ರೀ ಈಶ ವಿಠಲದಾಸ ವಿಠಲ ದಾಸ ಸ್ವಾಮೀಜಿ ಹೇಳಿದರು.

ನಿರಂತರ ಸಮಾಜ ಸೇವೆ ಮಾಡುವ ಮೂಲಕ ಮಂಜಣ್ಣ ಬ್ರಿಗೇಡ್ ಅನುಕರಣೀಯ ಸೇವೆ ಮಾಡಿದೆ. ಸಮಾಜ ಕಟ್ಟುನ ಕಾರ್ಯದೊಂದಿಗೆ ಅಶಕ್ತರಿಗೆ ನೆರವು, ಆಂಬುಲೆನ್ಸ್ ಕೊಡುಗೆ ಶ್ರೇಷ್ಠವಾದುದು.ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಶ್ರೀಕ್ಷೇತ್ರ ಬಪ್ಪನಾಡು ದೇವಳದ ಹೊರಾಂಗಣದಲ್ಲಿ ಭಾನುವಾರ ಮಂಜಣ್ಣ ಬ್ರಿಗೇಡ್ ವತಿಯಿಂದ ನಡೆದ ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ ದಿಂದ ಬಪ್ಪನಾಡು ದೇವಳದವರೆಗೆ ಸಾಗಿ ಬಂದ ಸಹಸ್ರಾರು ಭಕ್ತರ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿಅವರು ಮಾತನಾಡಿದರು
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಭಕ್ತಿ ಪ್ರೇಮದ ಸಂಕೀರ್ತನೆಗೆ ಭಗವಂತ ಒಲಿಯುತ್ತಾನೆ.ಧಾರ್ಮಿಕ ಧರ್ಮ, ನಂಬಿಕೆಯ ಕಾರ್ಯ ಶ್ಲಾಘನೀಯ ಎಂದರು.

ಬಪ್ಪನಾಡು ಕ್ಷೇತ್ರದ ಆನುವಂಶಿಕ
. ಮೊಕ್ಷೇಸರ ಹಾಗೂ ಮೂಲ್ಕಿ ಸೀಮೆ ಅರಸರಾದ ಎಂ.ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿ ಶುಭ ಹಾರೈಕೆ ನುಡಿದರು.

ಬಿಜೆಪಿ ಜಿಲ್ಲಾ ಬಿಜೆಪಿ ಪೂರ್ವಾಧ್ಯಕ್ಷ ಸುದರ್ಶನ್, ಗೀತಾ ವೇಣುಗೋಪಾಲ್ ಇಡ್ಕ, ಕಸ್ತೂರಿ ಪಂಜ, ಗಣೇಶ್ ಹೊಸಬೆಟ್ಟು, ಬಾಲಕೃಷ್ಣ ಶೆಟ್ಟಿ ಹೊಸಬೆಟ್ಟುಗುತ್ತು,ಉಡುಪಿ ಶಿವಕುಮಾರ್ ಕರ್ಜೆ
ರತನ್, ಜಯಪ್ರಕಾಶ್ ವಾಮಂಜೂರು, ನಯನಾ ಕೋಟ್ಯಾನ್, ಧರ್ಮೇಂದ್ರ ಗಣೇಶ್ ಪುರ, ಕೇಶವ ಹೊಸಬೆಟ್ಟು ಲೋಕೇಶ್, ಮಂಜಣ್ಣ ಬ್ರಿಗೇಡ್ ಅಧ್ಯಕ್ಷ ರಂಜಿತ್ ಜೆ.ಶೆಟ್ಟಿ ವಸಂತ ಕುಲಾಲ್ ಉಪಸ್ಥಿತರಿದ್ದರು

ಶಾಸಕ ಉಮಾನಾಥ ಕೋಟ್ಯಾನ್ ಪಾದಯಾತ್ರೆಯಲ್ಲಿ ಭಾಗವಹಿಸಿ, ಶುಭಹಾರೈಸಿದರು. ಅನುರಾಗ್ ಕಾರ್ಯಕ್ರಮ ನಿರ್ವಹಿಸಿದರು.ಈ ಸಂದರ್ಭದಲ್ಲಿ
ದಿ.ವೇಣುಗೋಪಾಲ್ಇಡ್ಯ ಸ್ಮರಣಾರ್ಥ ಮಂಜಣ್ಣ ಬ್ರಿಗೇಡ್ ವತಿಯಿಂದ ಸಾರ್ವಜನಿಕ ಸೇವೆಗಾಗಿ ಆಂಬ್ಯುಲೆನ್ಸ್ ಕೊಡುಗೆ ನೀಡಲಾಯಿತು

Leave a comment

Leave a Reply

Your email address will not be published. Required fields are marked *

Related Articles

ಬಿಪಿಎಲ್ ಕಾರ್ಡ್ ವಾರ್ಷಿಕ ಆದಾಯದ ಮಿತಿ, 3 ಲಕ್ಷ ನಿಗದಿಗೆ ಕ್ರಮ- ಸಚಿವ ಕೆ ಹೆಚ್ ಮುನಿಯಪ್ಪ

ಬೆಂಗಳೂರು: ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯದ ಮಿತಿಯನ್ನು 3 ಲಕ್ಷ ರೂಗೆ ಹೆಚ್ಚಿಸಲು ಕ್ರಮ...

ಮುಲ್ಲಾಗಳಿಗೂ ನೀಟ್ ಪರೀಕ್ಷೆಗೂ ಸಂಬಂಧವೇನು ಪ್ರಶ್ನಿಸಿದ ಬಿಜೆಪಿ ಶಾಸಕ ಸಿಟಿ ರವಿ ವಿರುದ್ಧ ಎಫ್ ಐ ಆರ್ ದಾಖಲು

ಬೆಂಗಳೂರು: ದೇಶಾದ್ಯಂತ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ನಡೆದ ನೀಟ್ ಪತ್ರಿಕೆ ಸೋರಿಕೆ ಪ್ರತಿಭಟನೆಗಳ ಕುರಿತು ದ್ವೇಷ...

ಭೂ ಕಬಳಿಕೆ ಪ್ರಕರಣ ಆರ್ಟ್ ಆಫ್ ಲಿವಿಂಗ್ ನ ಭೂ ಅತಿಕ್ರಮಣ ತನಿಖೆಗೆ ಎಸ್ ಐಟಿ ರಚಿಸಿದ ಕರ್ನಾಟಕ ರಾಜ್ಯ ಸರಕಾರ

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲಿಪುರ ಗ್ರಾಮದಲ್ಲಿ ಶ್ರೀ ಶ್ರೀ ರವಿಶಂಕರ್ ಅವರ ದಿ ಆರ್ಟ್...

ಅಕ್ರಮ ಮರಳು ಗಣಿಗಾರಿಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು, ಉಪ ಆಯುಕ್ತರು ಮತ್ತು ತಹಶೀಲ್ದಾರ್‌ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಬಾಗಲಕೋಟೆಯಾದ್ಯಂತ ಅಕ್ರಮ ಮರಳು ಗಣಿಗಾರಿಕೆ ನಡೆದಿರುವುದು ಪರಿಶೀಲನೆಯಲ್ಲಿ ಕಂಡುಬಂದ ಬೆನ್ನಲ್ಲೇ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು,...